Khushbu Sundar: ಬಿಜೆಪಿ ಅಭ್ಯರ್ಥಿ ಖುಷ್ಬೂ ಸುಂದರ್ ಆಸ್ತಿ 22.55 ಕೋಟಿ ರೂ., ತಮಿಳು ನಾಡು ಬಿಜೆಪಿ ಅಧ್ಯಕ್ಷ ಮುರುಗನ್ ಆಸ್ತಿ 1.53 ಕೋಟಿ ರೂಪಾಯಿ

Khushbu Sundar : ಬಿಜೆಪಿ ಅಭ್ಯರ್ಥಿ ಖುಷ್ಬೂ ಅವರ ಬಳಿ ₹17.99 ಕೋಟಿ ಮೌಲ್ಯದ ಸ್ಥಿರಾಸ್ತಿ ಇದ್ದು, ಪತಿ ಸಿ.ಸುಂದರ್ ಹೆಸರಲ್ಲಿ ₹16.57 ಕೋಟಿ ಮೌಲ್ಯದ ಆಸ್ತಿ ಇದೆ. ಖುಷ್ಬೂ ಅವರು ₹4.55 ಕೋಟಿ ಮತ್ತು ಸಿ. ಸುಂದರ್ ₹1.83 ಕೋಟಿ ಚರಾಸ್ತಿ ಹೊಂದಿದ್ದಾರೆ.

Khushbu Sundar: ಬಿಜೆಪಿ ಅಭ್ಯರ್ಥಿ ಖುಷ್ಬೂ ಸುಂದರ್ ಆಸ್ತಿ 22.55 ಕೋಟಿ ರೂ., ತಮಿಳು ನಾಡು ಬಿಜೆಪಿ ಅಧ್ಯಕ್ಷ ಮುರುಗನ್ ಆಸ್ತಿ 1.53 ಕೋಟಿ ರೂಪಾಯಿ
ಖುಷ್ಬೂ ಸುಂದರ್
Follow us
ರಶ್ಮಿ ಕಲ್ಲಕಟ್ಟ
| Updated By: Digi Tech Desk

Updated on:Mar 19, 2021 | 11:56 AM

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಟಿ, ರಾಜಕಾರಣಿ ಖುಷ್ಬೂ ಸುಂದರ್ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಆಸ್ತಿ ₹22.55 ಕೋಟಿ ಎಂದು ಖುಷ್ಬೂ ಘೋಷಿಸಿಕೊಂಡಿದ್ದಾರೆ. ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷ ಎಲ್. ಮುರುಗನ್ ಅವರು ಧಾರಾಪುರಂ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು 1.53 ಕೋಟಿ ರೂಪಾಯಿ (ಚರಾಸ್ತಿ ಮತ್ತು ಸ್ಥಿರಾಸ್ತಿ) ಮೌಲ್ಯದ ಆಸ್ತಿ ಹೊಂದಿದ್ದಾರೆ. ಪತ್ನಿ ಹೆಸರಲ್ಲಿ 1.09 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಮುರುಗನ್ ಘೋಷಿಸಿಕೊಂಡಿದ್ದಾರೆ.

ಆದಾಗ್ಯೂ, ಖುಷ್ಬೂ ಅವರ ಬಳಿ 17.99 ಕೋಟಿ ಮೌಲ್ಯದ ಸ್ಥಿರಾಸ್ತಿ ಇದ್ದು, ಪತಿ ಸಿ.ಸುಂದರ್ ಹೆಸರಲ್ಲಿ 16.57 ಕೋಟಿ ಮೌಲ್ಯದ ಆಸ್ತಿ ಇದೆ. ಖುಷ್ಬೂ ಅವರು ₹4.55 ಕೋಟಿ ಮತ್ತು ಸಿ. ಸುಂದರ್ ₹1.83 ಕೋಟಿ ಚರಾಸ್ತಿ ಹೊಂದಿದ್ದಾರೆ. ಖುಷ್ಬೂ ಹೆಸರಲ್ಲಿ ₹3.45 ಕೋಟಿ ಸಾಲ ಇದ್ದು, ಅವರ ಪತಿ ಹೆಸರಲ್ಲಿ ₹5.55 ಕೋಟಿ ಮೊತ್ತದ ಸಾಲ ಇದೆ ಎಂದು ಅಫಿಡವಿಟ್​ನಲ್ಲಿ ಹೇಳಲಾಗಿದೆ. ಈ ದಂಪತಿ ತಮಿಳುನಾಡಿನ ಹಲವಡೆ ಫ್ಲ್ಯಾಟ್, ವಸತಿ ಸಮುಚ್ಚಯಗಳನ್ನು ಹೊಂದಿದ್ದಾರೆ.

ಆರು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದ ಖುಷ್ಬೂ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಬಿಜೆಪಿ ಸೇರಿದ್ದರು. ಇವರಿಗೆ ತೆಲಂಗಾಣ, ಉದಕಮಂಡಲಂ (ಊಟಿ) ಸೇರಿದಂತೆ ಹಲವೆಡೆ ಜಮೀನು ಮತ್ತು ವಸತಿ ಕಟ್ಟಡಗಳಿವೆ. ಈಕೆಯ ವಿರುದ್ಧ 4 ಕ್ರಿಮಿನಲ್ ಆರೋಪಗಳಿವೆ.

ಗುರುವಾರ ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಖುಷ್ಬೂ ವಲ್ಲುವಾರ್ ಕೋಟ್ಟಂನಿಂದ ಮೆರವಣಿಗೆಯಲ್ಲಿ ಬಂದಿದ್ದರು. ಪ್ರಸ್ತುತ ಚುನಾವಣೆ ಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯಕರ್ತ, ಕಾವೇರಿ ಆಸ್ಪತ್ರೆಯ ವೈದ್ಯ ಡಿಎಂಕೆ ಅಭ್ಯರ್ಥಿ ಡಾ. ಏಳಿಲನ್ ನಾಗನಾಥನ್ ಅವರ ವಿರುದ್ಧ ಖುಷ್ಬೂ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ಖುಷ್ಬೂ ಅವರು ಚೇಪಕ್- ತಿರುನಲ್ವೇಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಎಐಎಡಿಎಂಕೆ ಮೈತ್ರಿಕೂಟ ಆ ಕ್ಷೇತ್ರವನ್ನು ಪಿಎಂಕೆ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದರಿಂದ ಖುಷ್ಬೂ ಅವರಿಗೆ ಥೌಸಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು.

ತಮ್ಮ ಪ್ರತಿಸ್ಪರ್ಧಿ ಬಗ್ಗೆ ಮಾತನಾಡಿದ ಖುಷ್ಬೂ, ಯಾವುದೇ ಪ್ರತಿಸ್ಪರ್ಧಿಯನ್ನು ಹಗುರವಾಗಿ ತೆಗೆದುಕೊಳ್ಳಬಾರದು . ನಾವು ಊಹಿಸಿದ್ದಕ್ಕಿಂತಲೂ ಅವರು ಬಲಶಾಲಿಗಳಾಗಿರುತ್ತಾರೆ. ಆದರೂ ನೀವು ಗೆಲ್ಲಲೇ ಬೇಕು. ಮಹಿಳೆಯರು ಚಿಕ್ಕ ಪುಟ್ಟ ಕಾರ್ಯಗಳ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಅವರ ನಡುವೆ ನಾನು ಸಕ್ರಿಯವಾಗಿರಲಿದ್ದೇನೆ ಎಂದು ಹೇಳಿದ್ದಾರೆ.

ನಾನು ನಟ ರಜನಿಕಾಂತ್ ಅವರನ್ನು ಭೇಟಿ ಮಾಡದೇ ಇದ್ದರೂ ಅವರ ಬೆಂಬಲ ನನಗಿದೆ. ನನ್ನ ಗೆಳೆಯರು ಸದಾ ಗೆಳೆಯರಾಗಿಯೇ ಇರುತ್ತಾರೆ. ನನ್ನ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮೈತ್ರಿಕೂಟದ ಎಲ್ಲ ಪಕ್ಷದ ಬೆಂಬಲಿಗರು ಭಾಗಿಯಾಗುತ್ತಾರೆ. ನಾನು ರಜನಿಕಾಂತ್ ಅವರ ಬೆಂಬಲ ಪಡೆಯುವುದಕ್ಕಾಗಿ ಅವರನ್ನು ಭೇಟಿ ಮಾಡಲು ಹೋಗದೇ ಇದ್ದರೂ ಅವರ ಬೆಂಬಲ ನನಗಿರುತ್ತದೆ ಎಂಬುದು ಗೊತ್ತು. 2019ರಲ್ಲಿ 1.3 ಶತಕೋಟಿ ಜನರು ಮತದಾನ ಮಾಡಿದ್ದರು. ಜಗತ್ತಿನ ಅತೀ ದೊಡ್ಡ ಪಕ್ಷವಾಗಿದೆ ಬಿಜೆಪಿ. ಅಲ್ಪ ಸಂಖ್ಯಾತರು ಮತದಾನ ಮಾಡುವುದಿಲ್ಲವೇ? ಇದು ವಿಪಕ್ಷಗಳ ಸುಳ್ಳು ಪ್ರಚಾರ ಎಂದು ಹೇಳಿದ್ದಾರೆ.

234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

 ಇದನ್ನೂ ಓದಿ:  Tamil Nadu Elections 2021: ಕಳಪೆ ಗುಣಮಟ್ಟದ ಅಕ್ಕಿಯ ತಟ್ಟೆಯಲ್ಲಿ ಆರತಿ ಬೆಳಗಿ ಎಐಎಡಿಎಂಕೆ ಶಾಸಕರನ್ನು ಸ್ವಾಗತಿಸಿದ ಮದುರೈ ಗ್ರಾಮಸ್ಥರು

ಬಿಜೆಪಿಯಿಂದ ಕೇರಳ, ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಅಣ್ಣಾಮಲೈ, ಖುಷ್ಬೂಗೆ ಅವಕಾಶ

Published On - 11:05 am, Fri, 19 March 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ