Monsoon Session: ಜುಲೈ 20ರಿಂದ ಆಗಸ್ಟ್ 11ರವರೆಗೆ ಸಂಸತ್​ನ ಮುಂಗಾರು ಅಧಿವೇಶನ; ಸಚಿವ ಪ್ರಹ್ಲಾದ್ ಜೋಶಿ

ಜುಲೈ 20ರಿಂದ ಆಗಸ್ಟ್ 11ರವರೆಗೆ ಸಂಸತ್​ನ ಮುಂಗಾರು ಅಧಿವೇಶನ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

Monsoon Session: ಜುಲೈ 20ರಿಂದ ಆಗಸ್ಟ್ 11ರವರೆಗೆ ಸಂಸತ್​ನ ಮುಂಗಾರು ಅಧಿವೇಶನ; ಸಚಿವ ಪ್ರಹ್ಲಾದ್ ಜೋಶಿ
ಪ್ರಹ್ಲಾಧ್​ ಜೋಶಿ
Updated By: ಕಿರಣ್ ಹನುಮಂತ್​ ಮಾದಾರ್

Updated on: Jul 01, 2023 | 1:30 PM

ದೆಹಲಿ: ಜುಲೈ 20ರಿಂದ ಆಗಸ್ಟ್ 11ರವರೆಗೆ ಸಂಸತ್​ನ ಮುಂಗಾರು ಅಧಿವೇಶನ(Monsoon session) ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಜೋಶಿ ಅವರು “ಸಂಸತ್ತಿನ ಮುಂಗಾರು ಅಧಿವೇಶನ 2023 ಜುಲೈ 20 ರಿಂದ ಪ್ರಾರಂಭವಾಗಿ, ಆಗಸ್ಟ್ 11 ರವರೆಗೆ ನಡೆಯುತ್ತದೆ. ಇನ್ನು ಮಾನ್ಸೂನ್ ಅಧಿವೇಶನದಲ್ಲಿ ಶಾಸಕಾಂಗ ವ್ಯವಹಾರ ಮತ್ತು ಇತರ ವಿಷಯಗಳ ಕುರಿತು ಚರ್ಚೆಗಳಿಗೆ ಕೊಡುಗೆ ನೀಡಲು ಎಲ್ಲಾ ಪಕ್ಷಗಳನ್ನು ಒತ್ತಾಯಿಸಿದ್ದಾರೆ

ಈ ಅಧಿವೇಶನವು 23 ದಿನಗಳ ಕಾಲ ನಡೆಯಲಿದ್ದು, 17 ಸಭೆಗಳನ್ನು ಹೊಂದಿರುತ್ತದೆ ಎಂದು ಹಿಂದಿಯಲ್ಲಿ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಹೊಸ ಸಂಸತ್ತಿನ ಕಟ್ಟಡವು ಮುಂಬರುವ ಮುಂಗಾರು ಅಧಿವೇಶನಕ್ಕೆ ಆತಿಥ್ಯ ವಹಿಸಲಿದೆ.

Published On - 1:13 pm, Sat, 1 July 23