Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟಾರ್‌ಗಳ ನಡುವೆ ನಡೀತಿದೆಯಾ ಕಾಂಪಿಟೇಷನ್‌? ಅಲ್ಲು ಅರ್ಜುನ್‌ಗಿಂತ ದುಬಾರಿ ಕ್ಯಾರಾವ್ಯಾನ್‌ ಖರೀದಿಸಿದ ಮಹೇಶ್‌ ಬಾಬು

ಸ್ಟಾರ್‌ಗಳು ಏನೇ ಮಾಡಿದ್ರೂ ಅದ್ರ ನಡುವೆ ಒಂದು ಕಾಂಪಿಟೇಷನ್‌ ಇದ್ದೇ ಇರಿತ್ತೆ ಅನ್ನುಂತೆ ಮಾಡುತ್ತವೆ ಕೆಲ ಘಟನೆಗಳು. ಅಂದ್ಹಾಗೆ ಸದ್ಯ ಸಿನಿಮಾ ವಿಚಾರದಲ್ಲಿ ಸ್ಟಾರ್‌ಗಳ ನಡುವೆ ಕಾಂಪಿಟೇಷನ್‌ ಕಾಮನ್ ಆದ್ರೆ ಸದ್ಯ ಟಾಲಿವುಡ್‌ನ ಸ್ಟಾರ್ ನಟರ ಕ್ಯಾರಾವಾನ್‌ ಬಳಕೆಯಲ್ಲೂ ಕಾಂಪಿಟೇಷನ್‌ ಶುರುವಾಗಿದೆ.

ಸ್ಟಾರ್‌ಗಳ ನಡುವೆ ನಡೀತಿದೆಯಾ ಕಾಂಪಿಟೇಷನ್‌?  ಅಲ್ಲು ಅರ್ಜುನ್‌ಗಿಂತ ದುಬಾರಿ ಕ್ಯಾರಾವ್ಯಾನ್‌ ಖರೀದಿಸಿದ ಮಹೇಶ್‌ ಬಾಬು
ಮಹೇಶ್‌ ಬಾಬು ಮತ್ತು ಅಲ್ಲು ಅರ್ಜುನ್‌
Follow us
ಆಯೇಷಾ ಬಾನು
|

Updated on:Mar 19, 2021 | 7:11 AM

ಸ್ಟಾರ್‌ಗಳು ಏನೇ ಮಾಡಿದ್ರೂ ಅದು ಅವ್ರ ಅಭಿಮಾನಿಗಳಿಗೆ ದೊಡ್ಡ ಸುದ್ದಿಯೇ.. ಸ್ಟಾರ್‌ಗಳ ಜೀವನ ಶೈಲಿ ಅವ್ರ ದಿನಚರಿ ಬಗ್ಗೆ ಹಾಗೆಯೇ ಏನಾದ್ರೂ ಅವರಲ್ಲಾಗೋ ಸಣ್ಣ ಪುಟ್ಟ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳೋ ಕುತೂಹಲ ತುಸು ಹೆಚ್ಚಾಗೇ ಇರುತ್ತೆ. ಹಾಗಾಗಿ ಅಭಿಮಾನಿಗಳು ಕಾಯ್ತಿರ್ತಾರೆ. ಜೊತೆಗೆ ತಮ್ಮ ತಮ್ಮ ಸ್ಟಾರ್‌ಗಳನ್ನ ಹೊತ್ತು ಮೆರವಣಿಗೆ ಮಾಡ್ತಾರೆ.

ಅಂದ್ಹಾಗೆ ಒಂದು ಕಾಂಪಿಟೇಷನ್‌ ಅಭಿಮಾನಿಗಳ ಮಧ್ಯೆ ಮಾತ್ರವಲ್ಲ ಸ್ಟಾರ್‌ಗಳ ನಡುವೆಯೂ ಇದ್ದೇ ಇರುತ್ತೆ. ಹೀಗಾಗಿ ಅವ್ರು ಅವರದ್ದೇ ರೀತಿಯಲ್ಲಿ ತಾವು ಮೇಲು ಅನ್ನೋದನ್ನ ತೋರಿಸಿಕೊಳ್ಳೋ ಘಟನೆಗಳು ನಡೀತಾನೆ ಇರ್ತವೆ. ಸದ್ಯ ಟಾಲಿವುಡ್‌ನಲ್ಲಿ ಹಾಗೆಯೇ.. ಅಲ್ಲು ಅರ್ಜುನ್‌ಗಿಂತ ಮಹೇಶ್‌ ಬಾಬು ಮೇಲು ಅನ್ನೋ ಸುದ್ದಿ ಹರಿದಾಡ್ತಿದೆ. ಅಂದ್ಹಾಗೆ ಈ ಸುದ್ದಿ ಹರಿದಾಡ್ತಿರೋದು ಸಿನಿಮಾ ವಿಚಾರಕ್ಕಲ್ಲ. ಬದಲಾಗಿ ಮಹೇಶ್‌ ಬಾಬು ಸದ್ಯ ಅತಿಹೆಚ್ಚು ಬೆಲೆಬಾಳೋ ಕ್ಯಾರಾವ್ಯಾನ್‌ ಬಳಕೆ ಮಾಡ್ತಿದ್ದಾರಂತೆ.

ಇತ್ತೀಚೆಗಷ್ಟೇ ಕೆಲ ದಿನಗಳ ಹಿಂದೆ ಸ್ಟೈಲಿಶ್‌ ಸ್ಟಾರ್ ಅಲ್ಲು ಅರ್ಜುನ್‌ ಬರೋಬ್ಬರಿ 7 ಕೋಟಿ ಮೊತ್ತದ ಕ್ಯಾರಾವ್ಯಾನ್‌ ಹೊಂದಿದ್ರು. ಅದು ಎಲ್ಲಾ ರೀತಿಯ ವಿಶೇಷ ಸೌಲಭ್ಯಳನ್ನ ಹೋಂದಿರೋ ಕ್ಯಾರಾವ್ಯಾನ್ ಆಗಿದೆ. ಬಾಲಿವುಡ್‌ ನಟರೂ ಸಹ ಬಳಸದ ರೀತಿಯಲ್ಲಿ ಮಾರ್ಪಾಡು ಮಾಡಿಸಿ ಮಾಡಲಾಗಿದೆ. ಅದು ಸ್ಟಾರ್‌ ಬಳಸೋ ಹೆಚ್ಚು ಬೆಲೆ ಬಾಳೋ ಕ್ಯಾರಾವ್ಯಾನ್ ಎನ್ನಲಾಗಿತ್ತು.

ಆದ್ರೀಗ ಮಹೇಶ್‌ ಬಾಬು ಕ್ಯಾರಾವ್ಯಾನ್‌ ಬೆಲೆ ಬರೋಬ್ಬರಿ 8 ಕೋಟಿಯಂತೆ. ಹಲವು ವಿಶೇಷ ಸೌಲಭ್ಯಗಳನ್ನ ಒಳಗೊಂಡಿರೋ ರೀತಿ ವಿನ್ಯಾಸ ಮಾಡಿಸಲಾಗಿದ್ಯಂತೆ. ಹೀಗಾಗಿ ಅಲ್ಲು ಅರ್ಜುನ್‌ಗಿಂತ ಸದ್ಯ ಟಾಲಿವುಡ್ ಪ್ರಿನ್ಸ್ ಮಹೇಶ್‌ ಬಾಬು ಒಂದು ಹೆಜ್ಜೆ ಮುಂದಿದ್ದಾರೆ ಎನ್ನಲಾಗಿದೆ. ಸದ್ಯ ಮಹೇಶ್‌ ಬಾಬು ಬಾಲಿವುಟ್‌ ನಟ ಶಾರುಖ್‌ ಖಾನ್‌ರನ್ನೂ ಮೀರಿಸುವಂತಹ ಕ್ಯಾರಾವ್ಯಾನ್‌ ಬಳಸ್ತಿದ್ದಾರಂತೆ.

ಈ ಸುದ್ದಿ ಟಾಲಿವುಡ್‌ ಅಂಗಳದಲ್ಲಿ ಚರ್ಚೆ ಆಗ್ತಿರೋದ್ರ ಜೊತೆಗೆ ಮಹೇಶ್‌ ಬಾಬು ಬಳಸೋ ಕ್ಯಾರಾವ್ಯಾನ್‌ ಹೇಗಿದೆ ಅನ್ನೋ ಕುತೂಹಲ ಹುಟ್ಟಿಸಿದೆ. ಒಟ್ಟಿನಲ್ಲಿ ಸ್ಟಾರ್‌ಗಳ ನಡುವಿನ ಕಾಂಪಿಟೇಷನ್‌ ಕೇವಲ ಸಿನಿಮಾಗಳಿಗೆ ಸೀಮಿತವಾಗಿಲ್ಲ. ಕೆಲವೊಮ್ಮೆ ಅವ್ರು ಬಳಸೋ ವಸ್ತುಗಳ ವ್ಯಾಲ್ಯೂ ಕೂಡ ಸುದ್ದಿಯಾಗುತ್ತೆ ಅನ್ನೋದಕ್ಕೆ ಸದ್ಯ ಈ ಘಟನೆಯೇ ಸಾಕ್ಷಿಯಾಗಿದೆ.

ಇದನ್ನೂ ಓದಿ: 8 ಕೋಟಿ ಕೊಟ್ಟು ಹೊಸ ವಾಹನ ಖರೀದಿಸಿದ ಮಹೇಶ್​ ಬಾಬು; ಏನಿದರ ವಿಶೇಷತೆ? 

Published On - 7:09 am, Fri, 19 March 21