Modi speech in Indonesia: ಭಾರತದ ರಾಮಮಂದಿರಕ್ಕೂ ಇಂಡೋನೇಷ್ಯಾ ಬಾಲಿ ನದಿಗೂ ಅವಿನಾಭಾವ ಸಂಬಂಧವಿದೆ : ಮೋದಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 15, 2022 | 4:30 PM

G20 Summit: ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂಡೋನೇಷ್ಯದಲ್ಲಿರುವ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

Modi speech in Indonesia: ಭಾರತದ ರಾಮಮಂದಿರಕ್ಕೂ ಇಂಡೋನೇಷ್ಯಾ ಬಾಲಿ ನದಿಗೂ ಅವಿನಾಭಾವ ಸಂಬಂಧವಿದೆ : ಮೋದಿ
Modi speech in Indonesia
Follow us on

ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಇಂಡೋನೇಷ್ಯಾದಲ್ಲಿರುವ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಭಾರತ ಎಲ್ಲದರಲ್ಲೂ ಮುಂದೆ, ಎಲ್ಲವನ್ನು ಸಾಧಿಸುವ ಶಕ್ತಿಯನ್ನು ಹೊಂದಿದೆ. ಇಂಡೋನೇಷ್ಯಾ ಮತ್ತು ನಮ್ಮ ನಡುವೆ ಒಳ್ಳೆಯ ಸಂಬಂಧ ಇದೆ. ಎಲ್ಲವನ್ನು ಒಟ್ಟಾಗಿ ಹಂಚಿಕೊಂಡಿದ್ದೇವೆ, ನಾವು ಮತ್ತು ಇಂಡೋನೇಷ್ಯಾ ಎಲ್ಲ ಸುಖ – ದುಃಖಗಳಲ್ಲಿ ಭಾಗಿಯಾಗಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇಂಡೋನೇಷ್ಯಾದಲ್ಲಿ ಉಂಟಾದ ಭೂಕಂಪದಲ್ಲಿ ನಾವು ಅವರಿಗೆ ಎಲ್ಲ ರೀತಿ ಸಹಾಯವನ್ನು ಮಾಡಿದ್ದೇವೆ, ಅಪರೇಷನ್ ಸಮುದ್ರ ಮೈತ್ರಿ ಎಂಬ ಯೋಜನೆ ಮೂಲಕ ಸಹಾಯ ಹಸ್ತ ನೀಡಿದ್ದೇವೆ. ನಮ್ಮಲ್ಲಿ ಗಂಗಾ ನದಿ ಒಂದು ಪುಣ್ಯ ನದಿಯಾಗಿದೆ. ಬಾಲಿ ಇಂಡೋನೇಷ್ಯಾದ ನದಿ, ನಮ್ಮ ಗಂಗಾದಂತೆ ಇದು ಒಂದು ಪುಣ್ಯ ನದಿ, ಇದಕ್ಕೂ ಒಂದು ಇತಿಹಾಸ ಇದೆ. ಭಾರತದಲ್ಲಿ ರಾಮಮಂದಿರಕ್ಕೂ ಇಂಡೋನೇಷ್ಯಾದ ಬಾಲಿಗೂ ಸಂಬಂಧ ಇದೆ ಎಂದು ಹೇಳಿದರು.

ರಾಮ ಮಂದಿರಕ್ಕೆ ಇಂಡೋನೇಷ್ಯಾ ಕಲಾಕೃತಿಗಳ ಸ್ಪರ್ಶವನ್ನು ನೀಡಲಾಗುವುದು ಹಾಗೂ ರಾಮಮಂದಿರ ನಿರ್ಮಾಣವಾಗುತ್ತಿರುವ ಹಂತದಲ್ಲಿ  ಈ ಕಲಾಕೃತಿಗಳನ್ನು  ಜೋಡಿಸಲಾಗುವುದು. ರಾಮ ಮಂದಿರಕ್ಕೂ ಇಂಡೋನೇಷ್ಯಾದ ಬಾಲಿಗೂ ಸಂಬಂಧ ಇದೆ, ಹಾಗಾಗಿ ನಾನು ಇಂಡೋನೇಷ್ಯಾವನ್ನು ನಮ್ರತೆಯಿಂದ ನೆನಪಿಸಿಕೊಳ್ಳಬೇಕು. ಪ್ರಗತಿಯಲ್ಲಿ ಭಾರತ ಮತ್ತು ಇಂಡೋನೇಷ್ಯಾದ ಒಟ್ಟಾಗಿ ಕೆಲಸ ಮಾಡಬೇಕಿದೆ.

ಭಾರತಕ್ಕೆ ತಂತ್ರಜ್ಞಾನ, ಉದ್ಯಮ, ಶಿಕ್ಷಣದಲ್ಲಿ ಅಭಿವೃದ್ಧಿಯನ್ನು ಸಾಧಿಸಲು ಸಹಾಯ ಮಾಡಬೇಕಿದೆ. ಜಗತ್ತಿನ ವಿವಿಧ ಕಡೆ ಭಾರತದ ಜನರೇ ಸಿಇಒಗಳು ಉದ್ಯಮಗಳು ಇದ್ದಾರೆ. ಭಾರತ ಐಟಿ, ಡಿಜಿಟಲ್ ಇಂಡಿಯಾ, ಸ್ಪಾಟ್​ಪೋನ್ ಉತ್ಪಾದನೆಯಲ್ಲಿ ಅನೇಕ ವಿಚಾರದಲ್ಲಿ ಮುಂದಿದೆ. ಇದರಲ್ಲಿ ಮೋದಿ ಕಾರ್ಯ ಇಲ್ಲ, ಇದಕ್ಕೆ ಕಾರಣ ಭಾರತದ ವೇಗವಾಗಿ ಬೆಳೆಯುತ್ತಿರುವ ಕೌಶಲ್ಯದ ಸಂಕಲ್ಪ ಎಂದು ಹೇಳಿದ್ದಾರೆ.

ಜಗತ್ತಿನ ಅತಿ ದೊಡ್ಡ ಪ್ರತಿಮೆ, ಕ್ರೀಡಾಂಗಣ ಇರುವುದು ಭಾರತದಲ್ಲಿ. ಭಾರತ ವಾಣಿಜ್ಯ ವ್ಯವಹಾರದಲ್ಲೂ ಮುಂದೆ, ಭಾರತ ಇತರ ವಿದೇಶಿ ಬ್ಯಾಂಕ್​ಗಳಿಗೆ ಸಾಲ ನೀಡುವಷ್ಟು ಬೆಳೆದು ನಿಂತಿದೆ. ಭಾರತ ಜಗತ್ತಿನ ಅತೀ ದೊಡ್ಡ ನ್ಯಾಷನಲ್ ಹೈವೆಗಳನ್ನು ನಿರ್ಮಾಣ ಮಾಡಿದೆ.

ಕೊರೊನಾ ಸಮಯದಲ್ಲೂ ಕೋವಿಡ್ ಡೋಸ್​ಗಳನ್ನು ಅಮೆರಿಕಾ, ಯೂರೋಪ್ ದೇಶಗಳಿಗೆ ಭಾರತ ನೀಡಿದೆ. ಹಾಗಾಗಿ ಭಾರತ ಔಷಧಿ  ರಫ್ತಿನಲ್ಲೂ ಮುಂದಿದೆ. ಇದಕ್ಕಾಗಿ ನಾವು ಗರ್ವ ಪಡಬೇಕು. ನಾವು ಯಾವುದಕ್ಕೂ ಸ್ವಾರ್ಥ ಬಯಸುವುದಿಲ್ಲ. ನಾವು ಜಗತ್ತಿನ ಬಲಿಷ್ಠತೆಗಾಗಿ ಶ್ರಮಿಸುತ್ತೇವೆ ಎಂದರು.

ಭಾರತವು ಆತ್ಮ ನಿರ್ಭರ ಭಾರತಕ್ಕಾಗಿ ಶ್ರಮಿಸುತ್ತದೆ. ಒಂದು ಭೂಮಿ, ಒಂದು ಆರೋಗ್ಯ ಎಂಬ ಯೋಜನೆಯಾಡಿಯಲ್ಲಿ ವಾತಾವರಣ ಬದಲಾವಣೆಯಿಂದ ಆಗುವ ಅಪಾಯವನ್ನು ತಪ್ಪಿಸಲು ಶ್ರಮಿಸಬೇಕಿದೆ. ಭಾರತ ಈ ಕಾರಣಕ್ಕೆ ಯೋಗ, ಧ್ಯಾನಗಳನ್ನು ಮಾಡಬೇಕಿದೆ. ಇದಕ್ಕಾಗಿ ಗುಜರಾತ್​ನಲ್ಲಿ ಆಯುರ್ವೇದ ವಿಶ್ವವಿದ್ಯಾಲಯದ ಮೂಲಕ ಇಂಡೋನೇಷ್ಯಾ ಮತ್ತು ಭಾರತವು ಹಿಂದೋ- ಇಂಡೋನೇಷ್ಯಾ ಮೂಲಕ ಕೆಲಸ ಮಾಡಲಿದೆ. ಇದರ  ಜೊತೆಗೆ ಭಾರತ ಮತ್ತು ಇಂಡೋನೇಷ್ಯಾ ಶೈಕ್ಷಣಿಕ ಕ್ಷೇತ್ರ ಮತ್ತು ವಿಜ್ಞಾನ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸಲಿದೆ. ಈ ಕಾರ್ಯಕ್ರಮದ ಮೂಲಕ ರಾಷ್ಟ್ರ ರಾಷ್ಟ್ರಗಳ ನಡುವೇ ಒಳ್ಳೆಯ ಸಂಬಂಧಗಳನ್ನು ಬೆಳೆಸಿಕೊಳ್ಳ ಅವಕಾಶ ನೀಡಿದೆ ಎಂದರು.

Published On - 4:23 pm, Tue, 15 November 22