Viral Video: ನೀರು ತುಂಬಿ ಹರಿಯುತ್ತಿರುವ ರಸ್ತೆ ಮೇಲೆ ಗುತ್ತಿಗೆದಾರನ ಕೂರಿಸಿ, ತಲೆ ಮೇಲೆ ಕಸ ಸುರಿಸಿದ ಶಾಸಕ !

ಗುತ್ತಿಗೆದಾರ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ರಸ್ತೆಯಲ್ಲೆಲ್ಲ ನೀರು ತುಂಬಿ ಹರಿಯುತ್ತಿದೆ. ಕಟ್ಟಿದ ಚರಂಡಿಯಿಂದ ನೀರೆಲ್ಲ ರಸ್ತೆಯ ಮೇಲೆ ಬಂದಿದೆ ಎಂದು ಶಾಸಕ ಲಾಂಡೆ ಆರೋಪಿಸಿದ್ದಾರೆ.

Viral Video: ನೀರು ತುಂಬಿ ಹರಿಯುತ್ತಿರುವ ರಸ್ತೆ ಮೇಲೆ ಗುತ್ತಿಗೆದಾರನ ಕೂರಿಸಿ, ತಲೆ ಮೇಲೆ ಕಸ ಸುರಿಸಿದ ಶಾಸಕ !
ಗುತ್ತಿಗೆದಾರನ ಮೈಮೇಲೆ ಕಸ ಸುರಿಸಿದ ಶಾಸಕ
Edited By:

Updated on: Jun 13, 2021 | 4:59 PM

ಮುಂಬೈ: ಚರಂಡಿಯನ್ನು ಸರಿಯಾಗಿ ಸ್ವಚ್ಛ ಮಾಡಿಸಲಿಲ್ಲ..ರಸ್ತೆ ಬದಿಯಲ್ಲಿನ ಕಸ ವಿಲೇವಾರಿಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆಂಬ ಕಾರಣ ಕೊಟ್ಟು ಗುತ್ತಿಗೆದಾರನ ಮೇಲೆ ಕಸ ಸುರಿಯಲಾಗಿದೆ. ಇದನ್ನು ಶಾಸಕರೇ ಖುದ್ದಾಗಿ ನಿಂತು ಮಾಡಿಸಿದ್ದಾರೆ. ನೀರು ನಿಂತ ರಸ್ತೆಯಲ್ಲಿ ಗುತ್ತಿಗೆದಾರನನ್ನು ಕೂರಿಸಿ, ಆತನ ಮೈಮೇಲೆ ಕಸ ಸುರಿಸುವ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.

ಅಂದಹಾಗೆ ಕಾಂಟ್ರಾಕ್ಟರ್​ಗೆ ಈ ಶಿಕ್ಷೆ ಕೊಡಿಸಿದ್ದು ಉತ್ತರ ಮುಂಬೈನ ಕಾಂಡಿವಾಲಿ ವಿಧಾನಸಭಾ ಕ್ಷೇತ್ರದ ಶಿವಸೇನೆ ಶಾಸಕ ದಿಲೀಪ್ ಲಾಂಡೆ. ನೀರು ಹರಿಯುತ್ತಿರುವ ರಸ್ತೆಯಲ್ಲೇ ಕುಳಿತುಕೊಳ್ಳುವಂತೆ ಆ ಗುತ್ತಿಗೆದಾರನಿಗೆ ಹೇಳಲಾಗುತ್ತದೆ. ಅದಾದ ಬಳಿಕ ಒಬ್ಬಾತ ಹೋಗಿ ಆತನನ್ನು ತಳ್ಳುತ್ತಾನೆ. ನಂತರ ಶಾಸಕ ಗುತ್ತಿಗೆದಾರನ ಮೇಲೆ ಕಸ ಸುರಿಯುವಂತೆ ಇಬ್ಬರಿಗೆ ಹೇಳುತ್ತಾರೆ. ಅವರು ಕಸವನ್ನು ಸುರಿಯುತ್ತಾರೆ. ಈ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು.

ಈ ಗುತ್ತಿಗೆದಾರ ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ರಸ್ತೆಯಲ್ಲೆಲ್ಲ ನೀರು ತುಂಬಿ ಹರಿಯುತ್ತಿದೆ. ಕಟ್ಟಿದ ಚರಂಡಿಯಿಂದ ನೀರೆಲ್ಲ ರಸ್ತೆಯ ಮೇಲೆ ಬಂದು, ವಾಹನ ಸವಾರರಿಗೆ, ನಡೆದುಕೊಂಡು ಹೋಗುವವರಿಗೆ ಹಿಂಸೆಯಾಗಿದೆ ಎಂದು ಶಾಸಕ ಲಾಂಡೆ ಆರೋಪಿಸಿದ್ದಾರೆ.

ಘಟನೆಯ ಬಗ್ಗೆ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ಶಾಸಕ ದಿಲೀಪ್​ ಲಾಂಡೆ, ಜನರು ನನ್ನ ಮೇಲೆ ನಂಬಿಕೆಯಿಟ್ಟು ಮತ ಹಾಕಿ ಆಯ್ಕೆ ಮಾಡಿದ್ದಾರೆ. ನನ್ನ ಕರ್ತವ್ಯ ನಾನೇ ಮಾಡಬೇಕಿದೆ. ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಕಸಗಳನ್ನು ತೆಗೆಸುವುದು ಗುತ್ತಿಗೆದಾರನ ಕೆಲಸ. ಆದರೆ ಅದನ್ನು ಆತ ಸರಿಯಾಗಿ ಮಾಡಲಿಲ್ಲ. ಹಾಗಾಗಿ ನಾನು ಬಂದಿದ್ದೇನೆ. ಆತ ಮಾಡದೆ ಇರುವ ಕೆಲಸವನ್ನು ತೋರಿಸಲು ಅವನನ್ನು ಕರೆದುಕೊಂಡು ಬಂದಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾವನ್ನು ಕಟ್ಟಿದ್ದು ಗಂಗೂಲಿಯಲ್ಲ! ಅದರ ಕ್ರೆಡಿಟ್ ಏನಿದ್ದರೂ ಈ ಸವ್ಯಸಾಚಿಗೆ ಸಲ್ಲಬೇಕು: ಸುರೇಶ್ ರೈನಾ

Published On - 4:55 pm, Sun, 13 June 21