ಮೋದಿ ಸಂಪುಟ ಸೇರಲು ಅನುಪ್ರಿಯಾ, ಚಿರಾಗ್​, ಜಯಂತ್ ಸೇರಿ ಹಲವರಿಗೆ ಕರೆ

|

Updated on: Jun 09, 2024 | 11:11 AM

ನರೇಂದ್ರ ಮೋದಿ ಸಂಪುಟ ಸೇರಲು ಅನುಪ್ರಿಯಾ, ಚಿರಾಗ್ ಸೇರಿದಂತೆ ಹಲವರಿಗೆ ಕರೆಗಳು ಬರಲಾರಂಭಿಸಿವೆ ಎಂದು ಹೇಳಲಾಗುತ್ತಿದೆ ಆದರೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಬಿಜೆಪಿ ನಾಯಕ ಪಿಯುಷ್ ಗೋಯಲ್, ರಾಜನಾಥ್​ ಸಿಂಗ್, ನಿತಿನ್ ಗಡ್ಕರಿ, ಜ್ಯೋತಿರಾದಿತ್ಯ ಸಿಂಧಿಯಾ, ಜೆಡಿಎಸ್​ ನಾಯಕ ಕುಮಾರಸ್ವಾಮಿ, ಎಚ್​ಎಎಂನ ಜಿತಿನ್ ಮಾಂಝಿ, ಆರ್​ಎಲ್​ಡಿ ನಾಯಕ ಜಯಂತ್ ಚೌಧರಿ, ಎಲ್​ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್, ಜೆಡಿಯು ನಾಯಕ ರಾಮನಾಥ್​ ಠಾಕೂರ್ ದಳದ ಅನುಪ್ರಿಯಾ ಪಟೇಲ್ ಅವರಿಗೆ ಕರೆಗಳು ಬಂದಿವೆ ಎಂದು ಹೇಳಲಾಗುತ್ತಿದೆ.

ಮೋದಿ ಸಂಪುಟ ಸೇರಲು ಅನುಪ್ರಿಯಾ, ಚಿರಾಗ್​, ಜಯಂತ್ ಸೇರಿ ಹಲವರಿಗೆ ಕರೆ
ನರೇಂದ್ರ ಮೋದಿ
Follow us on

ನರೇಂದ್ರ ಮೋದಿ(Narendra Modi) ಯವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನವೇ ಮೋದಿ ಸಂಪುಟ ಸೇರುವಂತೆ ಕರೆಗಳು ಬರಲಾರಂಭಿಸಿವೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಅಧಿಕೃತವಾಗಿ ಯಾವುದನ್ನೂ ಬಹಿರಂಗಪಡಿಸಿಲ್ಲ. ಮೂಲಗಳನ್ನು ಉಲ್ಲೇಖಿಸಿ, ಬಿಜೆಪಿ ನಾಯಕ ಪಿಯುಷ್ ಗೋಯಲ್, ರಾಜನಾಥ್​ ಸಿಂಗ್, ನಿತಿನ್ ಗಡ್ಕರಿ, ಜ್ಯೋತಿರಾದಿತ್ಯ ಸಿಂಧಿಯಾ, ಜೆಡಿಎಸ್​ ನಾಯಕ ಕುಮಾರಸ್ವಾಮಿ, ಎಚ್​ಎಎಂನ ಜಿತಿನ್ ಮಾಂಝಿ, ಆರ್​ಎಲ್​ಡಿ ನಾಯಕ ಜಯಂತ್ ಚೌಧರಿ, ಎಲ್​ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್, ಅಪ್ನಾ ದಳದ ಅನುಪ್ರಿಯಾ ಪಟೇಲ್ ಅವರಿಗೆ ಕರೆಗಳು ಬಂದಿವೆ ಎಂದು ಹೇಳಲಾಗುತ್ತಿದೆ.

ಚಿರಾಗ್ ಪಾಸ್ವಾನ್ ಅವರ ಪಕ್ಷ ಎಲ್​ಜೆಪಿ ಬಿಹಾರದಲ್ಲಿ ಐದು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು, ಆ ಐದರಲ್ಲೂ ಗೆಲುವು ಸಾಧಿಸಿತ್ತು. ಚಿರಾಗ್ ಅವರು ಹಾಜಿಪುರದಿಂದ ಗೆಲುವು ಸಾಧಿಸಿದ್ದರು. ನಿತಿನ್ ಗಡ್ಕರಿ ನಾಗ್ಪುರದಿಂದ ಗೆದ್ದು ಮತ್ತೊಮ್ಮೆ ಸಂಸತ್ತಿಗೆ ಬಂದಿದ್ದಾರೆ. ಗಡ್ಕರಿ ಅವರು ಮೋದಿ ಸರ್ಕಾರದಲ್ಲಿ ಸತತ ಎರಡು ಅವಧಿಗೆ ಸಚಿವರಾಗಿದ್ದರು. ಜೆಡಿಯು ಸಂಸದ ರಾಮನಾಥ್ ಠಾಕೂರ್​ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಅನುಪ್ರಿಯಾ ಪಟೇಲ್ ಅವರು ಅಪ್ನಾ ದಳದ ಎರಡು ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಜಿತಿನ್ ರಾಮ್ ಮಾಝಿ ಅವರ ಪಕ್ಷ ಒಂದು ಸ್ಥಾನವನ್ನು ಕಳೆದುಕೊಂಡಿತ್ತು. ಜಯಂತ್ ಚೌಧರಿ ರಾಜ್ಯಸಭಾ ಸಂಸದರಾಗಿದ್ದಾರೆ.

ಮತ್ತಷ್ಟು ಓದಿ: ಪ್ರಧಾನಿ ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಲಿರುವ ವಿದೇಶಿ ಗಣ್ಯರ ಬಗ್ಗೆ ಇಲ್ಲಿದೆ ಮಾಹಿತಿ

ಟಿಡಿಪಿ ತನ್ನ ಸಂಭಾವ್ಯ ಸಚಿವರ ಹೆಸರನ್ನು ಪ್ರಕಟಿಸಿದೆ, ಟಿಡಿಪಿ ನಾಯಕ ಜಯದೇವ್ ಗಲ್ಲಾ ಅವರು ತಮ್ಮ ಪಕ್ಷಕ್ಕೆ ಕ್ಯಾಬಿನೆಟ್ ಸ್ಥಾನ ಮತ್ತು ಮೋದಿ 3.0 ಸಚಿವ ಸಂಪುಟದಲ್ಲಿ ರಾಜ್ಯ ಸಚಿವ ಸ್ಥಾನ ಸಿಕ್ಕಿದೆ ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ. ಮೂರು ಬಾರಿ ಸಂಸದರಾಗಿರುವ ರಾಮ್ ಮೋಹನ್ ನಾಯ್ಡು ಅವರು ಟಿಡಿಪಿ ಕೋಟಾದಿಂದ ಹೊಸದಾಗಿ ರಚನೆಯಾದ ಕೇಂದ್ರ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾಗಲಿದ್ದಾರೆ ಎನ್ನಲಾಗುತ್ತಿದೆ.

ಪ್ರಮಾಣವಚನ ಸಮಾರಂಭಕ್ಕೂ ಮುನ್ನ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ನೂತನ ಸಚಿವ ಸಂಪುಟದ ಸದಸ್ಯರನ್ನು ಭೇಟಿಯಾಗಲಿದ್ದಾರೆ. ಮೋದಿ ಪ್ರಧಾನಿಯಾಗಿ ಸಂಜೆ 7.15ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.