ಗುರು ಗ್ರಹದ ಹಿಮಾಚ್ಛಾದಿತ ಚಂದ್ರರ ಅನ್ವೇಷಣೆ: ಜ್ಯೂಸ್ ಎಂಬ ಅದ್ಭುತ ಬಾಹ್ಯಾಕಾಶ ಸಾಹಸ!

ಯುರೋಪಿಯನ್ ಸ್ಪೇಸ್ ಏಜೆನ್ಸಿ ಗುರು ಗ್ರಹ ಮತ್ತು ಅದರ ಮೂರು ಅತಿದೊಡ್ಡ, ಸುಂದರವಾದ ಚಂದ್ರರ ಕುರಿತು ಅನ್ವೇಷಣೆ ನಡೆಸುವ ಸ್ಪೇಸ್ ಕ್ರಾಫ್ಟ್ ಅನ್ನು ಉಡಾವಣೆಗೊಳಿಸಿದೆ.

ಗುರು ಗ್ರಹದ ಹಿಮಾಚ್ಛಾದಿತ ಚಂದ್ರರ ಅನ್ವೇಷಣೆ: ಜ್ಯೂಸ್ ಎಂಬ ಅದ್ಭುತ ಬಾಹ್ಯಾಕಾಶ ಸಾಹಸ!
ಜ್ಯೂಸ್ ಎಂಬ ಅದ್ಭುತ ಬಾಹ್ಯಾಕಾಶ ಸಾಹಸ!
Follow us
ಗಂಗಾಧರ​ ಬ. ಸಾಬೋಜಿ
|

Updated on:Apr 14, 2023 | 9:30 PM

ಯುರೋಪಿಯನ್ ಸ್ಪೇಸ್ ಏಜೆನ್ಸಿ (European Space Agency) ಗುರು ಗ್ರಹ ಮತ್ತು ಅದರ ಮೂರು ಅತಿದೊಡ್ಡ, ಸುಂದರವಾದ ಚಂದ್ರರ ಕುರಿತು ಅನ್ವೇಷಣೆ ನಡೆಸುವ ಸ್ಪೇಸ್ ಕ್ರಾಫ್ಟ್ ಅನ್ನು ಉಡಾವಣೆಗೊಳಿಸಿದೆ. ಶುಕ್ರವಾರ ಯುರೋಪಿಯನ್ ಸಮಯ ಬೆಳಗ್ಗೆ 8:14ಕ್ಕೆ ಜ್ಯೂಸ್ (ಜ್ಯುಪೀಟರ್ ಐಸಿ ಮೂನ್ಸ್ ಎಕ್ಸ್‌ಪ್ಲೋರರ್‌) ಮಿಷನ್ ಅನ್ನು ಯುರೋಪಿನ ಫ್ರೆಂಚ್ ಗಯಾನಾದಿಂದ ಏರಿಯಾನ್ 5 ರಾಕೆಟ್ ಮೂಲಕ ಉಡಾವಣೆಗೊಳಿಸಲಾಯಿತು. ಜ್ಯೂಸ್ ಸ್ಪೇಸ್ ಕ್ರಾಫ್ಟ್ ಏರಿಯಾನ್ 5 ರಾಕೆಟ್‌ನಿಂದ ಉಡಾವಣೆಗೊಂಡ 28 ನಿಮಿಷಗಳ ಬಳಿಕ ಬೇರ್ಪಟ್ಟಿತು. ಉಡಾವಣೆಗೊಂಡ ಒಂದು ಗಂಟೆಯ ಬಳಿಕ ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ (ಇಎಸ್ಎ) ಜ್ಯೂಸ್‌ನಿಂದ ಭೂಮಿಯಲ್ಲಿನ ಯೋಜನಾ ನಿಯಂತ್ರಣ ಕೇಂದ್ರ ಸ್ಪೇಸ್ ಕ್ರಾಫ್ಟ್ ಜೊತೆ ಸಂಪರ್ಕ ಸಾಧಿಸಿದೆ ಎಂದು ಸಂಕೇತ ಪಡೆದುಕೊಂಡಿತು.

ಇಎಸ್ಎಯ ಜ್ಯೂಸ್ ಮಿಷನ್ ಎಂಟು ವರ್ಷಗಳ ಕಾಲ ಪ್ರಯಾಣ ಬೆಳೆಸಿ, ಸೌರಮಂಡಲದ ಅತಿದೊಡ್ಡ ಗ್ರಹವಾದ ಗುರುವನ್ನು ತಲುಪಲಿದೆ. ಅದರ ಪ್ರಯಾಣದುದ್ದಕ್ಕೂ, ಸ್ಪೇಸ್ ಕ್ರಾಫ್ಟ್ ಗುರುತ್ವಾಕರ್ಷಣಾ ಬಲದ ಸಹಾಯ ಪಡೆದುಕೊಂಡು ಮುನ್ನಡೆಯಲಿದೆ. ತನ್ನ ಪ್ರಯಾಣಕ್ಕೆ ಈ ಸ್ಪೇಸ್ ಕ್ರಾಫ್ಟ್ ಭೂಮಿ, ಚಂದ್ರ, ಹಾಗೂ ಶುಕ್ರ ಗ್ರಹಗಳಿಂದ ಗುರುತ್ವಾಕರ್ಷಣಾ ಬಲದ ಸಹಾಯ ಪಡೆದುಕೊಳ್ಳಲಿದೆ.

ಇದನ್ನೂ ಓದಿ: ಬಯಲಿಗೆ ಬಂದ ಅಮೆರಿಕಾದ ಟಾಪ್ ಸೀಕ್ರೆಟ್ ದಾಖಲೆಗಳು: ಸೋರಿಕೆಯಾದ ದಾಖಲೆಗಳು ಉಕ್ರೇನ್ ಯುದ್ಧದ ಬಗ್ಗೆ ಏನು ಹೇಳುತ್ತಿವೆ?

ಜುಲೈ 2031ರಲ್ಲಿ ಜ್ಯೂಸ್ ಗುರು ಗ್ರಹವನ್ನು ತಲುಪಿ, ಮೂರೂವರೆ ವರ್ಷಗಳ ಕಾಲ ಗ್ರಹದ ಸುತ್ತಲೂ ಸುತ್ತಾಡಿ, ಫ್ಲೈಬೈ ಗಳನ್ನು ನಡೆಸಿ, (ಫ್ಲೈ ಬೈ ಎಂದರೆ ಸ್ಪೇಸ್ ಕ್ರಾಫ್ಟ್ ತನ್ನ ಗುರಿಯಾದ ಇತರ ಕಾಯಗಳ ಸಮೀಪಕ್ಕೆ ತೆರಳಿ, ವಿವಿಧ ಅನ್ವೇಷಣೆ ನಡೆಸುವುದು) ಗುರು ಗ್ರಹದ ಮೂರು ಚಂದ್ರಗಳಾದ ಗೆನಿಮೇಡ್, ಕ್ಯಾಲಿಸ್ಟೋ ಹಾಗೂ ಯುರೋಪಾಗಳ ಅನ್ವೇಷಣೆ ನಡೆಸಲಿದೆ. ಈ ಯೋಜನೆಯ ಅಂತಿಮ ಹಂತಗಳಲ್ಲಿ, ಜ್ಯೂಸ್ ಗೆನಿಮೇಡ್ ಚಂದ್ರನನ್ನು ಸುತ್ತುವರಿದು, ಹೊರಗಿನ ಸೌರಮಂಡಲದ ಚಂದ್ರನ ಕಕ್ಷೆಯಲ್ಲಿ ಚಲಿಸಿದ ಮೊದಲ ಸ್ಪೇಸ್ ಕ್ರಾಫ್ಟ್ ಎನಿಸಿಕೊಳ್ಳಲಿದೆ.

ಗೆನಿಮೇಡ್, ಕ್ಯಾಲಿಸ್ಟೋ ಹಾಗೂ ಯುರೋಪಾಗಳು ಹಿಮಾಚ್ಛಾದಿತ ಲೋಕಗಳಾಗಿದ್ದು, ಅವುಗಳ ಮೇಲ್ಮೈಯ ತಳಭಾಗದಲ್ಲಿ ಸಮುದ್ರಗಳಿವೆ. ಈ ಸಮುದ್ರಗಳು ಜೀವ ವಿಕಾಸಕ್ಕೆ ನೆರವಾಗುವ ಸಾಧ್ಯತೆಗಳಿವೆ.

2024ರಲ್ಲಿ, ನಾಸಾ ಯುರೋಪಾ ಕ್ಲಿಪ್ಪರ್ ಯೋಜನೆಯನ್ನು ಉಡಾವಣೆಗೊಳಿಸಲಿದ್ದು, ಅದು ಗುರು ಗ್ರಹದ ಮೇಲೆ ಎಪ್ರಿಲ್ 2030ರಲ್ಲಿ ತಲುಪಲಿದೆ. ಈ ಸ್ಪೇಸ್ ಕ್ರಾಫ್ಟ್ ಯುರೋಪಾಗೆ 50 ಫ್ಲೈ ಬೈ ನಡೆಸಿ, ಅಂತಿಮವಾಗಿ ಚಂದ್ರನ ಮೇಲ್ಮೈಯ 16 ಮೈಲಿ (25 ಕಿಲೋಮೀಟರ್) ಎತ್ತರದಿಂದ ಇಳಿಯಲಿದೆ. ಈ ಎರಡು ಯೋಜನೆಗಳಿಗೆ ಗುರು ಗ್ರಹ ಮತ್ತದರ ಚಂದ್ರರ ಸುತ್ತಲಿನ ಹಲವಾರು ನಿಗೂಢತೆಗಳನ್ನು ಬಯಲಿಗೆ ತರಲಿವೆ.

ಜ್ಯೂಸ್ ಯೋಜನೆಯ ಗುರಿ 10 ಶಕ್ತಿಶಾಲಿ ಉಪಕರಣಗಳನ್ನು ಬಳಸಿ ಚಂದ್ರನ ಮೂರು ಹಿಮಾಚ್ಛಾದಿತ ಚಂದ್ರರ ಕುರಿತು ಅಧ್ಯಯನ ನಡೆಸುವುದಾಗಿದೆ. ಜ್ಯೂಸ್ ಯೋಜನೆಯು ಈ ಚಂದ್ರರಲ್ಲಿ ಸಮುದ್ರಗಳಿವೆಯೇ ಎಂದು ಪರಿಶೀಲಿಸಿ, ಗೆನಿಮೇಡ್ ಚಂದ್ರನ ವಿಶಿಷ್ಟ ಗುಣಲಕ್ಷಣಗಳನ್ನು ಅಧ್ಯಯನ ನಡೆಸಿ, ಗುರು ಗ್ರಹದ ಚಂದ್ರರು ಜೀವ ವಿಕಾಸಕ್ಕೆ ನೆರವಾಗಲಿವೆಯೇ ಎಂದು ತಿಳಿಯಲು ನೆರವಾಗಲಿದೆ.

Girish Linganna

ವಿಶೇಷ ಲೇಖನ: ಗಿರೀಶ್​ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Published On - 9:29 pm, Fri, 14 April 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್