ಅಮೆರಿಕದ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಬೇಧಿಸುವಷ್ಟು ಸಮರ್ಥವಾಗಿದೆ ಚೀನಾದ ಹೈಪರ್‌ಸಾನಿಕ್ ಆಯುಧ!

ಬಹಿರಂಗಗೊಂಡ ಅಮೆರಿಕಾದ ಗುಪ್ತಚರ ದಾಖಲೆಗಳಲ್ಲಿ ಚೀನಾದ ಇತ್ತೀಚಿನ ಮಿಲಿಟರಿ ಚಟುವಟಿಕೆಗಳ ಕುರಿತೂ ಬೆಳಕು ಚೆಲ್ಲಿದ್ದು, ಚೀನಾದ ಕ್ಷಿಪಣಿ ಹಾಗೂ ನೌಕಾದಳದ ಪರೀಕ್ಷೆಗಳ ಕುರಿತು ಮಾಹಿತಿ ನೀಡುತ್ತಿವೆ.

ಅಮೆರಿಕದ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಬೇಧಿಸುವಷ್ಟು ಸಮರ್ಥವಾಗಿದೆ ಚೀನಾದ ಹೈಪರ್‌ಸಾನಿಕ್ ಆಯುಧ!
ಚೀನಾದ ಹೈಪರ್‌ಸಾನಿಕ್ ವೆಪನ್Image Credit source: Xinhua News Agency Handout/EPA
Follow us
|

Updated on:Apr 16, 2023 | 9:01 PM

ಇತ್ತೀಚೆಗೆ ಬಹಿರಂಗಗೊಂಡ ಅಮೆರಿಕಾದ ಗುಪ್ತಚರ ದಾಖಲೆಗಳಲ್ಲಿನ ಮಾಹಿತಿಯ ಪ್ರಕಾರ, ಚೀನಾದ ಹೈಪರ್‌ಸಾನಿಕ್ ಆಯುಧ (China’s hypersonic weapon) ಅಮೆರಿಕಾದ ಕ್ಷಿಪಣಿ (American missile) ರಕ್ಷಣಾ ವ್ಯವಸ್ಥೆಯನ್ನೂ ಬೇಧಿಸಲು ಸಮರ್ಥವಾಗಿದೆ. ಬಹಿರಂಗಗೊಂಡ ದಾಖಲೆಗಳನ್ನು “ಸೀಕ್ರೆಟ್” ಹಾಗೂ “ಟಾಪ್ ಸೀಕ್ರೆಟ್” ಎಂದು ನಮೂದಿಸಲಾಗಿತ್ತು. ಈ ಮಾಹಿತಿಗಳು ಮೊದಲಿಗೆ ಡಿಸ್‌ಕಾರ್ಡ್ ಎಂಬ ಮೆಸೇಜಿಂಗ್ ಅಪ್ಲಿಕೇಶನ್ ನಲ್ಲಿ ಮಾರ್ಚ್ ತಿಂಗಳಲ್ಲಿ ಬಯಲಾಯಿತು ಎನ್ನಲಾಗಿದೆ. ಈ ಮಾಹಿತಿಗಳು ರಷ್ಯಾ ಮತ್ತು ಉಕ್ರೇನ್ ಕದನದ (Russia and Ukraine War) ಜೊತೆಗೆ, ಚೀನಾದ ಇತ್ತೀಚಿನ ಮಿಲಿಟರಿ ಚಟುವಟಿಕೆಗಳ ಕುರಿತೂ ಬೆಳಕು ಚೆಲ್ಲಿದ್ದು, ಚೀನಾದ ಕ್ಷಿಪಣಿ ಹಾಗೂ ನೌಕಾದಳದ ಪರೀಕ್ಷೆಗಳ ಕುರಿತು ಮಾಹಿತಿ ನೀಡುತ್ತಿವೆ.

ಸಿಎನ್ಎನ್ ಹಾಗೂ ವಾಷಿಂಗ್ಟನ್ ಪೋಸ್ಟ್‌ಗಳು ತಮ್ಮ ವರದಿಯಲ್ಲಿ ಚೀನಾ ಡಿಎಫ್-27 ಹೈಪರ್‌ಸಾನಿಕ್ ಗ್ಲೈಡ್ ವೆಹಿಕಲ್ ಪರೀಕ್ಷೆ ನಡೆಸಿದ್ದು, ಅದು 12 ನಿಮಿಷಗಳ ಕಾಲ, 2,100 ಕಿಲೋಮೀಟರ್ (1,300 ಮೈಲಿ) ವ್ಯಾಪ್ತಿಯಲ್ಲಿ ಹಾರಾಟ ನಡೆಸಿ, ಅಮೆರಿಕಾದ ಬ್ಯಾಲಿಸ್ಟಿಕ್ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನೂ ಭೇದಿಸುವ ಸಾಮರ್ಥ್ಯ ಸಾಬೀತುಪಡಿಸಿತು ಎಂದಿವೆ.

ಡಿಎಫ್-27 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಇಂಟರ್‌ಮೀಡಿಯಟ್ ಅಥವಾ ಇಂಟರ್ ಕಾಂಟಿನೆಂಟಲ್ ಕ್ಷಿಪಣಿಗಳಾಗಿದ್ದು, 5,000-8,000 ಕಿಲೋಮೀಟರ್ ವ್ಯಾಪ್ತಿ ಹೊಂದಿರಲಿವೆ ಎಂದು ಅಮೆರಿಕಾದ ಸರ್ಕಾರಿ ಅಧಿಕಾರಿಗಳು ಕಳೆದ ವರ್ಷವೇ ತಿಳಿಸಿದ್ದರು. ಇನ್ನೊಂದು ದಾಖಲಾತಿಯ ಪ್ರಕಾರ, ಚೀನಾದ ಯುಷೆನ್ ಎಲ್ಎಚ್ಎ-31 ಹೆಲಿಕಾಪ್ಟರ್ ಅನ್ನು ಒಯ್ಯುವ ಒಂದು ನೌಕೆ ತೈವಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆದರೆ ಮಹತ್ವದ ಪಾತ್ರ ವಹಿಸಲಿದೆ. ಹಲವು ದಾಖಲಾತಿಗಳು ಬೀಜಿಂಗ್ ವಿದೇಶಗಳಲ್ಲೂ ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಿದ್ದು, ಚೀನಾದ ಕಂಪನಿಯೊಂದು ಕೆರಿಬಿಯನ್ ತೀರದ ನಿಕರಾಗುವಾದಲ್ಲಿ ಆಳ ಸಮುದ್ರ ಬಂದರು ನಿರ್ಮಿಸುವ ಕುರಿತು ಮಾತುಕತೆ ನಡೆಸುತ್ತಿದೆ ಎಂದು ವಿವರಿಸಿವೆ.

ಮನಾಗುವಾದೊಡನೆ ಚೀನಾ ಮುಕ್ತ ವ್ಯಾಪಾರ ಒಪ್ಪಂದ

ಮನಾಗುವಾದೊಡನೆ ಚೀನಾ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದು, ಅದು 2021ರಲ್ಲಿ ತೈಪೆಯ ಬದಲು ಚೀನಾದೊಡನೆ ರಾಜತಾಂತ್ರಿಕ ಸಂಬಂಧ ವೃದ್ಧಿಸಿತು. ಫೆಬ್ರವರಿ ತಿಂಗಳಲ್ಲಿ ಬೀಜಿಂಗ್ ಈ ಒಪ್ಪಂದವನ್ನು ಇನ್ನಷ್ಟು ತೀವ್ರಗೊಳಿಸಲಿದೆ ಎನ್ನಲಾಗಿತ್ತು. ಇತರ ಸೋರಿಕೆಯಾದ ದಾಖಲೆಗಳು ಚೀನಾ ಉಕ್ರೇನ್ ಯುದ್ಧದಲ್ಲಿ ರಷ್ಯಾಗೆ ನೆರವು ಕಳುಹಿಸುವ ಸಾಧ್ಯತೆಗಳನ್ನು ಅಂದಾಜಿಸುತ್ತಿತ್ತು.

ಚೀನಾ ಇದಕ್ಕೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಿ, ಒಂದು ವೇಳೆ ಉಕ್ರೇನ್ ಏನಾದರೂ ರಷ್ಯಾದ ಕಾರ್ಯತಂತ್ರದ ಪ್ರಾಮುಖ್ಯತೆ ಹೊಂದಿರುವ ಪ್ರದೇಶಗಳ ಮೇಲೆ ದಾಳಿ ನಡೆಸಿದರೆ ಅಥವಾ ಹಿರಿಯ ರಷ್ಯನ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದರೆ, ಹೆಚ್ಚಿನ ಉಪಕರಣಗಳನ್ನು ರಷ್ಯಾಗೆ ಪೂರೈಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಟೆಕ್ಸಾಸ್‌ನಿಂದ ನೆರವೇರಲಿದೆ ಸ್ಟಾರ್‌ಲಿಂಕ್‌ನ ಮೊದಲ ಹಾರಾಟ

ಸಿಎನ್ಎನ್ ವರದಿಯ ಪ್ರಕಾರ, ಚೀನಾ ರಷ್ಯಾಗೆ ಮಾರಣಾಂತಿಕ ಆಯುಧಗಳನ್ನು ಪೂರೈಸಿ, ಅಮೆರಿಕಾ ಮತ್ತು ನ್ಯಾಟೋಗಳು ಉಕ್ರೇನಿಗೆ ಮಾರಕಾಸ್ತ್ರಗಳನ್ನು ಪೂರೈಸಿರುವುದಕ್ಕೆ ಪ್ರತಿಯಾಗಿ ತಾನು ಈ ಕ್ರಮ ಕೈಗೊಂಡಿರುವುದಾಗಿ ಹೇಳಬಹುದು ಎನ್ನಲಾಗಿದೆ. ಒಂದೊಮ್ಮೆ ಉಕ್ರೇನ್ ಏನಾದರೂ ರಷ್ಯಾ ಮೇಲೆ ಪ್ರಭಾವಶಾಲಿ ದಾಳಿ ಸಂಘಟಿಸಿದರೆ, ಚೀನಾ ಯುದ್ಧ ತೀವ್ರತೆ ಪಡೆಯುವುದಕ್ಕೆ ಅಮೆರಿಕಾವೇ ನೇರ ಕಾರಣ ಎಂದು ಭಾವಿಸುವ ಸಾಧ್ಯತೆಗಳಿವೆ.

ಈ ವರ್ಷದ ಆರಂಭದಲ್ಲಿ, ಅಮೆರಿಕನ್ನರು ರಷ್ಯಾದ ಗುಪ್ತಚರ ಮಾಹಿತಿಯನ್ನು ಅರ್ಥೈಸಿಕೊಂಡ ಪ್ರಕಾರ, ಚೀನಾ ಉಕ್ರೇನ್ ಯುದ್ಧದಲ್ಲಿ ಬಳಸಲು ರಷ್ಯಾಗೆ ಪ್ರಬಲ ಆಯುಧಗಳನ್ನು ಪೂರೈಸಲು ಒಪ್ಪಿಗೆ ಸೂಚಿಸಿತು. ಅದರಲ್ಲೂ ಚೀನಾ ರಷ್ಯಾ ಗುಪ್ತಚರರಿಗೆ ಬೆಂಬಲ ನೀಡಲು ಆಯುಧಗಳನ್ನು ನಾಗರಿಕ ಬಳಕೆಯ ಉಪಕರಣಗಳ ಸೋಗಿನಲ್ಲೂ ರವಾನಿಸಲು ಒಪ್ಪಿಗೆ ಸೂಚಿಸಿತ್ತು ಎನ್ನಲಾಗಿದೆ. ಫೆಬ್ರವರಿ ತಿಂಗಳಲ್ಲಿ ಅಮೆರಿಕಾದ ಸೆಕ್ರೆಟರಿ ಆಫ್ ಸ್ಟೇಟ್ ಆ್ಯಂಟನಿ ಬ್ಲಿಂಕನ್ ಅವರು ಚೀನಾ ರಷ್ಯಾಗೆ ಮಹತ್ವದ ಬೆಂಬಲ ಒದಗಿಸಲು ಚಿಂತಿಸುತ್ತದೆ ಎಂಬ ಆರೋಪವನ್ನು ಬೀಜಿಂಗ್ ತಳ್ಳಿ ಹಾಕಿತು.

ಚೀನಾದ ರಾಷ್ಟ್ರೀಯವಾದ ಟ್ಯಾಬ್ಲಾಯ್ಡ್ ಪತ್ರಿಕೆ ಗ್ಲೋಬಲ್ ಟೈಮ್ಸ್‌ನ ಮಾಜಿ ಮುಖ್ಯ ಸಂಪಾದಕ ಹು ಕ್ಸಿಜಿನ್ ಅವರು ಚೀನಾಗೆ ಸಂಬಂಧಿಸಿದಂತೆ ಹೊರಬಂದಿರುವ ಅಮೆರಿಕಾದ ಹಲವು ಗುಪ್ತಚರ ಸಂಗತಿಗಳು ಸಂಕೇತ ಗುಪ್ತಚರ ಮಾಹಿತಿಯ ರೂಪದಲ್ಲಿದ್ದು, ಅಮೆರಿಕಾ ತಾಂತ್ರಿಕತೆಯನ್ನು ಬಳಸಿಕೊಂಡು, ಚೀನಾದಿಂದ ಮಾಹಿತಿ ಕಲೆಹಾಕಿರುವುದನ್ನು ಸಾಬೀತುಪಡಿಸುತ್ತದೆ ಎಂದಿದ್ದರು.

ಚೀನಾದೊಳಗಿನ ಮಾಹಿತಿದಾರರನ್ನು ಬಯಲಿಗೆ ತಂದಿರುವ ಕಾರಣದಿಂದ, ಚೀನಾಗೆ ಸಂಬಂಧಿಸಿದಂತೆ ಅಮೆರಿಕಾದ ಗುಪ್ತಚರ ಮಾಹಿತಿಗಳು ಅಸ್ಪಷ್ಟವಾಗಿವೆ ಎಂದು ಹು ಮಾಧ್ಯಮಗಳಿಗೆ ಹೇಳಿದ್ದಾರೆ. ಅಮೆರಿಕಾದ ಈ ರಹಸ್ಯ ಮಾಹಿತಿ ಸೋರಿಕೆಯ ವಿಚಾರದಲ್ಲಿ ಓರ್ವ 21 ವರ್ಷದ ಏರ್ ನ್ಯಾಷನಲ್ ಗಾರ್ಡ್ಸ್‌ಮ್ಯಾನ್ ಒಬ್ಬನ ಪಾತ್ರವಿದೆ ಎನ್ನಲಾಗಿದ್ದು, ಅಮೆರಿಕಾದ ಕಾನೂನು ಅಧಿಕಾರಿಗಳು ಆತನನ್ನು ಗುರುವಾರ ಬಂಧಿಸಿದ್ದಾರೆ.

ಲೇಖನ- ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:01 pm, Sun, 16 April 23

ತಾಜಾ ಸುದ್ದಿ
ಸ್ವೀಟ್​ ಅಂಗಡಿಗಳ ಮೇಲೆ ದಾಳಿ; ಪತ್ತೆಯಾಯ್ತು ಕ್ಯಾನ್ಸರ್​ ಕಾರಕ ಅಂಶ
ಸ್ವೀಟ್​ ಅಂಗಡಿಗಳ ಮೇಲೆ ದಾಳಿ; ಪತ್ತೆಯಾಯ್ತು ಕ್ಯಾನ್ಸರ್​ ಕಾರಕ ಅಂಶ
ಮುಡಾ ನೀಡಿದ್ದನ್ನೇ ಸಿಎಂ ಪತ್ನಿ ಸ್ವೀಕರಿಸಿದ್ದು ಅಪರಾಧವಾಗಿದೆ: ಪೊನ್ನಣ್ಣ
ಮುಡಾ ನೀಡಿದ್ದನ್ನೇ ಸಿಎಂ ಪತ್ನಿ ಸ್ವೀಕರಿಸಿದ್ದು ಅಪರಾಧವಾಗಿದೆ: ಪೊನ್ನಣ್ಣ
ಧುಮ್ಮಿಕ್ಕಿ ಹರಿಯುವ ಜಲಪಾತದಲ್ಲಿ ಯುವಕನಿಂದ ಮೀನು ಹಿಡಿಯುವ ಹುಚ್ಚು ಸಾಹಸ!
ಧುಮ್ಮಿಕ್ಕಿ ಹರಿಯುವ ಜಲಪಾತದಲ್ಲಿ ಯುವಕನಿಂದ ಮೀನು ಹಿಡಿಯುವ ಹುಚ್ಚು ಸಾಹಸ!
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಟೀಮ್ ಇಂಡಿಯಾ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಟೀಮ್ ಇಂಡಿಯಾ
ಮುಡಾ ಅಕ್ರಮ ಸಿಬಿಐಗೆ ಒಪ್ಪಿಸುವ ವಿಚಾರಕ್ಕೆ ಸಿದ್ದರಾಮಯ್ಯ ಅಸಮಂಜಸ ಉತ್ತರ
ಮುಡಾ ಅಕ್ರಮ ಸಿಬಿಐಗೆ ಒಪ್ಪಿಸುವ ವಿಚಾರಕ್ಕೆ ಸಿದ್ದರಾಮಯ್ಯ ಅಸಮಂಜಸ ಉತ್ತರ
ನನ್ನ ಹೆಸರೇ ಬೆಂಕಿ, ಹಾಟ್ ಆಗಿ ಇರಲೇ ಬೇಕಲ್ಲ: ತನಿಷಾ ಕುಪ್ಪಂಡ
ನನ್ನ ಹೆಸರೇ ಬೆಂಕಿ, ಹಾಟ್ ಆಗಿ ಇರಲೇ ಬೇಕಲ್ಲ: ತನಿಷಾ ಕುಪ್ಪಂಡ
ಪ್ರಧಾನಿ ಮೋದಿಯನ್ನು ಭೇಟಿಯಾದ ಟೀಮ್​​​​​ ಇಂಡಿಯಾ
ಪ್ರಧಾನಿ ಮೋದಿಯನ್ನು ಭೇಟಿಯಾದ ಟೀಮ್​​​​​ ಇಂಡಿಯಾ
ಉಕ್ಕಿ ಹರಿಯುತ್ತಿರುವ ಚಂಡಿಕಾ ಹೊಳೆಯಲ್ಲಿ ಸಿಲುಕಿದ ಪ್ರಯಾಣಕರಿದ್ದ ಬಸ್!
ಉಕ್ಕಿ ಹರಿಯುತ್ತಿರುವ ಚಂಡಿಕಾ ಹೊಳೆಯಲ್ಲಿ ಸಿಲುಕಿದ ಪ್ರಯಾಣಕರಿದ್ದ ಬಸ್!
Team India: ಟೀಮ್ ಇಂಡಿಯಾದ ಚಾಂಪಿಯನ್ಸ್​ ಜೆರ್ಸಿ ಅನಾವರಣ
Team India: ಟೀಮ್ ಇಂಡಿಯಾದ ಚಾಂಪಿಯನ್ಸ್​ ಜೆರ್ಸಿ ಅನಾವರಣ
ಮುಂಜಾನೆ ಮಂಜಿನ ನಡುವೆ ಟೀಮ್ ಇಂಡಿಯಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಮುಂಜಾನೆ ಮಂಜಿನ ನಡುವೆ ಟೀಮ್ ಇಂಡಿಯಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ