Monsoon 2021: ಕೇರಳಕ್ಕೆ ಪ್ರವೇಶ ವಿಳಂಬವಾದರೂ ದೇಶಾದ್ಯಂತ ಅತ್ಯಂತ ವೇಗವಾಗಿ ವ್ಯಾಪಿಸುತ್ತಿದೆ ಮಾನ್ಸೂನ್​; ಕಾರಣ ಏನು?

ಮಂಗಳವಾರ ಮಾನ್ಸೂನ್​​ನ ಉತ್ತರದ ಮಿತಿ ದಿಯು, ಸೂರತ್​, ನಂದರ್ಬಾರ್​, ಭೋಪಾಲ್​, ನಾಗೌನ್​, ಹಮೀರ್​ಪುರ, ಬಾರ್ಬಂಕಿ, ಬರೇಲಿ, ಸಹರಾನ್​ಪುರ, ಅಂಬಾಲಾ ಮತ್ತು ಅಮೃತಸರ ಮೂಲಕ ಹಾದು ಹೋಗಿದೆ.. ಮಾನ್ಸೂನ್​ ನಿರಂತರವಾಗಿ ಎಲ್ಲ ಪ್ರದೇಶಗಳನ್ನೂ ಪ್ರವೇಶಿಸುತ್ತಿದೆ.

Monsoon 2021: ಕೇರಳಕ್ಕೆ ಪ್ರವೇಶ ವಿಳಂಬವಾದರೂ ದೇಶಾದ್ಯಂತ ಅತ್ಯಂತ ವೇಗವಾಗಿ ವ್ಯಾಪಿಸುತ್ತಿದೆ ಮಾನ್ಸೂನ್​; ಕಾರಣ ಏನು?
ಪ್ರಾತಿನಿಧಿಕ ಚಿತ್ರ

ಈಗಿನ್ನೂ ಜೂನ್​ ಎರಡನೇ ವಾರ.. ನೈಋತ್ಯ ಮಾನ್ಸೂನ್​ ಈಗಾಗಲೇ ದೇಶದ ಮೂರನೇ ಎರಡರಷ್ಟು ಭಾಗವನ್ನು ಆವರಿಸಿದೆ..ಬಹುತೇಕ ಭಾಗಗಳಲ್ಲಿ ಭರ್ಜರಿ ಮಳೆಯಾಗುತ್ತಿದೆ. ನೀವು ಗಮನಿಸಿ, ನೈಋತ್ಯ ಮಾನ್ಸೂನ್​ ತುಂಬ ಬೇಗಬೇಗ ದೇಶಾದ್ಯಂತ ಪ್ರವೇಶಿಸುತ್ತಿದೆ. ಈ ಬಾರಿ ನಿಗದಿತ ಸಮಯಕ್ಕಿಂತಲೂ ಎರಡು ದಿನ ತಡವಾಗಿಯೇ ಕೇರಳ ಕರಾವಳಿಯನ್ನು ಪ್ರವೇಶಿಸಿರುವ ಮುಂಗಾರು, ನಂತರ ಕೇವಲ ಹತ್ತೇ ದಿನಗಳಲ್ಲಿ ದೇಶದ ಮೂರರಲ್ಲಿ ಎರಡರಷ್ಟು ಪ್ರದೇಶವನ್ನು ಆವರಿಸಿದೆ.

ಮಂಗಳವಾರ ಮಾನ್ಸೂನ್​​ನ ಉತ್ತರದ ಮಿತಿ ದಿಯು, ಸೂರತ್​, ನಂದರ್ಬಾರ್​, ಭೋಪಾಲ್​, ನಾಗೌನ್​, ಹಮೀರ್​ಪುರ, ಬಾರ್ಬಂಕಿ, ಬರೇಲಿ, ಸಹರಾನ್​ಪುರ, ಅಂಬಾಲಾ ಮತ್ತು ಅಮೃತಸರ ಮೂಲಕ ಹಾದು ಹೋಗಿದೆ.. ಮಾನ್ಸೂನ್​ ನಿರಂತರವಾಗಿ ಎಲ್ಲ ಪ್ರದೇಶಗಳನ್ನೂ ಪ್ರವೇಶಿಸುತ್ತಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿತ್ತು. ಸದ್ಯಕ್ಕಂತೂ ದೇಶದ ಕೆಲವೇ ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಕಡೆ ಮುಂಗಾರು ಮಳೆ ಸುರಿಯುತ್ತಿದೆ. ಈ ವರ್ಷ ಮುಂಗಾರು ಮುಂಚಿತವಾಗಿಯೇ ಕಾಲಿಟ್ಟಿದೆ.

ನೈಋತ್ವ ಮಾನ್ಸೂನ್​ ಬೇಗನೇ ವ್ಯಾಪಿಸುತ್ತಿರಲು ಕಾರಣವೇನು?
ಮೇ ಮೂರನೇ ವಾರದಲ್ಲಿ ಬಂಗಾಳಕೊಲ್ಲಿಯಲ್ಲಿ ಎದ್ದ ಯಾಸ್ ಚಂಡಮಾರುತದಿಂದ ಈ ಬಾರಿ ಮಾನ್ಸೂನ್ ಸರಿಯಾದ ಸಮಯಕ್ಕೆ, ಅಂದರೆ​ ಮೇ 21ಕ್ಕೆ ಅಂಡಮಾನ್​ ತಲುಪಲು ಸಹಾಯ ಮಾಡಿದೆ. ಜೂ.1ಕ್ಕೆ ಕರಾವಳಿ ತೀರಕ್ಕೆ ಮುಂಗಾರು ಪ್ರವೇಶ ಆಗಬೇಕಿತ್ತು. ಆದರೆ ಎರಡು ದಿನಗಳ ನಂತರ ಅಪ್ಪಳಿಸಿತು. ಆದರೆ ದೇಶಾದ್ಯಂತ ಅತ್ಯಂತ ವೇಗವಾಗಿ ವ್ಯಾಪಿಸುತ್ತಿರಲು ಕಾರಣ, ಅರೇಬಿಯನ್​ ಸಮುದ್ರದಿಂದ ಗಾಳಿ ಪಶ್ಚಿಮಾಭಿಮುಖವಾಗಿ ಬೀಸುತ್ತಿರುವುದು ಮತ್ತು ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಜೂ.11ರಂದು ಕಡಿಮೆ ಒತ್ತಡ ಉಂಟಾಗಿದ್ದು. ಸದ್ಯ ನೈಋತ್ಯ ಮಾನ್ಸೂನ್​ ಬಲಗೊಂಡಿದ್ದು, ಈಶಾನ್ಯ, ಪಶ್ಚಿಮಬಂಗಾಳ, ಓಡಿಶಾ, ಜಾರ್ಖಂಡ, ಬಿಹಾರ ಮತ್ತು ಛತ್ತೀಸ್​ಗಢ್​​​ಗಳತ್ತ ವ್ಯಾಪಿಸುತ್ತಿದೆ.

2011ರಿಂದ ಅಂದರೆ ಕಳೆದೊಂದು ದಶಕಗಳಿಂದ ಮಾನ್ಸೂನ್​ ಜೂನ್​​ನಲ್ಲಿಯೇ ಇಡೀ ದೇಶಕ್ಕೆ ವ್ಯಾಪಿಸುತ್ತಿದೆ. 2020ರಲ್ಲಿ ಜೂ.1ರಿಂದ ಶುರವಾಗಿ 26ರಹೊತ್ತಿಗೆ ದೇಶಾದ್ಯಂತ ಮುಂಗಾರು ಪ್ರವೇಶ ಆಗಿತ್ತು. 2018ರಲ್ಲಿ ಮೇ 28ರಲ್ಲೇ ಮುಂಗಾರು ಪ್ರಾರಂಭವಾಗಿತ್ತು. ಆದರೆ ದೇಶಾದ್ಯಂತ ವ್ಯಾಪಿಸಲು ಜೂ.29ರವರೆಗೆ ಸಮಯ ತೆಗೆದುಕೊಂಡಿತ್ತು. 2015ರಲ್ಲಿ ಜೂ.5ರಿಂದ 26ರವರೆಗೆ ಇಡೀ ದೇಶದಲ್ಲಿ ಮಾನ್ಸೂನ್​ ಶುರುವಾಗಿತ್ತು. ಹಾಗೇ 2013ರಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಅಂದರೆ ಜೂ.1ರಲ್ಲಿ ಪ್ರವೇಶಿಸಿದ್ದ ಮುಂಗಾರು 16ರ ಹೊತ್ತಿಗೆ ಇಡೀ ದೇಶಕ್ಕೆ ವ್ಯಾಪಿಸಿಯಾಗಿತ್ತು. ಇನ್ನುಳಿದಂತೆ 2019ರಲ್ಲಿ ವಾಯು ಚಂಡಮಾರುತದಿಂದ, 2017ರಲ್ಲಿ ಮೋರಾ ಸೈಕ್ಲೋನ್​ನಿಂದಾಗಿ, ಪ್ರಮುಖ ನಗರಗಳಿಗೆ ಮುಂಗಾರು ಪ್ರವೇಶ ವಿಳಂಬವಾಗಿತ್ತು.

ಮುಂಚಿತ ಮುಂಗಾರಿನಿಂದ ವಿಪರೀತ ಮಳೆಯಾಗುತ್ತದೆಯೇ?
ಮುಂಗಾರು ಆಗಮನಕ್ಕೂ..ಮಳೆಯ ಪ್ರಮಾಣಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ ಹವಾಮಾನ ತಜ್ಞರು. ಯಾವುದೇ ಪ್ರದೇಶದಲ್ಲಿ ಮಾನ್ಸೂನ್​ ಪ್ರಾರಂಭವಾಗುವ ಸಮಯಕ್ಕೂ, ನಂತರ ಬೀಳುವ ಮಳೆಗೂ ಸಂಬಂಧವಿರುವುದಿಲ್ಲ. 2014ರಲ್ಲಿ ಮಾನ್ಸೂನ್​ ಇಡೀ ದೇಶವನ್ನು ಆವರಿಸಲು ಒಟ್ಟಾರೆ 42 ದಿನಗಳು ಬೇಕಾದವು. 2015ರಲ್ಲಿ 22ದಿನಗಳಲ್ಲೇ ಇಡೀ ದೇಶಕ್ಕೆ ಮುಂಗಾರು ಆವರಿಸಿತು. ಆದರೆ ಈ ಎರಡೂ ವರ್ಷಗಳಲ್ಲಿ ಭಾರತದಲ್ಲಿ ಮಳೆಯ ಪ್ರಮಾಣ ತುಂಬ ಕಡಿಮೆ ದಾಖಲಾಗಿದೆ. ಈ ವರ್ಷವೂ ಸಹ ಜೂನ್​ ಅಂತ್ಯದ ಒಳಗೇ ಇಡೀ ದೇಶಾದ್ಯಂತ ಮುಂಗಾರು ಪ್ರವೇಶ ಮಾಡುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಕಾಮನ್ ಫ್ರೆಂಡ್ ಮೂಲಕ ಯುವತಿ ಪರಿಚಯ; ವಿಚಾರಣೆ ವೇಳೆ ನರೇಶ್ ಮಾಹಿತಿ

Monsoon hit the Kerala coast two days behind schedule but already covered two thirds of the country