ರಾಜಸ್ಥಾನ ರಾಜ್ಯ ಸರ್ಕಾರದ ವಿರುದ್ಧ ಶಾಸಕನ ಪ್ರತಿಭಟನೆ; ಪಾರ್ಕ್​​ನಲ್ಲಿ 12 ತಾಸು ಓಡುವುದಾಗಿ ಘೋಷಣೆ

| Updated By: Lakshmi Hegde

Updated on: Mar 26, 2022 | 7:35 PM

ನಾನು ಅಶೋಕ್​ ಗೆಹ್ಲೋಟ್ ಸರ್ಕಾರವನ್ನು ಬೆಂಬಲಿಸುತ್ತೇನೆ. ಆದರೆ ಯುವಜನರ ಸಮಸ್ಯೆಗಳನ್ನು ಎತ್ತಿ ತೋರಿಸಿ, ಅದನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಯಾದವ್​ ಹೇಳಿದ್ದಾರೆ.

ರಾಜಸ್ಥಾನ ರಾಜ್ಯ ಸರ್ಕಾರದ ವಿರುದ್ಧ ಶಾಸಕನ ಪ್ರತಿಭಟನೆ; ಪಾರ್ಕ್​​ನಲ್ಲಿ 12 ತಾಸು ಓಡುವುದಾಗಿ ಘೋಷಣೆ
ರಾಜಸ್ಥಾನ ಶಾಸಕ
Follow us on

ಜೈಪುರ: ಬೆಹ್ರೋರ್ ವಿಧಾನಸಭೆ ಕ್ಷೇತ್ರದ ಸ್ವತಂತ್ರ ಶಾಸಕ ಬಲ್ಜೀತ್​ ಯಾದವ್ ಅವರು ಶುಕ್ರವಾರ ಸೆಂಟ್ರಲ್​ ಪಾರ್ಕ್​​ನಲ್ಲಿ ಓಟ ಶುರುಮಾಡಿದ್ದಾರೆ. ರಾಜಸ್ಥಾನ ರಾಜ್ಯದಲ್ಲಿರುವ ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿರುದ್ಧವಾಗಿ ನಾನು ಪ್ರತಿಭಟನೆ ನಡೆಸುತ್ತಿದ್ದೇನೆ. ಹೀಗಾಗಿ ಇಲ್ಲಿ 12 ತಾಸು ಓಡಲು ನಿರ್ಧರಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಲೈವ್​ ಬಂದು ಹೇಳಿದ್ದಾರೆ.  ಅದಕ್ಕೂ ಮೊದಲು ಗುರುವಾರ ರಾಜಸ್ಥಾನ ವಿಧಾನಸಭೆಯಲ್ಲಿ ಕೂಡ ಇದೇ ಘೋಷಣೆ ಮಾಡಿದ್ದರು. 

ನಾನು ಅಶೋಕ್​ ಗೆಹ್ಲೋಟ್ ಸರ್ಕಾರವನ್ನು ಬೆಂಬಲಿಸುತ್ತೇನೆ. ಆದರೆ ಯುವಜನರ ಸಮಸ್ಯೆಗಳನ್ನು ಎತ್ತಿ ತೋರಿಸಿ, ಅದನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ. ನಾನೊಬ್ಬ ಸ್ವತಂತ್ರ್ಯ ಅಭ್ಯರ್ಥಿ. ನಾನು ಸದನದಲ್ಲಿ ಜಾಸ್ತಿ ಮಾತನಾಡಲು ಸಾಧ್ಯವಿಲ್ಲ. ಆದರೆ ಹೀಗೆ ಓಡಿ ಪ್ರತಿಭಟನೆ ಮಾಡುವ ಮೂಲಕ ಅಸಮಾಧಾನ ಹೊರಹಾಕುತ್ತಿದ್ದೇನೆ. ಈ ರಾಜ್ಯದಲ್ಲಿ ಯುವಜನರು ಎಷ್ಟು ಕಷ್ಟಪಡುತ್ತಿದ್ದಾರೆ ಎಂಬುದನ್ನು ತೋರಿಸುತ್ತೇನೆ ಎಂದು ಬಲ್ಜಿತ್ ಯಾದವ್ ಹೇಳಿದ್ದಾರೆ. ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಓಟ ಕೈಬಿಡುವಂತೆ  ಅನೇಕರು ಹೇಳಿದರೂ ಕೇಳದೆ ಪ್ರತಿಭಟನೆ ಮುಂದುವರಿಸುತ್ತಲೇ ಇದ್ದ ಅವರನ್ನು ನಂತರ ಆಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಲಾಗಿದೆ.

ಇದನ್ನೂ ಓದಿ: ಖ್ಯಾತ ಹೀರೋ ಜತೆ ನಿಶ್ಚಿತಾರ್ಥ ಮಾಡಿಕೊಂಡ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ

Published On - 9:29 am, Sat, 26 March 22