AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ಲಕ್ಷ ರೂ. ಇದ್ದ ಹಣದ ಬ್ಯಾಗ್ ಕದ್ದೊಯ್ದು, ಮರದ ಮೇಲೆ ಕುಳಿತು ನೋಟಿನ ಮಳೆ ಸುರಿಸಿದ ಕೋತಿ

ಉತ್ತರ ಪ್ರದೇಶದ ನ್ಯಾಯಾಲಯದ ಆವರಣದಲ್ಲಿ ಕೋತಿಯೊಂದು 2 ಲಕ್ಷ ರೂ. ಇದ್ದ ಹಣದ ಬ್ಯಾಗ್ ಕದ್ದು, ಮರದ ಮೇಲೆ ಕುಳಿತು ನೋಟುಗಳನ್ನು ಗಾಳಿಯಲ್ಲಿ ತೂರಿದೆ. ಕೆಳಗೆ ನಿಂತಿದ್ದ ಜನರು ಹಣ ಆಯ್ದುಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪರೂಪದ ಈ ಘಟನೆ ನೆಟ್ಟಿಗರಲ್ಲಿ ನಗುವಿನ ಅಲೆ ಸೃಷ್ಟಿಸಿದೆ.

ಎರಡು ಲಕ್ಷ ರೂ. ಇದ್ದ ಹಣದ ಬ್ಯಾಗ್ ಕದ್ದೊಯ್ದು, ಮರದ ಮೇಲೆ ಕುಳಿತು ನೋಟಿನ ಮಳೆ ಸುರಿಸಿದ ಕೋತಿ
ಮಂಗ
ನಯನಾ ರಾಜೀವ್
|

Updated on: Jun 02, 2026 | 2:30 PM

Share

ಬುಲಂದ್‌ಶಹರ್, ಜೂನ್ 02: ಸಾಮಾನ್ಯವಾಗಿ ಕೋತಿ(Monkey)ಗಳು ಜನರ ಕೈಯಿಂದ ಮೊಬೈಲ್, ಹಣ್ಣು, ಪರ್ಸ್​, ಕನ್ನಡಕ ಇತ್ಯಾದಿ ಕಸಿದುಕೊಳ್ಳುವುದನ್ನು ಕಂಡಿದ್ದೇವೆ. ಆದರೆ ಉತ್ತರ ಪ್ರದೇಶದ ನ್ಯಾಯಾಲಯದ ಆವರಣದಲ್ಲಿ ಕೋತಿಯೊಂದು 2 ಲಕ್ಷ ರೂ. ಇದ್ದ ಬ್ಯಾಗ್​ ಕದ್ದೊಯ್ದು, ಮರದ ಮೇಲೆ ಕುಳಿತು ಹಣದ ಮಳೆ ಸುರಿಸಿರುವ ವಿಡಿಯೋ ವೈರಲ್ ಆಗಿದೆ.

ಬೇವಿನ ಮರದಲ್ಲಿ ‘ನೋಟುಗಳ ಮಳೆ’ ನ್ಯಾಯಾಲಯದ ಆವರಣದಲ್ಲಿ ವ್ಯಕ್ತಿಯೊಬ್ಬರು ಹಣದ ಚೀಲದೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಕೋತಿಯು ಚೀಲವನ್ನು ಕಸಿದುಕೊಂಡು ಕ್ಷಣಾರ್ಧದಲ್ಲಿ ಹತ್ತಿರದ ಬೇವಿನ ಮರವನ್ನು ಹತ್ತಿದೆ. ಚೀಲದೊಳಗೆ ಹಣ್ಣು ಅಥವಾ ಬಿಸ್ಕತ್ತು ಇರಬಹುದೆಂದು ಭಾವಿಸಿದ ಕೋತಿ, ಬ್ಯಾಗ್ ಜಿಪ್ ತೆರೆದು ನೋಟುಗಳ ಕಂತೆಗಳನ್ನು ಹೊರತೆಗೆಯಲು ಆರಂಭಿಸಿದೆ. ನಂತರ ಒಂದೊಂದೇ ನೋಟುಗಳನ್ನು ಗಾಳಿಯಲ್ಲಿ ತೂರಲಾರಂಭಿಸಿತು.

ವಿಡಿಯೋ

ಹಣ ಆಯ್ದುಕೊಂಡ ಜನರು: ಮರದಿಂದ 500 ರೂ. ಮುಖಬೆಲೆಯ ನೋಟುಗಳು ಗಾಳಿಯಲ್ಲಿ ತೇಲುತ್ತಾ ಕೆಳಗೆ ಬೀಳುತ್ತಿದ್ದಂತೆ, ನ್ಯಾಯಾಲಯದ ಆವರಣದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಕೆಳಗೆ ನಿಂತಿದ್ದ ಸಾರ್ವಜನಿಕರು ಹಾಗೂ ವಕೀಲರು ನೋಟುಗಳನ್ನು ಸಂಗ್ರಹಿಸಿ, ಮಾಲೀಕರಿಗೆ ಸಹಾಯ ಮಾಡಲು ಮುಂದಾದರು. ಸ್ವಲ್ಪ ಸಮಯದವರೆಗೆ ಇಡೀ ಆವರಣ ಆಕಾಶದಿಂದ ಹಣದ ಮಳೆಯಾಗುತ್ತಿರುವಂತೆ ಕಾಣಿಸುತ್ತಿತ್ತು.

ಮತ್ತಷ್ಟು ಓದಿ: Video Viral: ಕೋತಿ ಜೊತೆಯೇ ಚೇಷ್ಟೆ ಮಾಡಲು ಹೋದ್ರೆ ಏನಾಗುತ್ತೆ ನೋಡಿ; ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ನಗುವಿನ ಅಲೆ ಈ ಇಡೀ ರೋಚಕ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.ಬಂದರ್ ಬಾಬಾ ಇಂದು ಎಲ್ಲರಿಗೂ ಉಚಿತ ಬೋನಸ್ ನೀಡುತ್ತಿದ್ದಾರೆ ಎಂದು ಒಬ್ಬರು ಬರೆದರೆ, ಇಷ್ಟು ದಿನ ಸಿನಿಮಾಗಳಲ್ಲಿ ಮಾತ್ರ ಹಣದ ಮಳೆ ನೋಡಿರುತ್ತೀರಿ, ಇಂದು ಕೋತಿರಾಯ ನಿಜವಾಗಿಯೇ ಆಸೆ ಈಡೇರಿಸಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಯಾರಿಗೂ ಯಾವುದೇ ಹಾನಿಯಾಗದೆ, ಕಳೆದುಹೋದ ಹಣವು ವಾಪಸ್ ಸಿಗುವಂತಾದ ಈ ಅಪರೂಪದ ವೀಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ