MK Stalin Oath taking: ತಮಿಳುನಾಡು ಮುಖ್ಯಮಂತ್ರಿಯಾಗಿ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್​ ಪ್ರಮಾಣ ವಚನ ಸ್ವೀಕಾರ

|

Updated on: May 07, 2021 | 2:02 PM

ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್​ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸಂಪುಟದ 33 ಸದಸ್ಯರೊಂದಿಗೆ ಇಂದು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.

MK Stalin Oath taking: ತಮಿಳುನಾಡು ಮುಖ್ಯಮಂತ್ರಿಯಾಗಿ ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್​ ಪ್ರಮಾಣ ವಚನ ಸ್ವೀಕಾರ
ಎಂ.ಕೆ. ಸ್ಟಾಲಿನ್​
Follow us on

ಚೆನ್ನೈ: ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್​ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸಂಪುಟದ 33 ಸದಸ್ಯರೊಂದಿಗೆ ಇಂದು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕೊರೊನಾ ನಿರ್ಬಂಧಗಳ ನಡುವೆ ಚೆನ್ನೈನ ರಾಜ್​ ಭವನದಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರ ಸಮ್ಮುಖದಲ್ಲಿ ಸರಳ ಸಮಾರಂಭದಲ್ಲಿ ಇಂದು ಬೆಳಿಗ್ಗೆ ಎಂ.ಕೆ ಸ್ಟಾಲಿನ್​ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಈ ಸಂದರ್ಭದಲ್ಲಿ ಎಂ.ಕೆ ಸ್ಟಾಲಿನ್​ ಗೃಹಸಚಿವರಾಗಿಯೂ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸ್ಟಾಲಿನ್​ ಅವರು ಆಡಳಿತ ಮತ್ತು ಪೊಲೀಸ್​ ಸೇವೆಗಳಿಗೆ ಸಂಬಂಧಿಸಿದಂತೆ ಹಲವಾರು ಖಾತೆಗಳನ್ನು ಹೊಂದಿದ್ದಾರೆ.

ಸ್ಟಾಲಿನ್​ ತನ್ನ 69ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾರೆ. ಅವರ ತಂದೆ ಎಂ.ಕರುಣಾನಿಧಿ ಅವರು ಐದು ಬಾರಿ ಈ ಹುದ್ದೆಯನ್ನು ಅಲಂಕರಿಸಿದ್ದರು. ಎಂ.ಕೆ ಸ್ಟಾಲಿನ್​ ಅವರು ಈ ಹಿಂದೆ ಏಳು ಬಾರಿ ಶಾಸಕರಾಗಿ ಹಾಗೂ ಎರಡು ಬಾರಿ ಚೆನ್ನೈ ಮೇಯರ್​ ಆಗಿ ಕೆಲಸ ನಿರ್ವಹಿಸಿದ್ದರು. ರಾಜಕೀಯದಲ್ಲಿ 10 ವರ್ಷದ ಆಡಳಿತದ ನಂತರ ಇದೀಗ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ರಾಜ್ಯವು ಕೊರೊನಾ ಎರಡನೇ ಅಲೆಯೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ ಸ್ಟಾಲಿನ್​ ಅವರ ಆಡಳಿತ ದೊಡ್ಡ ಸವಾಲಾಗಿದೆ. ಸ್ವಾಲಿನ್​ ಅವರ ಸಹೋದರರಾದ ಎಂ.ಎಸ್​ ಕನಿಮೋಜಿ ಈ ಕುರಿತಂತೆ ಮಾತನಾಡಿ, ಕೊವಿಡ್​ ನಿಯಂತ್ರಣದ ಬಗ್ಗೆ ಸ್ಟಾಲಿನ್​ ಅವರು ಸ್ಪಷ್ಟವಾದ ಯೋಜನೆ ಹೊಂದಿದ್ದಾರೆ. ಇದೇ ಅವರ ಮೊದಲ ಆದ್ಯತೆಯೂ ಅಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಹೊಸ ಜಲಸಂಪನ್ಮೂಲ ಸಚಿವರಾಗಿ ಹಿರಿಯ ಡಿಎಂಕೆ ನಾಯಕ ಮುರುಗನ್​ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮುರುಗನ್​ ಅವರು ಮಾಜಿ ಸಚಿವರು ಮತ್ತು ವೆಲ್ಲೂರು ಜಿಲ್ಲೆಯ ಕಟ್ಪಡಿ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿದ್ದವರು. ಬರಗಾಲದಿಂದ ಬಳಲುತ್ತಿರುವ ರಾಜ್ಯಕ್ಕೆ ಈ ಕಾತೆ ನಿರ್ಣಾಯಕವಾಗಿದೆ. ಯುನೈಟೆಡ್​ ಸ್ಟೇಟ್​ನಲ್ಲಿ ಕೆಲಸ ಮಾಡಿದ ಮಾಜಿ ಹೂಡಿಕೆ ಬ್ಯಾಂಕರ್​ (ಫಾರ್ಮರ್​ ಇನ್ವೆಸ್ಟ್​ಮೆಂಟ್​ ಬ್ಯಾಂಕರ್​) ಪಳನಿವೆಲ್​ ತ್ಯಾಗರಾಜನ್​ ಅವರಿಗೆ ಹಣಕಾಸು ಹುದ್ದೆಯನ್ನು ನೀಡಲಾಗಿದೆ.

ಆರೋಗ್ಯ ಇಲಾಖೆ ಇದೀಗ ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಒಳಗೊಂಡಂತೆ ಹೆಚ್ಚಿನ ಪ್ರಾಮುಖ್ಯತೆ ವಹಿಸಿದೆ. ಚೆನ್ನೈನ ಮಾಜಿ ಮೇಯರ್​ ಆಗಿರುವ ಸಚಿವ ಎಂ.ಎ ಸುಬ್ರಮಣಿಯನ್​ ನೇತೃತ್ವವಹಿಸಿದ್ದಾರೆ. ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಬೆಡ್​ ಕೊರತೆ ಉಂಟಾಗುತ್ತಿದೆ. ಹಾಗಾಗಿ ಕಡಿಮೆ ಬೆಲೆಗೆ ಬೆಡ್​ ವ್ಯವಸ್ಥೆ ಮಾಡಿಕೊಡಬೇಕು ಎಂದು ಖಾಸಗಿ ಆಸ್ಪತ್ರೆಗಳಿಗೆ ಸ್ಟಾಲಿನ್​ ಅವರು ಮನವಿ ಮಾಡಿಕೊಂಡಿದ್ದಾರೆ. ಮೀನುಗಾರಿಕೆ ಮತ್ತು ಮೀನುಗಾರಿಕಾ ಕಲ್ಯಾಣ ಎಂದು ಮರುನಾಮಕರಣ ಮಾಡಿದ ಸಚಿವ ಸ್ಥಾನವನ್ನು ಅನಿತಾ ಆರ್​ ರಾಧಾಕೃಷ್ಣನ್​ ನೇತೃತ್ವವಹಿಸಲಿದ್ದು, ಸ್ಟಾಲಿನ್​ ಅವರ ಸಂಪುಟದಲ್ಲಿ ಮಹಿಳಾ ಸಚಿವರೂ ಇರಲಿದ್ದಾರೆ.

ಇದನ್ನೂ ಓದಿ: Khushbu Sundar: ಬಿಜೆಪಿ ಅಭ್ಯರ್ಥಿ ಖುಷ್ಬೂ ಸುಂದರ್ ಆಸ್ತಿ 22.55 ಕೋಟಿ ರೂ., ತಮಿಳು ನಾಡು ಬಿಜೆಪಿ ಅಧ್ಯಕ್ಷ ಮುರುಗನ್ ಆಸ್ತಿ 1.53 ಕೋಟಿ ರೂಪಾಯಿ

Published On - 12:45 pm, Fri, 7 May 21