‘ಕಿಲ ಕಿಲ ನ ಬರಕ್ಕಿಲ್ಲ’ ಅಂತಾ ರಾತ್ರಿ ಬ್ಯಾನರ್​ ಹತ್ತಿ ಕುಳಿತ ಅಪ್ರಾಪ್ತ ವಯಸ್ಸಿನ ಕನ್ಯಾಮಣಿ! ಯಾಕೆ?

| Updated By: ಸಾಧು ಶ್ರೀನಾಥ್​

Updated on: Nov 09, 2020 | 12:38 PM

ಭೋಪಾಲ್​: ಈ ಲವ್ವೇ ಹಿಂಗಮ್ಮಾ.. ಇದು ಯಾಕೆ ಹಂಗಮ್ಮ? ಎಂಬ ಸಿನಿಮಾದ ಹಾಡಿನ ಸಾಲೊಂದನ್ನು ನಾವು ಕೇಳಿರುತ್ತೇವೆ. ಅಂತೆಯೇ, ಈ ಪ್ರೀತಿ, ಲವ್​, ಕಾದಲ್​ ಅನ್ನೋ ಫೀಲಿಂಗ್​ ನಮ್ಮ ಯುವ ಪೀಳಿಗೆಯ ಕೈಯಲ್ಲಿ ಏನೆಲ್ಲಾ ತರಲೆಗಳನ್ನ ಮಾಡಿಸಿಬಿಡುತ್ತೆ ನೋಡಿ.. ಇದೇ ಧಾಟಿಯಲ್ಲಿ ತಾನು ಇಷ್ಟಪಟ್ಟ ಹುಡುಗನೊಟ್ಟಿಗೆ ಮದುವೆ ಮಾಡಿಸಲ್ಲ ಅಂತಾ ಹೇಳಿದ್ದಕ್ಕೆ ಸಿಟ್ಟಿಗೆದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ರಸ್ತೆ ಬದಿಯಲ್ಲಿ ಅಳವಡಿಸಿದ್ದ ಬ್ಯಾನರ್​ ಮೇಲೆ  ರಾತ್ರಿ ವೇಳೆ ಹತ್ತಿ ಕುಳಿತ ಘಟನೆ ಮಧ್ಯ ಪ್ರದೇಶದ ಇಂದೋರ್​ನಲ್ಲಿ ಬೆಳಕಿಗೆ […]

‘ಕಿಲ ಕಿಲ ನ ಬರಕ್ಕಿಲ್ಲ’ ಅಂತಾ ರಾತ್ರಿ ಬ್ಯಾನರ್​ ಹತ್ತಿ ಕುಳಿತ ಅಪ್ರಾಪ್ತ ವಯಸ್ಸಿನ ಕನ್ಯಾಮಣಿ! ಯಾಕೆ?
Follow us on

ಭೋಪಾಲ್​: ಈ ಲವ್ವೇ ಹಿಂಗಮ್ಮಾ.. ಇದು ಯಾಕೆ ಹಂಗಮ್ಮ? ಎಂಬ ಸಿನಿಮಾದ ಹಾಡಿನ ಸಾಲೊಂದನ್ನು ನಾವು ಕೇಳಿರುತ್ತೇವೆ. ಅಂತೆಯೇ, ಈ ಪ್ರೀತಿ, ಲವ್​, ಕಾದಲ್​ ಅನ್ನೋ ಫೀಲಿಂಗ್​ ನಮ್ಮ ಯುವ ಪೀಳಿಗೆಯ ಕೈಯಲ್ಲಿ ಏನೆಲ್ಲಾ ತರಲೆಗಳನ್ನ ಮಾಡಿಸಿಬಿಡುತ್ತೆ ನೋಡಿ..

ಇದೇ ಧಾಟಿಯಲ್ಲಿ ತಾನು ಇಷ್ಟಪಟ್ಟ ಹುಡುಗನೊಟ್ಟಿಗೆ ಮದುವೆ ಮಾಡಿಸಲ್ಲ ಅಂತಾ ಹೇಳಿದ್ದಕ್ಕೆ ಸಿಟ್ಟಿಗೆದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ರಸ್ತೆ ಬದಿಯಲ್ಲಿ ಅಳವಡಿಸಿದ್ದ ಬ್ಯಾನರ್​ ಮೇಲೆ  ರಾತ್ರಿ ವೇಳೆ ಹತ್ತಿ ಕುಳಿತ ಘಟನೆ ಮಧ್ಯ ಪ್ರದೇಶದ ಇಂದೋರ್​ನಲ್ಲಿ ಬೆಳಕಿಗೆ ಬಂದಿದೆ.

ನಗರದ ಭಂಡಾರಿ ಸೇತುವೆ ಬಳಿಯಿರುವ ಬ್ಯಾನರ್ ಮೇಲೆ ಹತ್ತಿ ಕುಳಿತ ಅಪ್ರಾಪ್ತೆ ತನ್ನ ತಾಯಿಯ ಇಚ್ಛೆ ಇಲ್ಲದಿದ್ರೂ ತಾನು ಅವನನ್ನೇ ಮದುವೆಯಾಗ್ತೀನಿ ಅಂತಾ ಹಠ ಹಿಡಿದಳಂತೆ. ಯುವತಿಯ ಕುಟುಂಬಸ್ಥರು ಇಳಿದು ಬಾ ತಾಯಿ ಇಳಿದು ಬಾ ಎಂದು ಆಕೆಗೆ ಕೆಳಗಿಳಿಯಲು ದುಂಬಾಲು ಬಿದ್ರೂ ಅವಳು ಮಾತ್ರ ಡೋಂಟ್​ ಕೇರ್​!

ಕೊನೆಗೆ, ನಿನ್ನ ಆಸೆಯಂತೆಯೇ ಆಗಲಿ ಎಂದು ಪೊಲೀಸರು ಅಪ್ರಾಪ್ತೆಯ ಬಾಯ್​ಫ್ರೆಂಡ್​ನ ಕರೆಸಿದರು. ಅವನ ಮಾತಿನ ಮೋಡಿಯೋ ಅಥವಾ ಯುವತಿಯ ಮೊಬೈಲ್​ಗೆ ನೆಟ್​ವರ್ಕ್​ ಸಿಗ್ತಿರಲಿಲ್ಲವೇನೋ ಗೊತ್ತಿಲ್ಲ. ಒಟ್ನಲ್ಲಿ, ಕನ್ಯಾಮಣಿ ಕೊನೆಗೂ ಕೆಳಗಿಳಿದುಬಂದಳಂತೆ.

Published On - 12:37 pm, Mon, 9 November 20