ಈ ಬಾರಿ ಮಿಸ್ ಇಂಡಿಯಾ(Miss India 2023) ಯಾರೆಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ರಾಜಸ್ಥಾನ ಮೂಲದ 19ರ ಹರೆಯದ ನಂದಿನಿ ಗುಪ್ತಾ(Nandini Gupta) ಅವರು ಈ ಬಾರಿಯ ಫೆಮಿನಾ ಮಿಸ್ ಇಂಡಿಯಾ 2023ರ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಭಾರತದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯ 59 ನೇ ಆವೃತ್ತಿಯು ಮಣಿಪುರದ ಇಂಫಾಲ್‌ನ ಖುಮಾನ್ ಲ್ಯಾಂಪಕ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಏಪ್ರಿಲ್ 15 ರಂದು ಗ್ರ್ಯಾಂಡ್ ಫಿನಾಲೆ ಸಮಾರಂಭದಲ್ಲಿ ನಂದಿನಿ ಮಿಸ್ ಇಂಡಿಯಾ ಕಿರೀಟವನ್ನು ಧರಿಸಿದರು.
ದೆಹಲಿಯ ಶ್ರೇಯಾ ಪೂಂಜಾ (Shreya Punj) ಮೊದಲ ರನ್ನರ್ ಅಪ್, ಮಣಿಪುರದ ತೌನೊಜಮ್ ಸ್ಟ್ರೆಲಾ ಲುವಾಂಗ್ (Strela luwang) ಎರಡನೇ ರನ್ನರ್ ಅಪ್ ಹಾಗೂ ನಂದಿನಿ ಗುಪ್ತಾ ಅವರು ಮಿಸ್ ಇಂಡಿಯಾ 2022 ವಿಜೇತೆಯಾಗಿರುವ ಉಡುಪಿ ಮೂಲದ ಸಿನಿ ಶೆಟ್ಟಿ ಅವರಿಂದ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಮೆರಿಕದ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಬೇಧಿಸುವಷ್ಟು ಸಮರ್ಥವಾಗಿದೆ ಚೀನಾದ ಹೈಪರ್‌ಸಾನಿಕ್ ಆಯುಧ!
ರಾಜಸ್ಥಾನದ ಕೋಟಾ ಮೂಲದ 19 ವರ್ಷದ ಯುವತಿ ನಂದಿನಿ ಗುಪ್ತಾ ತನ್ನ 10ನೇ ವಯಸ್ಸಿನಿಂದಲೂ ಮಿಸ್ ಇಂಡಿಯಾ ಆಗಬೇಕೆಂಬ ಕನಸು ಕಂಡಿದ್ದರು. ನಂದಿನಿ ತನ್ನ ಶಾಲಾ ಶಿಕ್ಷಣವನ್ನು ಸೇಂಟ್ ಪಾಲ್ಸ್ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಹಾಗೂ ಲಾಲಾ ಲಜಪತ್ ರಾಯ್ ಕಾಲೇಜಿನಲ್ಲಿ ಬಿಸ್ನೆಸ್ ಮ್ಯಾನೇಜ್ಮೆಂಟ್ ಓದುತ್ತಿದ್ದಾರೆ. ಚಿಕ್ಕವಯಸ್ಸಿನಿಂದಲೂ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ನಂದಿನಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ರೂಪದರ್ಶಿ ಜರ್ನಿಗೆ ಪ್ರಿಯಾಂಕಾ ಚೋಪ್ರಾ ಅವರೇ ರೋಲ್ ಮಾಡೆಲ್ ಎಂದು ನಂದಿನಿ ಹೇಳಿಕೊಂಡಿದ್ದಾರೆ. ಈ ಹಿಂದೆ ಫೆಮಿನಾ ಮಿಸ್ ಇಂಡಿಯಾ ರಾಜಸ್ಥಾನ ರೂಪದರ್ಶಿ ಸ್ಪರ್ಧೆಯಲ್ಲಿಯೂ ನಂದಿನಿ ವಿಜೇತೆಯಾಗಿದ್ದರು.
“ನನ್ನ ಜೀವನದಲ್ಲಿ ಅತ್ಯಂತ ಪ್ರಭಾವಭೀರುವ ವ್ಯಕ್ತಿ ಸರ್ ರತನ್ ಟಾಟಾ, ಮಾನವೀಯತೆಗಾಗಿ ಎಲ್ಲವನ್ನೂ ಮಾಡುವ ಮತ್ತು ಅದರಲ್ಲಿ ಹೆಚ್ಚಿನದನ್ನು ದಾನ ಮಾಡುವ ವ್ಯಕ್ತಿ. ಅವರನ್ನು ಲಕ್ಷಾಂತರ ಜನರು ಪ್ರೀತಿಸುತ್ತಾರೆ. ”ಎಂದು ನಂದಿನಿ ಸ್ಪರ್ಧೆಯ ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:45 am, Mon, 17 April 23