ಲೋಕಸಭೆಯಲ್ಲಿ(Lok Sabha) ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದ ನಾಲ್ವರು ಕಾಂಗ್ರೆಸ್ ಸಂಸದರನ್ನು ಅಮಾನತು ಮಾಡಲಾಗಿದೆ. ಸಂಸದರಾದ ಮಣಿಕಂ ಟಾಗೋರ್, ರಮ್ಯಾ ಹರಿದಾಸ್, ಜೋತಿಮಣಿ ಮತ್ತು ಟಿಎನ್ ಪ್ರತಾಪನ್ ಅವರನ್ನು ಮುಂಗಾರು ಅಧಿವೇಶನದಿಂದ (Monsoon Session) ಅಮಾನತು ಮಾಡಲಾಗಿದೆ. ಮುಂಗಾರು ಅಧಿವೇಶನದ 6ನೇ ದಿನವಾದ ಇಂದು (ಸೋಮವಾರ) ಬೆಲೆ ಏರಿಕೆ ವಿರುದ್ದ ಪ್ಲೆಕಾರ್ಡ್ ಹಿಡಿದು ಸಂಸದರು ಸದನದೊಳಗೆ ಪ್ರತಿಭಟನೆ ನಡೆಸಿದ್ದರು. ಇದಕ್ಕಿಂತ ಮುನ್ನ ಪ್ಲೆಕಾರ್ಡ್ ಹಿಡಿದು ಪ್ರತಿಭಟನೆ ನಡೆಸುತ್ತಿರುವುದನ್ನು ಖಂಡಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಪ್ಲೆಕಾರ್ಡ್ ಹಿಡಿದು ಪ್ರತಿಭಟನೆ ನಡೆಸುವುದಾದರೆ ಸದನದಿಂದ ಹೊರಗೆ ಹೋಗಿ ಎಂದು ಗುಡುಗಿದ್ದರು. ಸಂಸದರ ಪ್ರತಿಭಟನೆಗೆ ಅಸಮಾಧಾನ ಸೂಚಿಸಿದ ಸ್ಪೀಕರ್, ನಾನು 3 ಗಂಟೆಯ ನಂತರ ಚರ್ಚೆ ಮಾಡಲು ಸಿದ್ಧ. ಆದರೆ ಸದನದ ಒಳಗೆ ಪ್ಲೆಕಾರ್ಡ್ ಹಿಡಿದು ಪ್ರತಿಭಟನೆ ನಡೆಸುವುದನ್ನು ನಾನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
Four Congress Lok Sabha MPs including Manickam Tagore, Ramya Haridas, Jothimani and TN Prathapan suspended for the entire Monsoon session pic.twitter.com/p2qb2oKshf
— ANI (@ANI) July 25, 2022
ನೀವು ಪ್ಲೆಕಾರ್ಡ್ ತೋರಿಸಬೇಕೆಂದಿದ್ದರೆ ಅದನ್ನು ಸದನದ ಹೊರಗೆ ಮಾಡಿ. ನಾನು ಚರ್ಚೆಗೆ ಸಿದ್ದ ಆದರೆ ನನ್ನ ಮೃದು ಸ್ವಭಾವವನ್ನು ನನ್ನ ದೌರ್ಬಲ್ಯ ಎಂದು ಭಾವಿಸಬೇಡಿ ಎಂದು ಸ್ಪೀಕರ್ ಬಿರ್ಲಾ, ಸದನದ ಕಲಾಪನ್ನು ನಾಳೆಗೆ ಮುಂದೂಡಿದ್ದಾರೆ.
Published On - 4:02 pm, Mon, 25 July 22