ನವದೆಹಲಿ: ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು (Pandit Jawaharlal Nehru) ಅವರ ಸಾಧನೆಯನ್ನು ಸರಿಗಟ್ಟುವ ಮೂಲಕ ಮೂರನೇ ಬಾರಿಗೆ ನರೇಂದ್ರ ಮೋದಿ (PM Narendra Modi) ಇಂದು (ಜೂನ್ 9) ಸಂಜೆ ರಾಷ್ಟ್ರ ರಾಜಧಾನಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಧಾನಿ ಮೋದಿ ಅವರು ಭಾರತದ ಇತಿಹಾಸದಲ್ಲಿ ಸತತ 3 ಅವಧಿಗೆ ಪ್ರಧಾನಿಯಾದ ಎರಡನೇ ವ್ಯಕ್ತಿಯಾಗಿದ್ದಾರೆ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು 1952, 1957 ಮತ್ತು 1962ರ ಲೋಕಸಭೆ ಚುನಾವಣೆಗಳಲ್ಲಿ ಗೆದ್ದಿದ್ದರು.
2024ರ ತೀವ್ರ ಪೈಪೋಟಿಯ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎನ್ಡಿಎ ಒಕ್ಕೂಟದ ಗೆಲುವಿನ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ದ್ರೌಪದಿ ಮುರ್ಮು ಇಂದು ಸಂಜೆ ಪ್ರಧಾನಿ ಮೋದಿಗೆ ಪ್ರಮಾಣ ವಚನ ಬೋಧಿಸಿದರು. 73 ವರ್ಷದ ನರೇಂದ್ರ ಮೋದಿ ಮೊದಲು 2014ರಲ್ಲಿ ಪ್ರಧಾನಿಯಾಗಿದ್ದರು ಮತ್ತು ನಂತರ 2019ರಲ್ಲಿ ಮತ್ತೆ ಅಧಿಕಾರಕ್ಕೆ ಮರಳಿದರು.
Honoured to serve Bharat. Watch the oath-taking ceremony. https://t.co/i71ZYjQUvb
— Narendra Modi (@narendramodi) June 9, 2024
ಇದನ್ನೂ ಓದಿ: Modi Swearing-in Ceremony live Streaming: 3ನೇ ಬಾರಿಗೆ ಪ್ರಧಾನಿಯಾಗಿ ಮೋದಿ ಪದಗ್ರಹಣದ ನೇರಪ್ರಸಾರ
ಭಾರತದ ನೆರೆಹೊರೆ ಮತ್ತು ಹಿಂದೂ ಮಹಾಸಾಗರ ಪ್ರದೇಶದ ಪ್ರಮುಖ ನಾಯಕರಾದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ‘ಪ್ರಚಂಡ’, ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್, ಭೂತಾನ್ ಪ್ರಧಾನಿ ತ್ಶೆರಿಂಗ್ ಟೋಬ್ಗೆ ಮತ್ತು ವೈಸ್ -ಸೆಶೆಲ್ಸ್ ಅಧ್ಯಕ್ಷ ಅಹ್ಮದ್ ಅಫೀಫ್- ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿದ್ದರು.
#WATCH | BJP leaders Amit Shah, Rajnath Singh, Nitin Gadkari, Sarbananda Sonowal, JP Nadda, Shivraj Singh Chouhan, Dharmendra Pradhan, Piyush Goyal, Jyotiraditya Scindia, Gajendra Singh Shekhawat & Mansukh Mandaviya present at the Forecourt of Rashtrapati Bhavan for the oath… pic.twitter.com/xFZuL0vP7p
— ANI (@ANI) June 9, 2024
ಇದನ್ನೂ ಓದಿ: Modi 3.0 Cabinet: 72 ಸಚಿವರು, 11 ಮಿತ್ರರಾಷ್ಟ್ರಗಳು, 24 ರಾಜ್ಯಗಳು; ಪ್ರಮಾಣ ವಚನ ಸ್ವೀಕರಿಸಿದ ಮೋದಿಯ ಹೊಸ ಟೀಂ
ನರೇಂದ್ರ ಮೋದಿ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಬಿಜೆಪಿ ನಾಯಕರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಸರ್ಬಾನಂದ ಸೋನೋವಾಲ್, ರಾಜೀವ್ ರಂಜನ್ (ಲಾಲನ್) ಸಿಂಗ್, ಜೆಪಿ ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯಲ್, ಜ್ಯೋತಿರಾದಿತ್ಯ ಸಿಂಧಿಯಾ, ಗಜೇಂದ್ರ ಸಿಂಗ್ ಶೇಖಾವತ್, ಎಚ್‌ಡಿ ಕುಮಾರಸ್ವಾಮಿ ಮತ್ತು ಮನ್ಸುಖ್ ಮಾಂಡವೀಯ ಉಪಸ್ಥಿತರಿದ್ದರು.
Published On - 8:06 pm, Sun, 9 June 24