ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ್ರೆ ಮೋದಿ ಜೈಲಿಗೆ ಎಂದು ಹೇಳಿ ಯೂಟರ್ನ್​ ಹೊಡೆದ ಮಿಸಾ ಭಾರ್ತಿ

|

Updated on: Apr 12, 2024 | 2:14 PM

ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿಯನ್ನು ಜೈಲಿಗಟ್ಟುತ್ತೆ ಎಂದು ಹೇಳಿಕೆ ನೀಡಿದ್ದ ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರಿ ಮಿಸಾ ಭಾರ್ತಿ ಯೂಟರ್ನ್​ ಹೊಡೆದಿದ್ದಾರೆ. ನಾನು ಹಾಗೆ ಹೇಳಿಯೇ ಇಲ್ಲ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಎಂದಿದ್ದಾರೆ.

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದ್ರೆ ಮೋದಿ ಜೈಲಿಗೆ ಎಂದು ಹೇಳಿ ಯೂಟರ್ನ್​ ಹೊಡೆದ ಮಿಸಾ ಭಾರ್ತಿ
ಮಿಸಾ ಭಾರ್ತಿ-ಮೋದಿ
Image Credit source: Lokmat
Follow us on

ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿಯನ್ನು ಜೈಲಿಗಟ್ಟುತ್ತೆ ಎಂದು ಹೇಳಿಕೆ ನೀಡಿದ್ದ ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರಿ ಮಿಸಾ ಭಾರ್ತಿ ಯೂಟರ್ನ್​ ಹೊಡೆದಿದ್ದಾರೆ. ನಾನು ಹಾಗೆ ಹೇಳಿಯೇ ಇಲ್ಲ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಎಂದಿದ್ದಾರೆ.

ಬಿಜೆಪಿ ಈ ಕುರಿತು ಪ್ರತಿಕ್ರಿಯೆ ನೀಡಿ ಬೇಜವಾಬ್ದಾರಿ ಹಾಗೂ ನಾಚಿಕೆಗೇಡಿನ ಕಮೆಂಟ್​ಗಳನ್ನು ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಅವರು ಮತ್ತು ಅವರ ಕುಟುಂಬ ಸದಸ್ಯರು ದೋಷಿಯಾಗಿರುವ ಭ್ರಷ್ಟಾಚಾರ ಪ್ರಕರಣಗಳನ್ನು ಅವರಿಗೆ ಬಿಜೆಪಿ ನೆನಪಿಸಿದೆ.

ಇತ್ತೀಚೆಗೆ ಪಾಟ್ಲಿಪುತ್ರ ಲೋಕಸಭಾ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾರ್ತಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಮೈತ್ರಿ ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ. ಭಾರ್ತಿ ಅವರು ಪಾಟ್ಲಿಪುತ್ರ ಕ್ಷೇತ್ರದಿಂದ ಆರ್‌ಜೆಡಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಭಾರ್ತಿ ಹೇಳಿಕೆ ಬಗ್ಗೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಆರ್​ಜೆಡಿ ನಾಯಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರು ಮೊದಲು ತಮ್ಮ ಕುಟುಂಬ ಮಾಡಿರುವ ಹಗರಣವನ್ನು ನೋಡಬೇಕು, ಇಂತಹ ಮಾತುಗಳನ್ನು ಹೇಳುವ ಮೂಲಕ ಪ್ರಜಾಪ್ರಭುತ್ವವನ್ನು ಗೇಲಿ ಮಾಡಬಾರದು ಫಡ್ನವಿಸ್ ಹೇಳಿದ್ದಾರೆ.

ಮತ್ತಷ್ಟು ಓದಿ:Modi ka Parivar: ಮೋದಿ ಹಿಂದೂ ಅಲ್ಲ, ಪರಿವಾರವಿಲ್ಲ ಎನ್ನುವ ಲಾಲೂ ಹೇಳಿಕೆಗೆ ತಿರುಗೇಟು ಕೊಟ್ಟ ಬಿಜೆಪಿ ನಾಯಕರು

ಮಿಸಾ ಭಾರ್ತಿ ಬೆಂಬಲಿಸಿದ ಶತ್ರುಘ್ನ ಸಿನ್ಹಾ
ಟಿಎಂಸಿ ನಾಯಕ ಮತ್ತು ಅಸನ್ಸೋಲ್ ಸಂಸದ ಶತ್ರುಘ್ನ ಸಿನ್ಹಾ ಮತ್ತು ವಿಐಪಿ ಮುಖ್ಯಸ್ಥ ಮುಖೇಶ್​ ಸಾಹ್ನಿ ಮಿಸಾ ಭಾರ್ತಿಯನ್ನು ಬೆಂಬಲಿಸಿದ್ದಾರೆ. ಬಿಜೆಪಿ ಮತ್ತು ಎನ್​ಡಿಎಯಲ್ಲಿ ಹತಾಶೆ ಗೋಚರಿಸುತ್ತಿದೆ ಆದರೆ ಇಂಡಿಯಾ ಮೈತ್ರಿಕೂಟದಲ್ಲಿ ಆಕ್ರಮಣಶೀಲತೆ ಗೋಚರಿಸುತ್ತದೆ ಎಂದಿದ್ದಾರೆ.

ಬಿಹಾರದಲ್ಲಿ 7 ಹಂತಗಳಲ್ಲಿ ಮತದಾನ
ಬಿಹಾರದ 40 ಸ್ಥಾನಗಳಿಗೆ 7 ಹಂತಗಳಲ್ಲಿ ಮತದಾನ ನಡೆಯಲಿದೆ, ಮೊದಲ ಹಂತದಲ್ಲಿ ಏಪ್ರಿಲ್ 19ರಂದು ಔರಂಗಾಬಾದ್, ಗಯಾ, ನಾವಡಾ ಮತ್ತು ಜಮುಯಿ ನಡೆಯಲಿದೆ. ಎರಡನೇ ಹಂತದಲ್ಲಿ ಏಪ್ರಿಲ್ 26 ರಂದು ಕಿಶನ್​ಗಂಜ್, ಕತಿಹಾರ್, ಪೂರ್ಣಿಯಾ ಮತ್ತು ಭಾಗಲ್ಪುರದಲ್ಲಿ ನಡೆಯಲಿದೆ.

ಮೂರು, ನಾಲ್ಕು ಹಾಗೂ ಐದನೇ ಹಂತದಲ್ಲಿ 15 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಅವಧಿಯಲ್ಲಿ ಝಂಜರ್​ಪುರ, ಸುಪೌಲ್, ಅರಾರಿಯಾ, ಮಾಧೇಪುರ ಮತ್ತು ಖಗಿರಾಯದಲ್ಲಿ ಮತದಾನ ನಡೆಯಲಿದೆ. ನಾಲ್ಕನೇ ಹಂತದಲ್ಲಿ ಮೇ 13ರಂದು ದರ್ಬಂಗಾ ಉಜಿಯಾರ್​ಪುರ, ಸಮಷ್ಟಿಪುರ, ಬೇಗುಸರೈ ಹಾಗೂ ಮುಂಗೇರ್​ನಲ್ಲಿ ಮತದಾನ ನಡೆಯಲಿದೆ.

ಐದನೇ ಹಂತದಲ್ಲಿ ಮೇ 20ರಂದು ಸೀತಾಮರ್ಹಿ, ಮಧುಬನಿ, ಮುಜಾಫರ್​ಪುರ, ಸರನ್ ಮತ್ತು ಹಾಜಿಪುರದಲ್ಲಿ ನಡೆಯಲಿದೆ. ಆರನೇ ಹಂತದಲ್ಲಿ ಮೇ 25ರಂದು ವಾಲ್ಮೀಕಿನಗರ, ಪಶ್ಚಿಮ ಚಂಪಾರಣ್​, ಪೂರ್ವ ಚಂಪಾರಣ್​, ಶಿವಾರ್, ವೈಶಾಲಿ,

ಗೋಪಾಲ್​ಗಂಜ್, ಸಿವಾನ್, ಮಹಾರಾಜ್​ಗಂಜ್ನಲ್ಲಿ ನಡೆಯಲಿದೆ. ಏಳನೇ ಹಂತದಲ್ಲಿ ಅಂದರೆ ಕೊನೆಯ ಹಂತದಲ್ಲಿ ಜೂನ್ 1 ರಂದು ನಳಂದ, ಪಾಟ್ನಾ ಸಾಹಿಬ್, ಪಾಟ್ಲಿಪುತ್ರ, ಅರ್ರಾ ಬಕ್ಸರ್, ಸಸಾರಾಮ್, ಕರಕತ್​ ಮತ್ತು ಜೆಹಾನಾಬಾದ್​ನಲ್ಲಿ ಮತದಾನ ನಡೆಯಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ