ಸಿಕ್ಕಿಮೀಸ್ ನೇಪಾಳಿಗಳನ್ನು ವಲಸಿಗರು ಎಂದು ಉಲ್ಲೇಖ; ಸುಪ್ರೀಂಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಕೇಂದ್ರ

|

Updated on: Feb 06, 2023 | 8:48 PM

"ಭಾರತ ಸರ್ಕಾರ ಸಿಕ್ಕಿಮೀಸ್ ಗುರುತನ್ನು ರಕ್ಷಿಸುವ ಸಂವಿಧಾನದ 371F ನ ಪಾವಿತ್ರ್ಯತೆಯ ಬಗ್ಗೆ ತನ್ನ ನಿಲುವನ್ನು ಪುನರುಚ್ಚರಿಸಿದೆ, ಅದನ್ನು ದುರ್ಬಲಗೊಳಿಸಬಾರದು. ಇದಲ್ಲದೆ, ನೇಪಾಳಿಗಳಂತೆ ಸಿಕ್ಕಿಂನಲ್ಲಿ ನೆಲೆಸಿರುವ ವಿದೇಶಿ ಮೂಲದ ವ್ಯಕ್ತಿಗಳ ಬಗ್ಗೆ ಹೇಳಿದ ಆದೇಶದಲ್ಲಿ ಗಮನಿಸಬೇಕು

ಸಿಕ್ಕಿಮೀಸ್ ನೇಪಾಳಿಗಳನ್ನು ವಲಸಿಗರು ಎಂದು ಉಲ್ಲೇಖ; ಸುಪ್ರೀಂಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಕೇಂದ್ರ
ಸುಪ್ರೀಂಕೋರ್ಟ್
Follow us on

ದೆಹಲಿ: ಸಿಕ್ಕಿಮೀಸ್ ನೇಪಾಳಿಗಳನ್ನು (Sikkimese Nepalis) “ವಲಸಿಗರು” ಎಂದು ಉಲ್ಲೇಖಿಸಿರುವ ಕೆಲವು ಅವಲೋಕನಗಳ ವಿರುದ್ಧ ಗೃಹ ವ್ಯವಹಾರಗಳ ಸಚಿವಾಲಯ (Ministry of Home Affairs) ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ (Supreme Court) ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದೆ. ಸಿಕ್ಕಿಮೀಸ್ ಗುರುತನ್ನು ಕಾಪಾಡುವ ಸಂವಿಧಾನದ 371 ಎಫ್‌ ಬಗ್ಗೆ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ತನ್ನ ನಿಲುವನ್ನು ಸಲ್ಲಿಸಿದೆ ಎಂದು ಸರಣಿ ಟ್ವೀಟ್‌ಗಳಲ್ಲಿ ಕೇಂದ್ರ ಗೃಹ ಸಚಿವರ ಕಚೇರಿ ತಿಳಿಸಿದೆ. 2023 ರ ಜನವರಿ 13 ರ ಇತ್ತೀಚಿನ ತೀರ್ಪಿನಲ್ಲಿ ಕೆಲವು ಅವಲೋಕನಗಳು ಮತ್ತು ನಿರ್ದೇಶನಗಳ ವಿರುದ್ಧ ಗೃಹ ವ್ಯವಹಾರಗಳ ಸಚಿವಾಲಯ (MHA) ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದೆ. ಅಸೋಸಿಯೇಷನ್ ಆಫ್ ಓಲ್ಡ್ ಸೆಟಲ್ಸ್ ಆಫ್ ಸಿಕ್ಕಿಂ ಮತ್ತು ಅದರ್ಸ್ 2013 ಮತ್ತು 2021ರಲ್ಲಿ ಸುಪ್ರೀಂಗೆ ಎರಡು ಅರ್ಜಿಗಳನ್ನು ಸಲ್ಲಿಸಿತ್ತು.

“ಭಾರತ ಸರ್ಕಾರ ಸಿಕ್ಕಿಮೀಸ್ ಗುರುತನ್ನು ರಕ್ಷಿಸುವ ಸಂವಿಧಾನದ 371F ನ ಪಾವಿತ್ರ್ಯತೆಯ ಬಗ್ಗೆ ತನ್ನ ನಿಲುವನ್ನು ಪುನರುಚ್ಚರಿಸಿದೆ, ಅದನ್ನು ದುರ್ಬಲಗೊಳಿಸಬಾರದು. ಇದಲ್ಲದೆ, ನೇಪಾಳಿಗಳಂತೆ ಸಿಕ್ಕಿಂನಲ್ಲಿ ನೆಲೆಸಿರುವ ವಿದೇಶಿ ಮೂಲದ ವ್ಯಕ್ತಿಗಳ ಬಗ್ಗೆ ಹೇಳಿದ ಆದೇಶದಲ್ಲಿ ಗಮನಿಸಬೇಕು. ಹೇಳಿರುವ ವ್ಯಕ್ತಿಗಳು ನೇಪಾಳಿ ಮೂಲದ ಸಿಕ್ಕಿಮೀಸ್ ಆಗಿರುವುದರಿಂದ ಪರಿಶೀಲಿಸಬೇಕು ಎಂದು ಟ್ವೀಟ್ ಹೇಳಿದೆ.
ರಾಜ್ಯದ ಎಲ್ಲಾ ಹಳೆಯ ವಸಾಹತುಗಾರರಿಗೆ ಆದಾಯ ತೆರಿಗೆ ವಿನಾಯಿತಿಯನ್ನು ವಿಸ್ತರಿಸುವ ಸಂದರ್ಭದಲ್ಲಿ ಸಿಕ್ಕಿಮೀಸ್ ನೇಪಾಳಿಗಳನ್ನು “ವಲಸಿಗರು” ಎಂದು ಉಲ್ಲೇಖಿಸುವ ಸುಪ್ರೀಂಕೋರ್ಟ್ ಅಭಿಪ್ರಾಯದ ಬಗ್ಗೆ ಮೇಲೆ ಸಿಕ್ಕಿಂನಲ್ಲಿ ಪ್ರತಿಭಟನೆಗಳು ನಡೆದಿದ್ದು ಅದರ ನಡುವೇಯೇ ಗೃಹ ವ್ಯವಹಾರಗಳ ಸಚಿವಾಲಯದ ಈ ಕ್ರಮ ಬಂದಿದೆ.

ಇದನ್ನೂ ಓದಿ: ನ್ಯಾಯಾಧೀಶರಾಗಿ ಪದೋನ್ನತಿ; ವಕೀಲೆ ಗೌರಿಯವರ ನೇಮಕದ ವಿರುದ್ಧದ ಅರ್ಜಿ ನಾಳೆ ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆ

ಭಾನುವಾರ, ರಾಜ್ಯ ಬಿಜೆಪಿ ಅಧ್ಯಕ್ಷ ಡಿ ಆರ್ ಥಾಪಾ ನೇತೃತ್ವದ ಸಿಕ್ಕಿಂನ ನಿಯೋಗವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು ಕೇಂದ್ರ ಸರ್ಕಾರವು “ಸಿಕ್ಕಿಮೀಸ್” ಪದದ ಬಗ್ಗೆ ಸಾಂವಿಧಾನಿಕ ನಿಬಂಧನೆಗಳಿಗೆ ಅನುಗುಣವಾಗಿ ಸ್ಪಷ್ಟತೆ ಪಡೆಯಲು ಸುಪ್ರೀಂಕೋರ್ಟ್‌ಗೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲಿದೆ ಎಂದು ಶಾ ಭರವಸೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ
ಸಿಕ್ಕಿಂ ಸಮುದಾಯದ ಭಾವನೆಗಳನ್ನು ಗೌರವಿಸಲಾಗುವುದು ಎಂದು ಶಾ ನಿಯೋಗಕ್ಕೆ ತಿಳಿಸಿದರು.

ಭಾನುವಾರ, ರಾಜ್ಯ ಬಿಜೆಪಿ ಅಧ್ಯಕ್ಷ ಡಿ ಆರ್ ಥಾಪಾ ನೇತೃತ್ವದ ಸಿಕ್ಕಿಂನ ನಿಯೋಗವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿತು, ಅವರು ಕೇಂದ್ರ ಸರ್ಕಾರವು “ಸಿಕ್ಕಿಮೀಸ್” ಪದದ ಬಗ್ಗೆ ಸ್ಪಷ್ಟತೆ ಪಡೆಯಲು ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲಿದೆ. ಸಿಕ್ಕಿಂನ ಜನರು ಭಾರತದ ಅವಿಭಾಜ್ಯ ಮತ್ತು ಅತ್ಯಗತ್ಯ ಭಾಗವಾಗಿದ್ದಾರೆ. ಸಿಕ್ಕಿಂನ ಜನರಿಗೆ ಸಾಂವಿಧಾನಿಕ ನಿಬಂಧನೆಗಳನ್ನು ರಕ್ಷಿಸಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ