1962ರಲ್ಲೇ ಚೀನಾ ಭಾರತದ ಈ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು, ಈಗ ಉದ್ದೇಶ ಪೂರ್ವಕವಾಗಿ ತಪ್ಪು ಮಾಹಿತಿ ಹರಡಲಾಗುತ್ತಿದೆ: ಜೈಶಂಕರ್

|

Updated on: Jan 29, 2023 | 11:25 AM

ಜವಾಹರಲಾಲ್​ ನೆಹರೂ ಅವರು ಪ್ರಧಾನಿಯಾಗಿದ್ದಾಗಲೇ  ಚೀನಾ ಆಕ್ರಮಿಸಿಕೊಂಡಿದ್ದ ಭೂಮಿಯನ್ನು ಈಗ ಆಕ್ರಮಿಸಿಕೊಂಡಿದೆ ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್ ಹೇಳಿದ್ದಾರೆ.

1962ರಲ್ಲೇ ಚೀನಾ ಭಾರತದ ಈ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು, ಈಗ ಉದ್ದೇಶ ಪೂರ್ವಕವಾಗಿ ತಪ್ಪು ಮಾಹಿತಿ ಹರಡಲಾಗುತ್ತಿದೆ: ಜೈಶಂಕರ್
ಎಸ್ ಜೈಶಂಕರ್
Follow us on

ಜವಾಹರಲಾಲ್​ ನೆಹರೂ ಅವರು ಪ್ರಧಾನಿಯಾಗಿದ್ದಾಗಲೇ  ಚೀನಾ ಆಕ್ರಮಿಸಿಕೊಂಡಿದ್ದ ಭೂಮಿಯನ್ನು ಈಗ ಆಕ್ರಮಿಸಿಕೊಂಡಿದೆ ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಚೀನಾ ವಿಷಯದ ಬಗ್ಗೆ ಕೆಲವರು ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದಿದ್ದಾರೆ. ಇತ್ತೀಚೆಗೆ ಲಡಾಖ್‌ನಲ್ಲಿ ಭೂಪ್ರದೇಶವನ್ನು ಕಳೆದುಕೊಂಡಿರುವ ಬಗ್ಗೆ ಅಧಿಕೃತ ವರದಿಯ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

1962ರಲ್ಲಿ ಚೀನಾ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿತ್ತು, ಆದರೆ ಕೆಲವರು ಇತ್ತೀಚೆಗೆ ಅದು ನಡೆದಿದೆ ಎಂದು ಹೇಳುತ್ತಾರೆ. ಜೈಶಂಕರ್ ಅವರು ಪುಣೆಯಲ್ಲಿ ತಮ್ಮ ‘ದಿ ಇಂಡಿಯಾ ವೇ’ ಪುಸ್ತಕದ ಮರಾಠಿ ಅನುವಾದವಾದ ‘ಭಾರತ್ ಮಾರ್ಗ’ ಬಿಡುಗಡೆ ಸಮಾರಂಭದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯ ಹೇಳಿದರು.

ಭಾರತ ಮತ್ತು ಪಾಕಿಸ್ತಾನ ನಡುವಿನ ಸಿಂಧೂ ನದಿ ನೀರು ಒಪ್ಪಂದಕ್ಕೆ (ಐಡಬ್ಲ್ಯೂಟಿ) ಸಂಬಂಧಿಸಿದಂತೆ ಎಸ್ ಜೈಶಂಕರ್ ಮಾತನಾಡಿ, ಇದು ತಾಂತ್ರಿಕ ವಿಷಯವಾಗಿದ್ದು, ಉಭಯ ದೇಶಗಳ ಸಿಂಧೂ ಆಯುಕ್ತರು ಈ ವಿಷಯದ ಬಗ್ಗೆ ಪರಸ್ಪರ ಮಾತನಾಡಲಿದ್ದಾರೆ ಎಂದು ಹೇಳಿದರು.

ಮತ್ತಷ್ಟು ಓದಿ: ಲಡಾಖ್​​ನಲ್ಲಿ ಭಾರತ-ಚೀನಾ ಸೇನಾಪಡೆ ನಡುವೆ ಮತ್ತಷ್ಟು ಸಂಘರ್ಷ ಸಾಧ್ಯತೆ: ವರದಿ

ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವಿನ ಮಿಲಿಟರಿ ಬಿಕ್ಕಟ್ಟಿನ ಬಗ್ಗೆ ಭಾರತ ಸರ್ಕಾರದ ಮೇಲೆ ಕೆಲವು ಜನರು ಅಥವಾ ರಾಜಕೀಯ ಪಕ್ಷಗಳ ನಾಯಕರ ನಂಬಿಕೆಯ ಕೊರತೆಯ ಬಗ್ಗೆ ಕೇಳಿದಾಗ, ಕೆಲವರು ಎಲ್ಲದಕ್ಕೂ ವಿರೋಧ ಮಾಡುತ್ತಾರೆ ಅಂಥವರು ಸತ್ಯವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಆದರೆ, ಕೆಲವೊಮ್ಮೆ ಇಂತಹವರು ಉದ್ದೇಶಪೂರ್ವಕವಾಗಿ ಚೀನಾದ ಬಗ್ಗೆ ಸುಳ್ಳು ಸುದ್ದಿ ಅಥವಾ ಮಾಹಿತಿಯನ್ನು ಹರಡುತ್ತಾರೆ ಎಂದು ಪರೋಕ್ಷವಾಗಿ ನುಡಿದಿದ್ದಾರೆ.

ಕೆಲವೊಮ್ಮೆ ಅವರು ಉದ್ದೇಶಪೂರ್ವಕವಾಗಿ ಇಂತಹ ಸುದ್ದಿಗಳನ್ನು ಹರಡುತ್ತಾರೆ ಮತ್ತು ಅದು ನಿಜವಲ್ಲ ಎಂದು ಅವರಿಗೂ ತಿಳಿದಿರುತ್ತದೆ. ಕೆಲವೊಮ್ಮೆ ಅವರು 1962 ರಲ್ಲಿ ಚೀನಾ ವಶಪಡಿಸಿಕೊಂಡ ಕೆಲವು ಭೂಮಿಯ ಬಗ್ಗೆ ಮಾತನಾಡುತ್ತಾರೆ. ಆದರೆ ಅವರು ನಿಮಗೆ ಸತ್ಯವನ್ನು ಹೇಳುವುದಿಲ್ಲ. ಈ ಘಟನೆ ನಿನ್ನೆಯಷ್ಟೇ ನಡೆದಿದೆ ಎಂಬ ಭಾವನೆ ಮೂಡಿಸುತ್ತಾರೆ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 11:25 am, Sun, 29 January 23