ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದ ಶಿವೆಲುಚ್ ಜ್ವಾಲಾಮುಖಿ ಸ್ಫೋಟ; ವಿಮಾನಯಾನಕ್ಕೆ ಅಡ್ಡಿ

ಸ್ಥಳೀಯ ಅಧಿಕಾರಿಗಳು ಶಾಲೆಗಳನ್ನು ಮುಚ್ಚಿದ್ದಾರೆ, ಸಾಮಾನ್ಯ ಹಳ್ಳಿಗಳಲ್ಲಿ ವಾಸಿಸುವ ನಿವಾಸಿಗಳನ್ನು ಮನೆಯೊಳಗೆ ಇರಲು ಆದೇಶಿಸಲಾಗಿದೆ ಎಂದು ರಾಯಿಟರ್ಸ್ ವರದಿ ಹೇಳಿದೆ. ನಾಗರಿಕರು ಸುರಕ್ಷಿತವಾಗಿರುವಂತೆ ಉಸ್ಟ್-ಕಮ್ಚಾಟ್ಸ್ಕಿ ಪುರಸಭೆಯ ಪ್ರದೇಶದ ಮುಖ್ಯಸ್ಥ ಒಲೆಗ್ ಬೊಂಡರೆಂಕೊ ಟೆಲಿಗ್ರಾಮ್ ಪೋಸ್ಟ್‌ನಲ್ಲಿ ಕೇಳಿಕೊಂಡಿದ್ದಾರೆ.

ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದ ಶಿವೆಲುಚ್ ಜ್ವಾಲಾಮುಖಿ ಸ್ಫೋಟ; ವಿಮಾನಯಾನಕ್ಕೆ ಅಡ್ಡಿ
ಜ್ವಾಲಾಮುಖಿ ಸ್ಫೋಟ
Follow us
|

Updated on: Apr 11, 2023 | 4:01 PM

ಪೂರ್ವ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ರಷ್ಯಾದ (Russia) ಶಿವೆಲುಚ್ ಜ್ವಾಲಾಮುಖಿ (Shiveluch volcano) ಮಂಗಳವಾರ ಮುಂಜಾನೆ ಸ್ಫೋಟಗೊಂಡಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಜ್ವಾಲಾಮುಖಿಯು 10 ಕಿಲೋಮೀಟರ್ ಎತ್ತರದಲ್ಲಿ ಬೂದಿಯನ್ನು ಮೇಲೆಸೆದಿದ್ದು ಇದು ವಿಮಾನ ಸಂಚಾರಕ್ಕೆ ಅಪಾಯವನ್ನುಂಟುಮಾಡಿದೆ ಕಮ್ಚಟ್ಕಾ ಜ್ವಾಲಾಮುಖಿ ಸ್ಫೋಟ ಪ್ರತಿಕ್ರಿಯೆ ತಂಡವನ್ನು (KVERT) ಹೇಳಿರುವುದಾಗಿ ರಾಯಿಟರ್ಸ್ ವರದಿಯು ಹೇಳಿದೆ.KVERT ವಿಮಾನಯಾನಕ್ಕಾಗಿ ಕೋಡ್ ರೆಡ್ ಜ್ವಾಲಾಮುಖಿ ವೀಕ್ಷಣಾಲಯದ ಸೂಚನೆಯನ್ನು ನೀಡಿತು ಮತ್ತು ಬೂದಿ ಕಣ ಯಾವುದೇ ಸಮಯದಲ್ಲಿ 15 ಕಿಮೀಗಳವರೆಗೆ ತಲುಪಬಹುದು ಎಂದು ಹೇಳಿದೆ. ಈಗಿರುವ ಚಟುವಟಿಕೆಯು ಅಂತರರಾಷ್ಟ್ರೀಯ ಮತ್ತು ಕಡಿಮೆ ಎತ್ತರದಲ್ಲಿಹಾರುವ ವಿಮಾನಗಳ ಮೇಲೆ ಪರಿಣಾಮ ಬೀರಬಹುದು ಎಂದು ಸೂಚನೆ ಹೇಳಿದೆ.

ಮೋಡವು ಪಶ್ಚಿಮ ಮತ್ತು ದಕ್ಷಿಣಕ್ಕೆ ಚಲಿಸಿದ್ದು  400 ರಿಂದ 270 ಕಿಲೋಮೀಟರ್‌ಗಳಷ್ಟು ಇದು ಆವರಿಸಿಕೊಂಡಿದೆ ಎಂದು ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್‌ನ ಟೆಲಿಗ್ರಾಮ್ ಪುಟದ ಜಿಯೋಫಿಸಿಕಲ್ ಸಮೀಕ್ಷೆಯ ಕಮ್ಚಟ್ಕಾ ಶಾಖೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಹೇಳಿದೆ. ಬೂದಿ ಮೋಡ ಹರಡುತ್ತಿದೆ ಎಂದು ರಷ್ಯಾದ ಮಾಧ್ಯಮಗಳು ಹೇಳಿವೆ.

ಸ್ಥಳೀಯ ಅಧಿಕಾರಿಗಳು ಶಾಲೆಗಳನ್ನು ಮುಚ್ಚಿದ್ದಾರೆ, ಸಾಮಾನ್ಯ ಹಳ್ಳಿಗಳಲ್ಲಿ ವಾಸಿಸುವ ನಿವಾಸಿಗಳನ್ನು ಮನೆಯೊಳಗೆ ಇರಲು ಆದೇಶಿಸಲಾಗಿದೆ ಎಂದು ರಾಯಿಟರ್ಸ್ ವರದಿ ಹೇಳಿದೆ. ನಾಗರಿಕರು ಸುರಕ್ಷಿತವಾಗಿರುವಂತೆ ಉಸ್ಟ್-ಕಮ್ಚಾಟ್ಸ್ಕಿ ಪುರಸಭೆಯ ಪ್ರದೇಶದ ಮುಖ್ಯಸ್ಥ ಒಲೆಗ್ ಬೊಂಡರೆಂಕೊ ಟೆಲಿಗ್ರಾಮ್ ಪೋಸ್ಟ್‌ನಲ್ಲಿ ಕೇಳಿಕೊಂಡಿದ್ದಾರೆ.

ಕಳೆದ 10,000 ವರ್ಷಗಳಲ್ಲಿ ರಷ್ಯಾದ ಮೌಂಟ್ ಶಿವೆಲುಚ್ ಕನಿಷ್ಠ 60 ಬಾರಿ ಸ್ಫೋಟಗೊಂಡಿದೆ. ಕೊನೆಯ ಪ್ರಮುಖ ಸ್ಫೋಟವು 2007 ರಲ್ಲಿ ವರದಿಯಾಗಿದೆ. ಶಿವೇಲುಚ್ ಪರ್ವತದಲ್ಲಿ ಯಂಗ್ ಶಿವೇಲುಚ್ ಮತ್ತು ಓಲ್ಡ್ ಶಿವೇಲುಚ್ ಎಂಬ ಎರಡು ಭಾಗಗಳಿವೆ. ಯಂಗ್ ಶಿವೆಲುಚ್ ಇತ್ತೀಚಿನ ತಿಂಗಳುಗಳಲ್ಲಿ ಅತ್ಯಂತ ಸಕ್ರಿಯವಾಗಿದೆ. ಅದು 2,800 ಮೀಟರ್‌ಗಳ ಶಿಖರವನ್ನು ಹೊಂದಿದೆ ಮತ್ತು ಇದು 3,283 ಮೀಟರ್ ಎತ್ತರದ ಹಳೆಯ ಶಿವೆಲುಚ್‌ನಿಂದ ಹೊರಕ್ಕೆ ಚಾಚಿಕೊಂಡಿದೆ.

ಇದನ್ನೂ ಓದಿ: Haunted Hotel: ಅಮೆರಿಕದ ಟೆಕ್ಸಾಸ್​​ನಲ್ಲೊಂದು ಪ್ರಾಚೀನ ಭೂತ ಬಂಗಲೆ; ಇಲ್ಲಿನ ದೆವ್ವದ ಬಗ್ಗೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ

0631 ಗಂಟೆಗಳಲ್ಲಿ (ಸ್ಥಳೀಯ ಸಮಯ) ಸ್ಫೋಟ ಸಂಭವಿಸಿದೆ, ಜ್ವಾಲಾಮುಖಿಯಿಂದ ಬೂದಿ ಕ್ಲೈಚಿ ಸೇರಿದಂತೆ ಸ್ಥಳೀಯ ಹಳ್ಳಿಗಳ ಮೇಲೆ ಬಿದ್ದಿದೆ ಎಂದು ಬೊಂಡರೆಂಕೊ ತನ್ನ ಟೆಲಿಗ್ರಾಮ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಇನ್‌ಸ್ಟಿಟ್ಯೂಟ್ ಆಫ್ ವಾಲ್ಕನಾಲಜಿ ಆಂಡ್ ಸಿಸ್ಮಾಲಜಿ ಬೂದಿಯನ್ನು 8.5 ಸೆಂಟಿಮೀಟರ್‌ಗಳಲ್ಲಿ (3.35 ಇಂಚುಗಳು) ಅಳೆಯಲಾಗಿದೆ, ಇದು 60 ವರ್ಷಗಳಲ್ಲಿ ಅತ್ಯಧಿಕ ಮಟ್ಟವಾಗಿದೆ. ನಿವಾಸಿಗಳು ಮನೆಯೊಳಗೆ ಇರಲು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ” ಎಂದು ಬೊಂಡರೆಂಕೊ ಹೇಳಿದ್ದಾರೆ ರಷ್ಯಾದ ವಿಜ್ಞಾನಿಗಳನ್ನು ಉಲ್ಲೇಖಿಸಿ ನವೆಂಬರ್ 2022ರಲ್ಲಿ ರಾಯಿಟರ್ಸ್‌ನ ಪ್ರತ್ಯೇಕ ವರದಿಯು ರಷ್ಯಾದ ದೂರದ ಪೂರ್ವ ಕಂಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಶಿವೆಲುಚ್ ಜ್ವಾಲಾಮುಖಿಯು 15 ವರ್ಷಗಳಲ್ಲಿ ಅದರ ಮೊದಲ ಶಕ್ತಿಯುತ ಸ್ಫೋಟಕ್ಕೆ ಸಜ್ಜಾಗುತ್ತಿದೆ ಎಂದು ಹೇಳಿದೆ. ಕಮ್ಚಟ್ಕಾವು 29 ಸಕ್ರಿಯ ಜ್ವಾಲಾಮುಖಿಗಳಿಗೆ ನೆಲೆಯಾಗಿದೆ. ಇದು ಪೆಸಿಫಿಕ್ ಮಹಾಸಾಗರವನ್ನು ಸುತ್ತುವರೆದಿರುವ ಭೂಮಿಯ ವಿಶಾಲವಾದ ಬೆಲ್ಟ್ “ರಿಂಗ್ ಆಫ್ ಫೈರ್” ನ ಭಾಗವಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ