ಡಿಕೆ ಶಿವಕುಮಾರ್ ಬೆಳಗಾವಿಗೆ ಬಂದಿದ್ದರೂ ಜಿಲ್ಲಾ ಉಸ್ತುವಾರಿ ಗೈರು: ಕೊನೆಗೂ ಕಾರಣ ಕೊಟ್ಟ ಸತೀಶ್ ಜಾರಕಿಹೊಳಿ

| Updated By: ರಮೇಶ್ ಬಿ. ಜವಳಗೇರಾ

Updated on: Oct 19, 2023 | 11:58 AM

ಡಿಕೆ ಶಿವಕುಮಾರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ಕಾಂಗ್ರೆಸ್​ನಲ್ಲಿ ಕಂಪನ ಸೃಷ್ಟಿಸಿದೆ. ಉಪಮುಖ್ಯಮಂತ್ರಿ ಅಲ್ಲದೇ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಳಗಾವಿ ಜಿಲ್ಲೆಗೆ ಬಂದರೂ ಸಹ ಜಿಲ್ಲಾ ಉಸ್ತುವಾರಿ ಸತೀಶ್ ಜಾರಕಿಹೊಳಿ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಇದೀಗ ಡಿಕೆ ಶಿವಕುಮಾರ್ ಅವರ ಕಾರ್ಯಕ್ರಮಗಳಿಗೆ ಗೈರಾಗಿರುವುದಕ್ಕೆ ಸತೀಶ್ ಜಾರಕಿಹೊಳಿ ಕಾರಣ ಕೊಟ್ಟಿದ್ದಾರೆ.

ಡಿಕೆ ಶಿವಕುಮಾರ್ ಬೆಳಗಾವಿಗೆ ಬಂದಿದ್ದರೂ ಜಿಲ್ಲಾ ಉಸ್ತುವಾರಿ ಗೈರು: ಕೊನೆಗೂ ಕಾರಣ ಕೊಟ್ಟ ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ-ಡಿಕೆ ಶಿವಕುಮಾರ್
Follow us on

ಬೆಂಗಳೂರು, (ಅಕ್ಟೋಬರ್ 19): ಬೆಳಗಾವಿ (Belagavi) ಜಿಲ್ಲಾ ರಾಜಕಾರಣದಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡುತ್ತಿದ್ದಾರೆಂಬ ಸತೀಶ್ ಜಾರಕಿಹೊಳಿ (Satish Jarkiholi) ಅಸಮಾಧಾನ ಮಧ್ಯೆಯೂ ಬೆಳಗಾವಿಗೆ ಇಂದು ಡಿಸಿಎಂ ಡಿ.ಕೆ‌.ಶಿವಕುಮಾರ್ (DK Shivakumar) ಭೇಟಿ ನೀಡಿದ್ದರು. ಆದ್ರೆ, ನಿರೀಕ್ಷೆಯಂತೆ ಡಿಸಿಎಂ ಡಿಕೆ ಜಿಲ್ಲಾ ಪ್ರವಾಸ ವೇಳೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಗೈರಾಗಿದ್ದರು. ಡಿಕೆ ಶಿವಕುಮಾರ್ ಅವರಿಗೆ ಸತೀಶ್ ಜಾರಕಿಹೊಳಿ ಮೊದಲೇ ತಿಳಿಸಿದ್ರಾ? ಅಷ್ಟಕ್ಕೂ ಸತೀಶ್ ಜಾರಕಿಹೊಳಿ ಗೈರಾಗಿರುವುದ್ಯಾಕೆ? ಈ ಬಗ್ಗೆ ಸ್ವತಃ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿ ಎಲ್ಲಾ ಗೊಂದಲಗಳಿಗೆ ತೆರಳಿದಿದ್ದಾರೆ.

ಈ ಬಗ್ಗೆ ಇಂದು (ಅಕ್ಟೋಬರ್ 19) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಬೆಳಗಾವಿಯಲ್ಲಿ ಇರುವುದಿಲ್ಲ ಎಂದು ಡಿ.ಕೆ.ಶಿವಕುಮಾರ್​ಗೆ ಒಂದು ದಿನ ಮುಂಚಿತವಾಗಿಯೇ ನಾನು ಹೇಳಿದ್ದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ದ್ದು ಖಾಸಗಿ ಕಾರ್ಯಕ್ರಮ ಆಗಿತ್ತು. ಬೆಳಗಾವಿ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷರು ಕೂಡ ಪ್ರವಾಸ ಹೋಗಿದ್ದರು. ಹೀಗಾಗಿ ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಅಸಮಾಧಾನ ಸ್ಫೋಟ: ಬೆಳಗಾವಿಗೆ ಬಂದ ಡಿಕೆ ಶಿವಕುಮಾರ್​ಗೆ ಟ್ರೈಲರ್​ ತೋರಿಸಿದ ಸತೀಶ್ ಜಾರಕಿಹೊಳಿ

ಹಲವು ಬಾರಿ ಕಾಂಪ್ರಮೈಸ್ ಮಾಡಿಕೊಳ್ಳಬೇಕಾಗುತ್ತದೆ. ಮುಂದೆಯೂ ನಾನು ಪಕ್ಷದ ಸಲುವಾಗಿ ಕಾಂಪ್ರಮೈಸ್ ಆಗುತ್ತೇನೆ. ಉಸ್ತುವಾರಿ ನಂದೇ ನಡೆಯಬೇಕು ಅನ್ನೋ ಮೆಂಟಾಲಿಟಿ ನನ್ನದಲ್ಲ. ಟ್ರಾನ್ಸಫರ್ ವಿಷಯದಲ್ಲಿ ಈ ಹಿಂದೆ ಕೆಲವು ಗೊಂದಲ ಆಗಿತ್ತು.ಈಗ ಟ್ರಾನ್ಸಫರ್ ವಿಚಾರ ಮುಗಿದು ಹೋದ ಕಥೆ. ಒಂದು ಬಾರಿ ಕೆಲವು ಶಾಸಕರ ಮಧ್ಯೆ ಗೊಂದಲ ಉಂಟಾಗಿತ್ತು. ಪಿಎಲ್​ಡಿ ಬ್ಯಾಂಕ್ ನೇಮಕದಲ್ಲಿ ನಾವು ಜಂಟಿ ಹೆಸರು ಕೊಡುತ್ತೇವೆ. ಹೊರಗಿನವರಿಂದ ಹಸ್ತಕ್ಷೇಪ ಬಂದರೆ ನಾನು ನೇರವಾಗಿ ಹೇಳ್ತೇಳುತ್ತೇನೆ. ಅಸಮಾಧಾನ ಅಂತೂ ನನಗೆ ಇಲ್ಲ, ಎಲ್ಲಾ ಒಗ್ಗಟ್ಟಾಗಿ ಹೋಗುತ್ತೇವೆ ಎಂದು ಹೇಳಿದರು.

ಇನ್ನು ಲಕ್ಷ್ಮೀ ಹೆಬ್ಬಾಳ್ಕರ್​ ಬಗ್ಗೆ ಪ್ರತಿಕ್ರಿಯಿಸಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ನನಗೆ ಯಾವುದೇ ಕಿರಿಕಿರಿ ಇಲ್ಲ. ನಾನು 6 ಬಾರಿ ಶಾಸಕನಾಗಿದ್ದೇನೆ, ಅವರು 2 ಬಾರಿ ಶಾಸಕರಾಗಿದ್ದಾರೆ. ಕೆಲವರು ಒಂದೇ ಬಾರಿ ಶಾಸಕರಾಗಿ‌ ಸಚಿವರಾಗಿದ್ದಾರೆ.​ ಆದರೆ ಎಲ್ಲರ ಜೊತೆಗೂ ಹೊಂದಿಕೊಂಡು ಕೆಲಸ ಮಾಡಬೇಕು. ಸವದಿ ಕೂಡ ಕಾಂಗ್ರೆಸ್​ಗೆ ಬರುವಾಗ ನನ್ನ ಜತೆ ಮಾತನಾಡಿ ಕಿರಿಕಿರಿ ಮಾಡುವುದಾದರೆ ನಾನು ಬರಲ್ಲ ಎಂದು ನನಗೆ ಹೇಳಿದ್ದರು. ಹಾಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ನನ್ನ ಸೈಲೆಂಟ್ ದೌರ್ಬಲ್ಯ ಅಲ್ಲ, ಸಕ್ಸಸ್ ಕೊಟ್ಟಿದೆ ಎಂದು ತಿಳಿಸಿದರು.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ