ಟೀಂ ಇಂಡಿಯಾವನ್ನು ಕಟ್ಟಿದ್ದು ಗಂಗೂಲಿಯಲ್ಲ! ಅದರ ಕ್ರೆಡಿಟ್ ಏನಿದ್ದರೂ ಈ ಸವ್ಯಸಾಚಿಗೆ ಸಲ್ಲಬೇಕು: ಸುರೇಶ್ ರೈನಾ

ದಾದಾ ಈ ತಂಡವನ್ನು ಕಟ್ಟಿದ್ದಾರೆ ಎಂದು ನಾನು ಎಂದಿಗೂ ಹೇಳಲಿಲ್ಲ. ಅವರು ಮತ್ತು ಧೋನಿ ತಂಡದ ನಾಯಕತ್ವ ವಹಿಸಿ ಪ್ರಭಾವ ಬೀರಿದರು, ಅದು ನಿಜ. ಆದರೆ ತಂಡವನ್ನು ಎಲ್ಲಾ ಮೂರು ಸ್ವರೂಪಗಳಲ್ಲಿ ನಿರ್ಮಿಸಿದ ಶ್ರೇಯಸ್ಸು ರಾಹುಲ್ ದ್ರಾವಿಡ್‌ಗೆ ಸಲ್ಲಬೇಕು.

ಟೀಂ ಇಂಡಿಯಾವನ್ನು ಕಟ್ಟಿದ್ದು ಗಂಗೂಲಿಯಲ್ಲ! ಅದರ ಕ್ರೆಡಿಟ್ ಏನಿದ್ದರೂ ಈ ಸವ್ಯಸಾಚಿಗೆ ಸಲ್ಲಬೇಕು: ಸುರೇಶ್ ರೈನಾ
ಸುರೇಶ್ ರೈನಾ
Follow us
ಪೃಥ್ವಿಶಂಕರ
|

Updated on: Jun 13, 2021 | 4:21 PM

ಇಂದು ಭಾರತೀಯ ಕ್ರಿಕೆಟ್ ತಂಡವು ಇರುವ ಸ್ಥಿತಿಗೆ ಮಾಜಿ ನಾಯಕ ಸೌರವ್ ಗಂಗೂಲಿ ಕಾರಣ ಎಂದು ಅನೇಕರು ಹೇಳುತ್ತಾರೆ. ಅವರು ಈ ತಂಡಕ್ಕೆ ಅಡಿಪಾಯ ಹಾಕಿದರು ಮತ್ತು ವಿದೇಶದಲ್ಲಿ ಸರಣಿಗಳನ್ನು ಗೆಲ್ಲುವ ಅಭ್ಯಾಸವನ್ನು ಮಾಡಿಕೊಂಡರು ಎಂದು ಹೇಳಲಾಗುತ್ತದೆ. ಆದರೆ ಭಾರತದ ವಿಶ್ವಕಪ್ -2011ರ ಗೆಲುವಿನ ಭಾಗವಾಗಿದ್ದ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಈ ಮಾತನ್ನು ತಳ್ಳಿ ಹಾಕಿದ್ದಾರೆ. ಭಾರತೀಯ ತಂಡದ ಈ ಸ್ಥಿತಿಗೆ ಗಂಗೂಲಿ ಎಂಬ ಮಾತಿಗೆ ರೈನಾ ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ ತಂಡವನ್ನು ಗಂಗೂಲಿ ಅಲ್ಲ ರಾಹುಲ್ ದ್ರಾವಿಡ್ ಕಟ್ಟಿದ್ದಾರೆ ಎಂದು ಮುಂಬರುವ ತಮ್ಮ ಪುಸ್ತಕದಲ್ಲಿ ರೈನಾ ಈ ವಿಚಾರಗಳ ಬಗ್ಗೆ ಬರೆದುಕೊಂಡಿದ್ದಾರೆ.

ಕಿರಿಯ ಆಟಗಾರರ ಹಕ್ಕುಗಳಿಗಾಗಿ ರಾಹುಲ್ ಹೋರಾಡುತ್ತಿದ್ದರು ಎಂದು ರೈನಾ ಹೇಳಿದ್ದಾರೆ. ರೈನಾ ಅವರ ಮುಂಬರುವ ಪುಸ್ತಕದ ಆಯ್ದ ಭಾಗಗಳನ್ನು ಪ್ರಿಂಟ್ ಪ್ರಕಟಿಸಿದೆ. ರಾಹುಲ್ ಭಾಯ್ ಯಾವಾಗಲೂ ಕುಟುಂಬದಂತೆಯೇ ಇದ್ದರು. ಅವರು ಕಿರಿಯ ಆಟಗಾರರಿಗಾಗಿ ಹೋರಾಡುತ್ತಿದ್ದರು. ಈ ಹೆಚ್ಚುವರಿ ಪ್ರಯತ್ನಗಳು ಯಾವಾಗಲೂ ಫಲ ನೀಡುತ್ತಿದ್ದವು. ಯುವ ಆಟಗಾರರು ಅವರಿಗೆ ಸಾಕಷ್ಟು ಅರ್ಥವಾಗಿದ್ದರು. ಅವರ ಅಡಿಯಲ್ಲಿ ಎಷ್ಟು ಆಟಗಾರರು ಪ್ರಬುದ್ಧರಾಗಿದ್ದಾರೆಂದು ನೀವು ನೋಡಿದ್ದೀರಿ, ಅದಕ್ಕೆ ಉದಾಹರಣೆ ಎಂಬಂತೆ ಮಹೇಂದ್ರ ಸಿಂಗ್ ಧೋನಿ, ಇರ್ಫಾನ್ ಪಠಾಣ್, ಯುವರಾಜ್ ಸಿಂಗ್, ಪಿಯೂಷ್ ಚಾವ್ಲಾ, ದಿನೇಶ್ ಕಾರ್ತಿಕ್, ಮುನಾಫ್ ಪಟೇಲ್, ಎಸ್. ಶ್ರೀಶಾಂತ್ ಮತ್ತು ನಾನು ಎಂದು ರೈನಾ ಬರೆದಿದ್ದಾರೆ.

ತಂಡವನ್ನು ರಚಿಸಿದ್ದು ರಾಹುಲ್ ಭಾಯ್ ಸಾಮಾನ್ಯವಾಗಿ, ಜನರು 10-15 ವರ್ಷಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಭಾರತೀಯ ತಂಡದ ಬಗ್ಗೆ ಮಾತನಾಡುವಾಗಲೆಲ್ಲಾ, ಧೋನಿ ಮತ್ತು ಈ ಮೊದಲು ತಂಡದ ನಾಯಕರಾಗಿದ್ದ ಗಂಗೂಲಿಯನ್ನ ನೆನಪಿಸಿಕೊಳ್ಳುತ್ತಾರೆ. ಇಬ್ಬರೂ ತಂಡವನ್ನು ಕಟ್ಟಿದರು ಮತ್ತು ಭಾರತೀಯ ತಂಡವನ್ನು ಮುಂದಕ್ಕೆ ಕರೆದೊಯ್ದರು ಎಂದು ಹೇಳುತ್ತಾರೆ. ಆದರೆ ನಾನು ಇದನ್ನು ಸಂಪೂರ್ಣವಾಗಿ ಒಪ್ಪುವುದಿಲ್ಲ. ದಾದಾ ಈ ತಂಡವನ್ನು ಕಟ್ಟಿದ್ದಾರೆ ಎಂದು ನಾನು ಎಂದಿಗೂ ಹೇಳಲಿಲ್ಲ. ಅವರು ಮತ್ತು ಧೋನಿ ತಂಡದ ನಾಯಕತ್ವ ವಹಿಸಿ ಪ್ರಭಾವ ಬೀರಿದರು, ಅದು ನಿಜ. ಆದರೆ ತಂಡವನ್ನು ಎಲ್ಲಾ ಮೂರು ಸ್ವರೂಪಗಳಲ್ಲಿ ನಿರ್ಮಿಸಿದ ಶ್ರೇಯಸ್ಸು ರಾಹುಲ್ ದ್ರಾವಿಡ್‌ಗೆ ಸಲ್ಲಬೇಕು ಎಂದಿದ್ದಾರೆ.

ರಾಹುಲ್ ಸೆಲೆಕ್ಟರ್‌ಗಳೊಂದಿಗೆ ಜಗಳವಾಡುತ್ತಿದ್ದರು ಯುವ ಆಟಗಾರರಿಗಾಗಿ ರಾಹುಲ್ ಸೆಲೆಕ್ಟರ್‌ಗಳೊಂದಿಗೆ ಜಗಳವಾಡುತ್ತಿದ್ದರು ಎಂದು ರೈನಾ ಹೇಳಿದ್ದಾರೆ. ರಾಹುಲ್ ಭಾಯ್ ಅವರು ಯುವ ಆಟಗಾರರನ್ನು ತಂಡದಲ್ಲಿ ಸೇರಿಸಲು ಸೆಲೆಕ್ಟರ್‌ಗಳೊಂದಿಗೆ ಹೋರಾಡುತ್ತಿದ್ದರು ಮತ್ತು ಅವರು ಯಾವಾಗಲೂ ನಮಗೆ ನೀಡಿದ ಒಂದು ಸಲಹೆಯೆಂದರೆ ರಣಜಿ ಟ್ರೋಫಿ ಸಾಧ್ಯವಾದಾಗಲೆಲ್ಲಾ ಆಡುವುದು, ಉತ್ತಮ ಪ್ರದರ್ಶನ ಮತ್ತು ಸಾಕಷ್ಟು ರನ್ ಗಳಿಸಿ ನಂತರ ಭಾರತಕ್ಕೆ ಹಿಂತಿರುಗಿ ಎಂದು ನಮಗೆ ಸಲಹೆ ನೀಡುತ್ತಿದ್ದರು ಎಂದು ರೈನಾ ಹೇಳಿಕೊಂಡಿದ್ದಾರೆ.

ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್