Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿಮ್ಮಪ್ಪನ ಹುಂಡಿ ಕಾಣಿಕೆಯಲ್ಲಿ ಗಣನೀಯ ಏರಿಕೆ, ಎಷ್ಟು ಗೊತ್ತಾ?

ಹೈದರಾಬಾದ್: ಆಂಧ್ರಪ್ರದೇಶದ ತಿರುಮಲದ ಬಾಲಾಜಿಗೆ ದೇಶದಾದ್ಯಂತ ಕೋಟ್ಯಾಂತರ ಭಕ್ತರಿದ್ದಾರೆ. ಕೊರೊನಾ ನಿಬಂಧನೆಗಳ ಕಾರಣದಿಂದಾಗಿ 7ತಿಂಗಳ ಕಾಲ ವೆಂಕಟೇಶ್ವರನ ದರ್ಶನ ಪಡೆಯಲಾಗದೇ ಭಕ್ತರು ಪರದಾಡುವಂತಾಗಿತ್ತು. ಕೊವಿಡ್ ನಿಬಂಧನೆಗಳ ಮಧ್ಯದಲ್ಲಿ ಕೇವಲ ಸಮಯ ನಿಗದಿತ ಪಾವತಿ ಟಿಕೆಟ್ ಪಡೆದ 3ರಿಂದ 9 ಸಾವಿರ ಭಕ್ತರಿಗೆ ಮಾತ್ರ ದರ್ಶನ ನೀಡಲಾಗುತ್ತಿತ್ತಾದಾರೂ ಸಾಮಾನ್ಯ ಭಕ್ತರಿಗೆ ಇದರ ಲಾಭ ಸಿಗುತ್ತಿರಲಿಲ್ಲ. ಉಚಿತ ಸರ್ವದರ್ಶನ ಟಿಕೆಟ್ ರದ್ದಾಗಿ ಸಾಮಾನ್ಯ ಭಕ್ತರಿಗೆ ಬಾಲಾಜಿ ದರ್ಶನ ಬಹಳಷ್ಟು ತೊಂದರೆದಾಯಕವಾಗಿತ್ತು . ಆದರೆ, ಇದೀಗ ಇದೇ ಅಕ್ಟೋಬರ್ 29ರಿಂದ ಸಾಮಾನ್ಯ […]

ತಿಮ್ಮಪ್ಪನ ಹುಂಡಿ ಕಾಣಿಕೆಯಲ್ಲಿ ಗಣನೀಯ ಏರಿಕೆ, ಎಷ್ಟು ಗೊತ್ತಾ?
Follow us
ಆಯೇಷಾ ಬಾನು
|

Updated on: Nov 08, 2020 | 1:34 PM

ಹೈದರಾಬಾದ್: ಆಂಧ್ರಪ್ರದೇಶದ ತಿರುಮಲದ ಬಾಲಾಜಿಗೆ ದೇಶದಾದ್ಯಂತ ಕೋಟ್ಯಾಂತರ ಭಕ್ತರಿದ್ದಾರೆ. ಕೊರೊನಾ ನಿಬಂಧನೆಗಳ ಕಾರಣದಿಂದಾಗಿ 7ತಿಂಗಳ ಕಾಲ ವೆಂಕಟೇಶ್ವರನ ದರ್ಶನ ಪಡೆಯಲಾಗದೇ ಭಕ್ತರು ಪರದಾಡುವಂತಾಗಿತ್ತು. ಕೊವಿಡ್ ನಿಬಂಧನೆಗಳ ಮಧ್ಯದಲ್ಲಿ ಕೇವಲ ಸಮಯ ನಿಗದಿತ ಪಾವತಿ ಟಿಕೆಟ್ ಪಡೆದ 3ರಿಂದ 9 ಸಾವಿರ ಭಕ್ತರಿಗೆ ಮಾತ್ರ ದರ್ಶನ ನೀಡಲಾಗುತ್ತಿತ್ತಾದಾರೂ ಸಾಮಾನ್ಯ ಭಕ್ತರಿಗೆ ಇದರ ಲಾಭ ಸಿಗುತ್ತಿರಲಿಲ್ಲ.

ಉಚಿತ ಸರ್ವದರ್ಶನ ಟಿಕೆಟ್ ರದ್ದಾಗಿ ಸಾಮಾನ್ಯ ಭಕ್ತರಿಗೆ ಬಾಲಾಜಿ ದರ್ಶನ ಬಹಳಷ್ಟು ತೊಂದರೆದಾಯಕವಾಗಿತ್ತು . ಆದರೆ, ಇದೀಗ ಇದೇ ಅಕ್ಟೋಬರ್ 29ರಿಂದ ಸಾಮಾನ್ಯ ಭಕ್ತರಿಗೂ ಸಹ ಉಚಿತ ಸರ್ವ ದರ್ಶನ ಆರಂಭಿಸಲಾಗಿದೆ.‌ ಇದರಿಂದಾಗಿ ದಾಖಲೆ ಪ್ರಮಾಣದಲ್ಲಿ ಬಾಲಾಜಿ ದೇವಾಲಯದ ಹುಂಡಿಗೆ ಆದಾಯ ಸಂಗ್ರಹವಾಗುತ್ತಿದೆ. ಭಾರಿ ಪ್ರಮಾಣದಲ್ಲಿ ಭಕ್ತರ ದಂಡು ಹರಿದು ಬರುತ್ತಿದೆ.

ಕೊರೊನಾ ಲಾಕ್​ಡೌನ್ ಬಳಿಕ ಸಂಗ್ರಹವಾದ ಹಣ: ಕಳೆದ 10 ದಿನಗಳಲ್ಲಿ ದಾಖಲೆ ಎನ್ನುವಂತೆ 18.75ಲಕ್ಷ ಹಣ ಸಂಗ್ರಹವಾಗಿದೆ. 2,53,746 ಭಕ್ತರು ದರ್ಶನ ಪಡೆದಿದ್ದು , 1,03,157 ಭಕ್ತರು ತಲೆ ಮುಡಿ ಸೇವೆ ಸಲ್ಲಿಸಿದ್ದಾರೆ. ಈ‌ ಪೈಕಿ ಉಚಿತ ಸರ್ವ ದರ್ಶನ ಆರಂಭಗೊಂಡ ಮೊದಲ ದಿನ ಅಂದ್ರೆ ಗುರುವಾರದಂದು 1.52ಕೋಟಿ ಆದಾಯ ಬಾಲಾಜಿ ದೇವಾಲಯದ ಹುಂಡಿಯಲ್ಲಿ ಸಂಗ್ರಹವಾಗಿತ್ತು. 21,696ಭಕ್ತರು ಶ್ರೀನಿವಾಸನ‌ ದರ್ಶನ ಪಡೆದಿದ್ದು, 6833ಭಕ್ತರು ತಲೆ ಮುಡಿ ಸೇವೆ ಸಲ್ಲಿಸಿದ್ದಾರೆ. -ಅಕ್ಟೋಬರ್ 30ರ ಶುಕ್ರವಾರ 1.92ಕೋಟಿ ಸಂಗ್ರಹವಾಗಿದೆ. 20,269 ಭಕ್ತರು ದರ್ಶನ‌ ಪಡೆದಿದ್ದು, 6,613 ಭಕ್ತರು ತಲೆ ಮುಡಿ ಸೇವೆ ಸಲ್ಲಿಸಿದ್ದಾರೆ. -ಅಕ್ಟೋಬರ್ 31ರ ಶನಿವಾರ 1.45 ಕೋಟಿ ಆದಾಯ ಹುಂಡಿಯಲ್ಲಿ ಸಂಗ್ರಹವಾಗಿದೆ. 24,421 ಭಕ್ತರು ದರ್ಶನ ಪಡೆದಿದ್ದು, 8,469ಭಕ್ತರು ತಲೆ ಮುಡಿ ಸೇವೆ ಸಲ್ಲಿಸಿದ್ದಾರೆ. -ನವೆಂಬರ್ 1ರ ರವಿವಾರ, ಒಂದೇ ದಿನದಲ್ಲಿ 2.22ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.‌ ಅಂದು ಒಟ್ಟಾರೆ, 27,107 ಭಕ್ತರು ದರ್ಶನ ಪಡೆದಿದ್ದಾರೆ. -ನವೆಂಬರ್ 2, ರಂದು, ಕಳೆದ ಹತ್ತು ದಿನಗಳಲ್ಲಿಯೇ ಅತ್ಯಧಿಕ ಅಂದರೆ 2.93ಕೋಟಿ ರೂಪಾಯಿ ಕಾಣಿಕೆ ಆದಾಯ ಬಾಲಾಜಿಯ ಹುಂಡಿಯಲ್ಲಿ ಸಂಗ್ರಹವಾಗಿದೆ. ಅಂದು 26,167ಭಕ್ತರು ಶ್ರೀನಿವಾಸನ ದರ್ಶನ ಪಡೆದಿದ್ದಾರೆ. 10,905 ಭಕ್ತರು ತಲೆ ಮುಡಿ ಸೇವೆ ಸಲ್ಲಿಸಿದ್ದಾರೆ. -ನವೆಂಬರ್ 3ರಂದು 1.90ಕೋಟಿ ಆದಾಯ ಸಂಗ್ರಹವಾಗಿದೆ. 26,931 ಭಕ್ತರು ದರ್ಶನ, 10,255 ಭಕ್ತರು ತಲೆ ಮುಡಿ ಸೇವೆ ಸಲ್ಲಿಸಿದ್ದಾರೆ. -ನವೆಂಬರ್ 4ರಂದು 1.74ಕೋಟಿ ರೂ. ಆದಾಯ ಸಂಗ್ರಹವಾಗಿದೆ. 25,857 ಭಕ್ತರು ದರ್ಶನ, 10,908ಭಕ್ತರು ತಲೆ ಮುಡಿ ಸೇವೆ ಸಲ್ಲಿಸಿದ್ದಾರೆ. -ನವೆಂಬರ್ 5ರಂದು 1.91ಕೋಟಿ ರೂ. ಆದಾಯ ಸಂಗ್ರಹವಾಗಿದ್ದು 27,078ಭಕ್ತರ ದರ್ಶನ, 18,667ಭಕ್ತರು ತಲೆ ಮುಡಿ ಸೇವೆ ಸಲ್ಲಿಸಿದ್ದಾರೆ. -ನವೆಂಬರ್ 6ರಂದು 1.68ಕೋಟಿ ಸಂಗ್ರಹವಾಗಿದ್ದರೆ, 23,515ಭಕ್ತರು ದರ್ಶನ, 8,427ಭಕ್ತರು ತಲೆ ಮುಡಿ ಸೇವೆ ಸಲ್ಲಿಸಿದ್ದಾರೆ. -ನಿನ್ನೆ ನವೆಂಬರ್ 7ರಂದು 1.48ಕೋಟಿ ಆದಾಯ ಸಂಗ್ರಹವಾಗಿದೆ. 30,705ಭಕ್ತರು ಗೋವಿಂದನ‌ ದರ್ಶನ ಪಡೆದಿದ್ದಾರೆ. 10,898 ಭಕ್ತರು ತತಲೆ ಮುಡಿ ಸೇವೆ ಸಲ್ಲಿಸಿದ್ದಾರೆ.

ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ
ವಿನಯ್ ಸಾವಿಗೆ ಕಾರಣರಾದ ಎಸ್​ಪಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಅಶೋಕ
ವಿನಯ್ ಸಾವಿಗೆ ಕಾರಣರಾದ ಎಸ್​ಪಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಅಶೋಕ
ವಿನಯ್ ಸೋಮಯ್ಯ ಸಾವು; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಕೊಡಗು ಎಸ್​ಪಿ
ವಿನಯ್ ಸೋಮಯ್ಯ ಸಾವು; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಕೊಡಗು ಎಸ್​ಪಿ
‘ಡೆವಿಲ್’ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ದರ್ಶನ್: ವಿಡಿಯೋ
‘ಡೆವಿಲ್’ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ದರ್ಶನ್: ವಿಡಿಯೋ
ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ನಾವ್ಯಾರು ಅವರ ಜೊತೆ ಹೋಗಲ್ಲ: ಬಂಗಾರಪ್ಪ
ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ನಾವ್ಯಾರು ಅವರ ಜೊತೆ ಹೋಗಲ್ಲ: ಬಂಗಾರಪ್ಪ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
SSLC,PUC ಬಳಿಕ ಮುಂದೇನು?ಚಿಂತೆ ಬೇಡ,ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿದೆ ಅಕ್ರಮ ಮದ್ಯ ಮಾರಾಟ, ಇಲಾಖೆ ನಿರ್ಲಿಪ್ತ