AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದಲಾಗಲಿದೆ ಮಹಿಳೆಯರ ಮದುವೆ ವಯಸ್ಸಿನ ಮಿತಿ! ಮೋದಿ ಸರ್ಕಾರದಿಂದ ಹೊಸ ಕಾನೂನು

ದೆಹಲಿ: ಬದಲಾಗುತ್ತಿರುವ ಭಾರತದಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಅವಕಾಶಗಳು ಸಿಗಬೇಕೆಂಬ ಕೂಗು ಹೆಚ್ಚಾಗುತ್ತಿದೆ. ಇದರ ಜೊತೆಗೆ ಮಹಿಳೆಯರ ಮದುವೆ ವಯಸ್ಸಿನ ಮಿತಿ ಹೆಚ್ಚಿಸಲು ಒತ್ತಡವೂ ಹೆಚ್ಚಾಗ್ತಿದೆ. ಹೀಗಾಗಿ ಮಹಿಳೆಯರ ಮದುವೆ ವಯಸ್ಸಿನ ಮಿತಿ ಏರಿಕೆಗೆ ಮೋದಿ ಸರ್ಕಾರ ನಿರ್ಧರಿಸಿದ್ದು, ಸ್ವಾತಂತ್ರೋತ್ಸವದ ದಿನದಂದೇ ಈ ಬಗ್ಗೆ ಸುಳಿವು ಸಿಕ್ಕಿದೆ. ದೇಶ ಬದಲಾಗಬೇಕು ಅಂದ್ರೆ ಮಹಿಳೆಯರಿಗೆ ದೇಶದಲ್ಲಿ ಸಮಾನ ಹಕ್ಕುಗಳಿರಬೇಕು.‌ ಆಗ ಮಾತ್ರ ದೇಶದಲ್ಲಿ ಅಭಿವೃದ್ಧಿ ಸಾಧ್ಯ.ಈ ಕಾರಣಕ್ಕೆ ಭಾರತದಲ್ಲೂ ಮಹಿಳೆಯರ ಅಭ್ಯುದಯಕ್ಕೆ ಸಾಕಷ್ಟು ಯೋಜನೆಗಳನ್ನ ರೂಪಿಸಿದರೂ ಸಮಾನತೆ ಸಾಧಿಸುವುದಕ್ಕೆ ಸಾಧ್ಯವಾಗ್ತಿಲ್ಲ. […]

ಬದಲಾಗಲಿದೆ ಮಹಿಳೆಯರ ಮದುವೆ ವಯಸ್ಸಿನ ಮಿತಿ! ಮೋದಿ ಸರ್ಕಾರದಿಂದ ಹೊಸ ಕಾನೂನು
ಆಯೇಷಾ ಬಾನು
|

Updated on:Aug 16, 2020 | 7:42 AM

Share

ದೆಹಲಿ: ಬದಲಾಗುತ್ತಿರುವ ಭಾರತದಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಅವಕಾಶಗಳು ಸಿಗಬೇಕೆಂಬ ಕೂಗು ಹೆಚ್ಚಾಗುತ್ತಿದೆ. ಇದರ ಜೊತೆಗೆ ಮಹಿಳೆಯರ ಮದುವೆ ವಯಸ್ಸಿನ ಮಿತಿ ಹೆಚ್ಚಿಸಲು ಒತ್ತಡವೂ ಹೆಚ್ಚಾಗ್ತಿದೆ. ಹೀಗಾಗಿ ಮಹಿಳೆಯರ ಮದುವೆ ವಯಸ್ಸಿನ ಮಿತಿ ಏರಿಕೆಗೆ ಮೋದಿ ಸರ್ಕಾರ ನಿರ್ಧರಿಸಿದ್ದು, ಸ್ವಾತಂತ್ರೋತ್ಸವದ ದಿನದಂದೇ ಈ ಬಗ್ಗೆ ಸುಳಿವು ಸಿಕ್ಕಿದೆ.

ದೇಶ ಬದಲಾಗಬೇಕು ಅಂದ್ರೆ ಮಹಿಳೆಯರಿಗೆ ದೇಶದಲ್ಲಿ ಸಮಾನ ಹಕ್ಕುಗಳಿರಬೇಕು.‌ ಆಗ ಮಾತ್ರ ದೇಶದಲ್ಲಿ ಅಭಿವೃದ್ಧಿ ಸಾಧ್ಯ.ಈ ಕಾರಣಕ್ಕೆ ಭಾರತದಲ್ಲೂ ಮಹಿಳೆಯರ ಅಭ್ಯುದಯಕ್ಕೆ ಸಾಕಷ್ಟು ಯೋಜನೆಗಳನ್ನ ರೂಪಿಸಿದರೂ ಸಮಾನತೆ ಸಾಧಿಸುವುದಕ್ಕೆ ಸಾಧ್ಯವಾಗ್ತಿಲ್ಲ. ಆದರೆ ಇದೀಗ ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರದಿಂದ ಹೊಸ ಕಾನೂನು ತರಲು ಸಿದ್ಧತೆ ನಡೆಸಿದೆ. ಈ ಬಗ್ಗೆ ಸ್ವತಃ ಪ್ರಧಾನಿಯೇ ಸುಳಿವು ನೀಡಿದ್ದಾರೆ.

ಬದಲಾಗಲಿದೆ ಮಹಿಳೆಯರ ಮದುವೆ ವಯಸ್ಸಿನ ಮಿತಿ! ಹೆಣ್ಣುಮಕ್ಕಳ ಮದುವೆಗೆ ಕನಿಷ್ಠ ವಯಸ್ಸಿನ ಮಿತಿ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ ಕಾನೂನು ತರುವ ಸುಳಿವನ್ನ ಪ್ರಧಾನಿ ಮೋದಿ ನಿನ್ನೆಯ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ನೀಡಿದ್ದಾರೆ. ಮದುವೆಗೆ ಮಹಿಳೆಯರ ಕನಿಷ್ಠ ವಯಸ್ಸಿನ ಮಿತಿ ಮರು ಪರಿಶೀಲಿಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನ ರಚಿಸಿದ್ದು, ಸಮಿತಿ ವರದಿ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಮೋದಿ ಭಾಷಣದಲ್ಲಿ ತಿಳಿಸಿದ್ದಾರೆ. ಹಾಗಾದರೆ ಏನಿದು ಕನಿಷ್ಠ ವಯಸ್ಸಿನ ಮಿತಿ? ಅಷ್ಟಕ್ಕೂ ಯಾವ ಕಾರಣಕ್ಕಾಗಿ ಈ ಮರು ಪರಿಶೀಲನೆ ಅನ್ನೋದನ್ನ ಡೀಟೇಲ್ ಆಗಿ ನೋಡೋದಾದರೆ.

ಕ್ರಾಂತಿಕಾರಿ ಬದಲಾವಣೆ! ಭಾರತದಲ್ಲೀಗ ಮದುವೆಯಾಗಲು ಹೆಣ್ಣುಮಕ್ಕಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕೆಂಬ ನಿಯಮ ಇದೆ. ಈಕಾಯ್ದೆ 1978ರಿಂದ ಜಾರಿಯಲ್ಲಿದ್ದು ಇದಕ್ಕೂ ಮುನ್ನ 15 ವರ್ಷಗಳ ವಯೋಮಿತ ನಿಗದಿ ಮಾಡಲಾಗಿತ್ತು. ಆದರೆ ಈಗ ವಯಸ್ಸಿನ ಮಿತಿ ಏರಿಕೆ ಮಾಡಲು ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ನೀತಿ ಆಯೋಗದ ಸದಸ್ಯ ಡಾ. ವಿನೋದ್ ಪೌಲ್ ಸೇರಿದಂತೆ ಮತ್ತಿತರರು ಇದ್ದಾರೆ. ಈ ಸಮಿತಿ ತಾಯಿ ಆರೋಗ್ಯದ ಮೇಲೆ ಮದುವೆಯಿಂದಾಗುವ ಪರಿಣಾಮದ ಬಗ್ಗೆ ಅಧ್ಯಯನವನ್ನೂ ಕೈಗೊಂಡಿದೆ. ವರದಿಯಲ್ಲಿ ಪೌಷ್ಠಿಕತೆ ವಿಚಾರವನ್ನು ಪರಿಗಣನೆಗೆ ತೆಗೆದುಕೊಂಡು ಅಂತಿಮ ರೂಪರೇಷೆ ಸಿದ್ಧವಾಗಿದೆ. ಇದರ ಜತೆಗೆ ಮಹಿಳೆಯರ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸು ಮಾಡಿದೆ ಎನ್ನಲಾಗಿದೆ.

ಇಷ್ಟೆಲ್ಲದರ ಮಧ್ಯೆ ಈಗಾಗಲೇ ಈ ಸಮಿತಿ ಮದುವೆ ವಯಸ್ಸನ್ನು 21ಕ್ಕೆ ಏರಿಸುವ ಕುರಿತು ಪ್ರಸ್ತಾವನೆಯನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಲ್ಲಿಸಿದೆ ಎನ್ನಲಾಗ್ತಿದೆ. ಇದನ್ನೇ ಮೋದಿ ಸರ್ಕಾರ ಪರಿಗಣಿಸುವ ಸಾಧ್ಯತೆ ದಟ್ಟವಾಗಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ ಎನ್ನಲಾಗ್ತಿದೆ. ಆ ನಂತರ ಇದು ಕಾನೂನಿನ ರೂಪ ಪಡೆಯಲಿದೆ. ಒಟ್ನಲ್ಲಿ ಮೋದಿ ಸರ್ಕಾರದಿಂದ ದೇಶದಲ್ಲಿ ಮತ್ತೊಂದು ಕ್ರಾಂತಿಕಾರಿ ಬದಲಾವಣೆ ಬರಲಿದ್ದು, ಈ ಬಗ್ಗೆ ಸ್ವಾತಂತ್ರೋತ್ಸವದ ದಿನವೇ ಪ್ರಧಾನಿ ಮೋದಿ ಅವರು ಸುಳಿವು ನೀಡಿರುವುದು ವಿಶೇಷ.

Published On - 7:41 am, Sun, 16 August 20