Mission Rhumi-2024: ಭಾರತದ ಮೊದಲ ಮರುಬಳಕೆ ಹೈಬ್ರಿಡ್ ರಾಕೆಟ್ ಉಡಾವಣೆ ಯಶಸ್ವಿ

ಭಾರತ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಇದು ದೇಶಕ್ಕೆ ಹೆಮ್ಮೆಯ ವಿಚಾರವಾಗಿದೆ. ಇಂದು RHUMI 1 ಹೆಸರಿನ ತನ್ನ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್ ಉಡಾವಣೆ ಮಾಡಲಾಗಿದೆ. ಈ ಉಪಗ್ರಹದ ಸಾಮಾರ್ಥ್ಯ ಏನು? ಭಾರತಕ್ಕೆ ಇದರಿಂದ ಯಾವೆಲ್ಲ ಲಾಭಗಳಿವೆ ಎಂಬ ಇಲ್ಲಿದೆ ಮಾಹಿತಿ ಹಾಗೂ ಉಡಾವಣೆಯ ವಿಡಿಯೋ ಇಲ್ಲಿದೆ ನೋಡಿ

Mission Rhumi-2024: ಭಾರತದ ಮೊದಲ ಮರುಬಳಕೆ ಹೈಬ್ರಿಡ್ ರಾಕೆಟ್ ಉಡಾವಣೆ ಯಶಸ್ವಿ
RHUMI 1

Updated on: Aug 24, 2024 | 9:48 AM

ಭಾರತವು RHUMI 1 ಹೆಸರಿನ ತನ್ನ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್​​​ನ್ನು ಇಂದು (ಆಗಸ್ಟ್ 24) ಯಶಸ್ವಿಯಾಗಿ ಉಡಾವಣೆ ಮಾಡಿದೆ. ತಮಿಳುನಾಡು ಮೂಲದ ಸ್ಟಾರ್ಟ್-ಅಪ್ ಸ್ಪೇಸ್ ಝೋನ್ ಇಂಡಿಯಾ ಅಭಿವೃದ್ಧಿಪಡಿಸಿದ ಈ ರಾಕೆಟ್​​ನ್ನು ಚೆನ್ನೈನ ECR ನ ತಿರುವಿದಂಧೈನಲ್ಲಿರುವ TTDC ಮೈದಾನದಿಂದ ಉಡಾವಣೆ ಮಾಡಲಾಯಿತು. ರಾಕೆಟ್ ಮೂರು ಕ್ಯೂಬ್ ಉಪಗ್ರಹಗಳು ಮತ್ತು ಐವತ್ತು PICO ಉಪಗ್ರಹಗಳನ್ನು ಉಪಕಕ್ಷೆಯ ಪಥಕ್ಕೆ ತೆಗೆದುಕೊಂಡು ಹೋಗುತ್ತದೆ. ರಾಕೆಟ್‌ನ ಅದ್ಭುತವಾಗಿ ವಿನ್ಯಾಸ ಮಾಡಲಾಗಿದೆ ಹಾಗೂ ಮರುಬಳಕೆ ಮಾಡಲಾಗಿದೆ.

ಈ ಯೋಜನೆಗೆ ಸಹಾಯ ಮಾಡಿದ ಮಾರ್ಟಿನ್ ಗ್ರೂಪ್, ಮೊಬೈಲ್ ಲಾಂಚರ್ ಬಳಸಿಕೊಂಡು ಉಡಾವಣೆ ನಡೆಸಲಾಗಿದೆ. ಇದು ರಾಕೆಟ್‌ನ ಬಹುಮುಖತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ರಾಕೆಟ್ ಪ್ರಮುಖ ವೈಶಿಷ್ಟ್ಯಗಳು:

1. ಹೊಂದಾಣಿಕೆ ಮಾಡಿಕೊಂಡು ಉಡಾಯಣಾ ಮಾಡಲಾಗಿದೆ: ಮಾರ್ಟಿನ್ ಗ್ರೂಪ್‌ ತಿಳಿಸಿರುವ ಪ್ರಕಾರ, ರಾಕೆಟ್ ಉಡಾವಣಾ ಕೋನ ರೂಪವನ್ನು ಹೊಂದಿದ್ದು, ಇದನ್ನು 0ಯಿಂದ 120 ಡಿಗ್ರಿಗಳವರೆಗೆ ನಿಖರವಾಗಿ ಸರಿಹೊಂದಿಸಬಹುದು. ಇದು ತನ್ನ ಪಥದ ಮೇಲೆ ನಿಖರವಾದ ನಿಯಂತ್ರಣವನ್ನು ಹೊಂದಿರುತ್ತದೆ.

2. ಶೈಕ್ಷಣಿಕ ಪರಿಣಾಮ: ಭಾರತದಾದ್ಯಂತ ಮತ್ತು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ರಾಕೆಟ್ ಮತ್ತು ಉಪಗ್ರಹ ತಂತ್ರಜ್ಞಾನದ ಉಚಿತ ಕಾರ್ಯಾಗಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.

3. CO2-ಆಧಾರಿತ ಪ್ಯಾರಾಚೂಟ್ ವ್ಯವಸ್ಥೆ: ಒಂದು ನವೀನತೆ, ಕಡಿಮೆ ವೆಚ್ಚ, ಪರಿಸರ ಸ್ನೇಹಿ ಹಾಗೂ ರಾಕೆಟ್ ಘಟಕಗಳಲ್ಲಿ ಸುರಕ್ಷಿತ ಮರುಜೋಡಾನೆಯನ್ನು ಕೂಡ ಖಚಿತಪಡಿಸುತ್ತದೆ.

ಇದನ್ನೂ ಓದಿ: ಅರ್ಹತೆ ಹೊಂದಿರದ ಸಿಬ್ಬಂದಿಯಿಂದ ವಿಮಾನ ನಿರ್ವಹಣೆ: ಏರ್ ಇಂಡಿಯಾಗೆ ₹98 ಲಕ್ಷ ದಂಡ

4. ಬಾಹ್ಯಾಕಾಶ ಪರಿಶೋಧನೆ ಮೀರಿ ಕಾರ್ಯಚರಣೆ : ಬಾಹ್ಯಾಕಾಶ ಪರಿಶೋಧನೆಯನ್ನು ಮೀರಿ ಕೃಷಿ, ಪರಿಸರ ಮೇಲ್ವಿಚಾರಣೆ ಮತ್ತು ವಿಪತ್ತು ನಿರ್ವಹಣೆಯಂತಹ ಕ್ಷೇತ್ರಗಳಿಗೆ ವಿಸ್ತರಿಸುತ್ತವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us