AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಕ್ಸಾಸ್‌ನಿಂದ ನೆರವೇರಲಿದೆ ಸ್ಟಾರ್‌ಲಿಂಕ್‌ನ ಮೊದಲ ಹಾರಾಟ

ಇಲಾನ್ ಮಸ್ಕ್ ಮಾಲೀಕತ್ವದ ಸ್ಪೇಸ್ ಎಕ್ಸ್ ಸಂಸ್ಥೆ ಶನಿವಾರ (ಏ.15)ರಂದು ತನ್ನ ಹೇಳಿಕೆಯಲ್ಲಿ ಸ್ಟಾರ್ ಶಿಪ್ ಹಾಗೂ ಸೂಪರ್ ಹೆವಿ ರಾಕೆಟ್‌ಗಳ ಮೊದಲ ಹಾರಾಟ ಪರೀಕ್ಷೆಯನ್ನು ಎಪ್ರಿಲ್ 17, ಸೋಮವಾರದಂದು ನಡೆಸುವುದಾಗಿ ಘೋಷಿಸಿದೆ.

ಟೆಕ್ಸಾಸ್‌ನಿಂದ ನೆರವೇರಲಿದೆ ಸ್ಟಾರ್‌ಲಿಂಕ್‌ನ ಮೊದಲ ಹಾರಾಟ
ಸ್ಟಾರ್ ಶಿಪ್ ಹಾಗೂ ಸೂಪರ್ ಹೆವಿ ರಾಕೆಟ್‌ಗಳ ಮೊದಲ ಹಾರಾಟಕ್ಕೆ ಸಿದ್ಧ
ಗಂಗಾಧರ​ ಬ. ಸಾಬೋಜಿ
|

Updated on:Apr 15, 2023 | 7:50 PM

Share

ಇಲಾನ್ ಮಸ್ಕ್ (Elon Musk) ಮಾಲೀಕತ್ವದ ಸ್ಪೇಸ್ ಎಕ್ಸ್ (SpaceX) ಸಂಸ್ಥೆ ಶನಿವಾರ (ಏ.15)ರಂದು ತನ್ನ ಹೇಳಿಕೆಯಲ್ಲಿ ಸ್ಟಾರ್ ಶಿಪ್ ಹಾಗೂ ಸೂಪರ್ ಹೆವಿ ರಾಕೆಟ್‌ಗಳ ಮೊದಲ ಹಾರಾಟ ಪರೀಕ್ಷೆಯನ್ನು ಎಪ್ರಿಲ್ 17, ಸೋಮವಾರದಂದು ನಡೆಸುವುದಾಗಿ ಘೋಷಿಸಿದೆ. ಸ್ಪೇಸ್ ಎಕ್ಸ್ ಸಂಸ್ಥೆ ತಾನು ಸ್ಟಾರ್ ಶಿಪ್ ರಾಕೆಟ್ ಪ್ರಥಮ ಹಾರಾಟಕ್ಕೆ ಅಗತ್ಯವಿರುವ ಎಲ್ಲ ನಿಯಂತ್ರಕ ಅನುಮತಿಗಳನ್ನು ಪಡೆದುಕೊಂಡಿರುವುದಾಗಿ ಹೇಳಿದೆ. ಸ್ಟಾರ್ ಶಿಪ್ ರಾಕೆಟ್ ಇಲ್ಲಿಯ ತನಕ ನಿರ್ಮಿಸಲಾಗಿರುವ ಅತ್ಯಂತ ಶಕ್ತಿಶಾಲಿ ರಾಕೆಟ್ ಎನ್ನಲಾಗಿದೆ. ಏಪ್ರಿಲ್ 14ರಂದು ಅಮೆರಿಕಾದ ಫೆಡರಲ್ ಏವಿಯೇಷನ್‌ ಅಡ್ಮಿನಿಸ್ಟ್ರೇಶನ್ (ಎಫ್ಎಎ) ಸ್ಪೇಸ್ ಎಕ್ಸ್ ಸಂಸ್ಥೆಗೆ ಟೆಕ್ಸಾಸ್​​ನಲ್ಲಿನ ಉಡಾವಣಾ ಕೇಂದ್ರದಿಂದ ರಾಕೆಟ್‌ನ ಹಾರಾಟ ಪರೀಕ್ಷೆಗೆ ಅನುಮತಿ ನೀಡಿತು. ಅಮೆರಿಕಾದಲ್ಲಿ ವಾಣಿಜ್ಯಿಕ ರಾಕೆಟ್‌ಗಳ ಹಾರಾಟ ಪರವಾನಗಿ ನೀಡುವ ಜವಾಬ್ದಾರಿ ಎಫ್ಎಎ ಹೊಂದಿದೆ.

ಸ್ಪೇಸ್ ಎಕ್ಸ್ ಸಂಸ್ಥೆ ಸಂಪೂರ್ಣವಾಗಿ ಮರುಬಳಕೆ ಮಾಡಬಲ್ಲ ಸಾಗಾಟ ವ್ಯವಸ್ಥೆಯಾದ ಸ್ಟಾರ್ ಶಿಪ್ ಅನ್ನು ಅಭಿವೃದ್ಧಿ ಪಡಿಸಿದ್ದು, ಇದು ವಸ್ತುಗಳು ಹಾಗೂ ವ್ಯಕ್ತಿಗಳನ್ನು ಭೂಮಿಯ ಕಕ್ಷೆಗೆ ಒಯ್ಯಬಲ್ಲದಾಗಿದೆ. ಈ ವ್ಯವಸ್ಥೆಯ ಮೂಲ ಗುರಿ ಚಂದ್ರ ಹಾಗೂ ಮಂಗಳ ಗ್ರಹದಲ್ಲಿ, ಹಾಗೂ ಇತರ ಗುರಿಗಳಲ್ಲಿ ಮಾನವ ಸಹಿತ ಅನ್ವೇಷಣೆ ನಡೆಸಲು ನೆರವಾಗುವುದು.

ಇದನ್ನೂ ಓದಿ: ಪೆಂಟಗನ್ ರಹಸ್ಯಗಳನ್ನು ಬಯಲು ಮಾಡಿದ ಆರೋಪಿ ಜ್ಯಾಕ್ ಟೀಕ್ಸೀರ ಬಂಧನ: ವಿಚಾರಣೆ ಆರಂಭಿಸಿದ ಎಫ್‌ಬಿಐ

ಇಲ್ಲಿಯ ತನಕ ಸ್ಪೇಸ್ ಎಕ್ಸ್ ತಂಡ ಸ್ಟಾರ್ ಶಿಪ್‌ನ ಅಪ್ಪರ್ ಸ್ಟೇಜ್ ಪರೀಕ್ಷೆಗಳನ್ನು ಸ್ಟಾರ್ ಬೇಸ್‌ನಿಂದ ಹಲವು ಬಾರಿ ನಡೆಸಿದೆ. ಈ ಪರೀಕ್ಷೆಗಳು ನಿಯಂತ್ರಿತ ಹಾರಾಟ ನಡೆಸುವ ವಿಶಿಷ್ಟ ರೀತಿಯನ್ನು ಪ್ರದರ್ಶಿಸಲು ಯಶಸ್ವಿಯಾಗಿದ್ದು, ಈ ವಿಧಾನವನ್ನು ಮೊದಲು ಎಲ್ಲೂ ಪ್ರಯತ್ನಿಸಲಾಗಿಲ್ಲ.

ಇದರ ಕುರಿತು ತನ್ನ ಹೇಳಿಕೆ ನೀಡಿದ ಸಂಸ್ಥೆ ಹಾರಾಟ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದ್ದು, ಸ್ಟಾರ್ ಶಿಪ್ ಮರು ಪ್ರವೇಶದ ಸಬ್ ಸಾನಿಕ್ ಹಂತವನ್ನು ದಾಟಿ, ತನ್ನ ಇಂಜಿನ್‌ಗಳನ್ನು ಪುನಃ ಚಾಲನೆಗೊಳಿಸಿ, ಲಂಬವಾಗಿ ಭೂಸ್ಪರ್ಶ ನಡೆಸಲಿದೆ.

ಸ್ಟಾರ್ ಶಿಪ್‌ನ ಅಪ್ಪರ್ ಸ್ಟೇಜ್ ಪರೀಕ್ಷೆಗಳೊಡನೆ, ಸ್ಪೇಸ್ ಎಕ್ಸ್ ತನ್ನ ಸೂಪರ್ ಹೆವಿ ರಾಕೆಟ್‌ನ ಹಲವು ಪರೀಕ್ಷೆಗಳನ್ನೂ ನಡೆಸಿದೆ. ಈ ಪರೀಕ್ಷೆಗಳಲ್ಲಿ ಹೆಚ್ಚು ಹೆಚ್ಚು ಸಂಕೀರ್ಣ ಸ್ಟಾಟಿಕ್ ಫೈರ್‌ಗಳೂ ಸೇರಿದ್ದು, ಅದರ ಪರಿಣಾಮವಾಗಿ 31 ರಾಪ್ಟರ್ ಇಂಜಿನ್ ಪೂರ್ಣಾವಧಿ ಪರೀಕ್ಷೆಯೂ ನೆರವೇರಿತು. ಈ ಪರೀಕ್ಷೆಯಲ್ಲಿ ಏಕಕಾಲದಲ್ಲಿ ಅತಿಹೆಚ್ಚು ರಾಕೆಟ್ ಇಂಜಿನ್‌ಗಳನ್ನು ಉರಿಸಲಾಗಿದ್ದು, ಇದೊಂದು ಐತಿಹಾಸಿಕ ದಾಖಲೆಯೂ ಆಗಿದೆ.

ಇದನ್ನೂ ಓದಿ: ಗುರು ಗ್ರಹದ ಹಿಮಾಚ್ಛಾದಿತ ಚಂದ್ರರ ಅನ್ವೇಷಣೆ: ಜ್ಯೂಸ್ ಎಂಬ ಅದ್ಭುತ ಬಾಹ್ಯಾಕಾಶ ಸಾಹಸ!

ಸ್ಪೇಸ್ ಎಕ್ಸ್ ಒಂದು ಟವರ್ ನಿರ್ಮಾಣವನ್ನೂ ನೆರವೇರಿಸಿದ್ದು, ಇದು ರಾಕೆಟ್‌ಗಳ ಉಡಾವಣೆಗೆ ಮತ್ತು ಭೂಸ್ಪರ್ಶಕ್ಕೆ ನೆರವಾಗುತ್ತದೆ. ಇದು ಜಗತ್ತಿನ ಅತಿದೊಡ್ಡ ಟವರ್ ಆಗಿದೆ. ಸ್ಪೇಸ್ ಎಕ್ಸ್ ಪ್ರಕಾರ, ಈ “ಲಾಂಚ್ ಆ್ಯಂಡ್ ಕ್ಯಾಚ್” ಟವರ್ ಸೂಪರ್ ಹೆವಿ ರಾಕೆಟ್ ಬೂಸ್ಟರ್‌ನ ಸಂಯೋಜನೆಗೆ, ಉಡಾವಣೆಗೆ ಮತ್ತು ಭೂಸ್ಪರ್ಶಕ್ಕೆ ನೆರವಾಗಲಿದ್ದು, ಅಂದಾಜು 146 ಮೀಟರ್ ಅಥವಾ ಬಹುತೇಕ 500 ಅಡಿಗಳಷ್ಟು ಎತ್ತರವಿದೆ.

ಸ್ಪೇಸ್ ಎಕ್ಸ್ ತನ್ನ ಹೇಳಿಕೆಯಲ್ಲಿ, ಈ ಆರಂಭಿಕ ಹಾರಾಟ ಪರೀಕ್ಷೆಗಳಲ್ಲಿ ನಾವು ಸ್ಟಾರ್ ಶಿಪ್ ಅನ್ನು ಲಂಬವಾಗಿ ಭೂಸ್ಪರ್ಶ ನಡೆಸಲು ಅಥವಾ ಸೂಪರ್ ಹೆವಿ ಬೂಸ್ಟರ್ ಅನ್ನು ಲಂಬವಾಗಿ ಹಿಡಿಯಲು ಪ್ರಯತ್ನಿಸುವುದಿಲ್ಲ ಎಂದಿದೆ.

ಗಿರೀಶ್ ಲಿಂಗಣ್ಣ

ಲೇಖನ: ಗಿರೀಶ್​ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Published On - 7:47 pm, Sat, 15 April 23