ದೇಶದಾದ್ಯಂತ ಭಾರೀ ಮಳೆ, ಮುಂದಿನ 5 ದಿನಗಳಲ್ಲಿ ಉತ್ತರ ಭಾರತದಲ್ಲಿ ಮುಂಗಾರು ಸಕ್ರಿಯ

|

Updated on: Jun 27, 2023 | 8:39 PM

ಜುಲೈ 1 ರವರೆಗೆ ಕೇರಳದ ಕೆಲವು ಭಾಗಗಳಲ್ಲಿ , ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಲಕ್ಷದ್ವೀಪದಲ್ಲಿ ಸಹ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೇರಳದಲ್ಲಿ ಇದುವರೆಗೂ ಮಳೆ ಕೊರತೆಯಾಗಿದೆ ಎಂದು ಐಎಂಡಿ ಹೇಳಿ

ದೇಶದಾದ್ಯಂತ ಭಾರೀ ಮಳೆ, ಮುಂದಿನ 5 ದಿನಗಳಲ್ಲಿ ಉತ್ತರ ಭಾರತದಲ್ಲಿ ಮುಂಗಾರು ಸಕ್ರಿಯ
ಮಳೆ
Follow us on

ಕಳೆದ ಕೆಲವು ದಿನಗಳಿಂದ ಭಾರತದ ಹಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದೆ(Rain). ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಮುಂಗಾರು ಋತುವು (Monsoon) ಮುಂದಿನ ಕೆಲವು ದಿನಗಳವರೆಗೆ ಬಿರುಸಿನ ಮಳೆಯೊಂದಿಗೆ ಮುಂದುವರಿಯಲಿದೆ. ಮುಂದಿನ ಐದು ದಿನಗಳಲ್ಲಿ ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಹಿಮಾಚಲ ಪ್ರದೇಶ, ಕೊಂಕಣ, ಗೋವಾ, ಗುಜರಾತ್ ಮತ್ತು ಮಹಾರಾಷ್ಟ್ರದ ಘಾಟ್ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿಕೆ ತಿಳಿಸಿದೆ. ಗುಜರಾತ್‌ನಲ್ಲಿ ಬುಧವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕಳೆದ 4-5 ದಿನಗಳಲ್ಲಿ ತ್ವರಿತ ಪ್ರಗತಿಯೊಂದಿಗೆ ಮುಂಗಾರು ಪ್ರಸ್ತುತ ಸಕ್ರಿಯವಾಗಿದೆ. ವಾಯುವ್ಯ ಭಾರತದ ಕೆಲವು ಭಾಗಗಳನ್ನು ಬಿಟ್ಟರೆ, ಮಾನ್ಸೂನ್ ಬಹುತೇಕ ಇಡೀ ದೇಶದ ಮೇಲೆ ಪರಿಣಾಮ ಬೀರಿದೆ. ಇಡೀ ಗುಜರಾತ್ ಮತ್ತು ಆಗ್ನೇಯ ರಾಜಸ್ಥಾನವನ್ನು ಮಾನ್ಸೂನ್ ಆವರಿಸಿದೆ. ಮುಂದಿನ ಎರಡು ದಿನಗಳಲ್ಲಿ, ದಕ್ಷಿಣ ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಉಳಿದ ಭಾಗಗಳನ್ನು ಆವರಿಸುವ ನಿರೀಕ್ಷೆಯಿದೆ ಎಂದು ಐಎಂಡಿ ವಿಜ್ಞಾನಿ ಸೋಮ ಸೇನ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ದೆಹಲಿ

IMD ಸೋಮವಾರ ನವದೆಹಲಿಯ ಕೆಲವು ಭಾಗಗಳಿಗೆ ಮಂಗಳವಾರ ಯೆಲ್ಲೋ ಎಚ್ಚರಿಕೆಯನ್ನು ನೀಡಿದೆ. ದೆಹಲಿಯಲ್ಲಿ ಮಂಗಳವಾರ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ಬೆಳಿಗ್ಗೆ ಕನಿಷ್ಠ ತಾಪಮಾನವು 24.5 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 5.6 ಮಿಮೀ ಮಳೆಯಾಗಿದೆ ಎಂದು ಐಎಂಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಂಸಿಡಿಯ ಮಾನ್ಸೂನ್ ಸಿದ್ಧತೆಗಳ ಕುರಿತು ಮಾತನಾಡಿದ ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಕಳೆದ 15 ದಿನಗಳಲ್ಲಿ, ನಾವು 2-3 ಬಾರಿ ಎಂಸಿಡಿ ಅಧಿಕಾರಿಗಳೊಂದಿಗೆ ಮಾತ್ರವಲ್ಲದೆ ಅಂತರ-ಇಲಾಖೆಯ ಸಭೆಗಳನ್ನು ನಡೆಸಿದ್ದೇವೆ. ನಾವು ಪಿಡಬ್ಲ್ಯೂಡಿ, ಡಿಡಿಎ, ದೆಹಲಿ ಜಲ ಮಂಡಳಿ, ರೈಲ್ವೆ ಮತ್ತು ಮೆಟ್ರೋ ಅಧಿಕಾರಿಗಳನ್ನು ಕರೆದಿದ್ದೇವೆ. ನಾವು ಮಾಡಬೇಕಾದ ಎಲ್ಲಾ ಸಿದ್ಧತೆಗಳ ಬಗ್ಗೆ ಚರ್ಚಿಸಿದ್ದೇವೆ. ಒಬ್ಬರನ್ನೊಬ್ಬರು ದೂಷಿಸಿಕೊಳ್ಳುವ ಬದಲು ಎಲ್ಲಾ ಅಧಿಕಾರಿಗಳು ಸಮನ್ವಯತೆಯಿಂದ ದೆಹಲಿಯನ್ನು ಮುಂಗಾರು ಮಳೆಗೆ ಸಜ್ಜುಗೊಳಿಸಲು ಕೆಲಸ ಮಾಡಿದರೆ ಉತ್ತಮ ಎಂದು ಅವರಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಹಿಮಾಚಲ ಪ್ರದೇಶ

ಹಠಾತ್ ಪ್ರವಾಹ ಮತ್ತು ಭಾರೀ ಮಳೆಯನ್ನು ಎದುರಿಸುತ್ತಿರುವ ಹಿಮಾಚಲ ಪ್ರದೇಶದ ಹಲವಾರು ಪ್ರದೇಶಗಳಲ್ಲಿ ಮುಂದಿನ ಐದು ದಿನಗಳವರೆಗೆ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಮಂಗಳವಾರ ರಾಜ್ಯದಲ್ಲಿ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದ್ದು, ಬುಧವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಂಗ್ರಾ, ಚಂಬಾ, ಬಿಲಾಸ್‌ಪುರ್, ಉನಾ, ಹಮೀರ್‌ಪುರ್, ಮಂಡಿ, ಕುಲು, ಶಿಮ್ಲಾ ಮತ್ತು ಸೋಲನ್ ಜಿಲ್ಲೆಗಳಲ್ಲಿ ಗುಡುಗು ಸಹಿತ ಕಡಿಮೆ ತೀವ್ರತೆಯ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.

ಮಂಗಳವಾರ, ಹಿಮಾಚಲದಲ್ಲಿ ಭಾರೀ ಮಳೆಯಿಂದಾಗಿ ಹಠಾತ್ ಪ್ರವಾಹವುಂಟಾಗಿದ್ದು ಡೇರ್ಡ್ ನಾಲಾದಲ್ಲಿ ತಂಡಿ-ಕಿಲ್ಲರ್ ರಾಜ್ಯ ಹೆದ್ದಾರಿ-26ಲ್ಲಿ ಭಾರೀ ಸಂಚಾರ ದಟ್ಟಣೆಗೆ ಕಾರಣವಾಯಿತು. ಜೂನ್ 24 ರಂದು ಹಿಮಾಚಲ ಪ್ರದೇಶಕ್ಕೆ ಮುಂಗಾರು ಪ್ರವೇಶಿಸಿದೆ . ಇಲ್ಲಿಯವರೆಗೆ, 9 ಜನರು ಪ್ರಾಣ ಕಳೆದುಕೊಂಡಿದ್ದಾರೆ, 14 ಮಂದಿ ಗಾಯಗೊಂಡಿದ್ದಾರೆ, 4 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ ಮತ್ತು 28 ಭಾಗಶಃ ಹಾನಿಗೊಳಗಾಗಿವೆ. ಅಂದಾಜು ₹104 ಕೋಟಿ ನಷ್ಟವಾಗಿದೆ ಎಂದು ಕಂದಾಯ ಮತ್ತು ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ಓಂಕಾರ್ ಚಂದ್ ಶರ್ಮಾ ಹೇಳಿದ್ದಾರೆ.


ಮುಂಬೈ

ಮುಂಬೈನ ಕೆಲವು ಭಾಗಗಳಿಗೆ ಐಎಂಡಿ ಮಂಗಳವಾರ ಆರೆಂಜ್ ಅಲರ್ಟ್ ನೀಡಿದೆ. ಮಂಗಳವಾರ ಮತ್ತು ಬುಧವಾರದಂದು ಮುಂದಿನ 24 ಗಂಟೆಗಳಲ್ಲಿ 115.5 ಮಿಮೀ ವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ಜನರಿಗೆ ಎಚ್ಚರಿಕೆ ನೀಡಿದೆ.
ಮುಂಬೈ ಮತ್ತು ಸ್ಯಾಟಲೈಟ್ ನಗರಗಳು ಸೇರಿದಂತೆ ಕೊಂಕಣ ಪ್ರದೇಶದ ಮೇಲೆ ಮುಂಗಾರು ಮತ್ತಷ್ಟು ವರ್ಧಿಸುವ ಸಾಧ್ಯತೆಯಿದೆ, ಅದು ಉತ್ತರದ ಕಡೆಗೆ ಸಾಗುತ್ತದೆ. ಇಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕೊಂಕಣ, ವಿದರ್ಭ ಮತ್ತು ಮಧ್ಯ ಮಹಾರಾಷ್ಟ್ರಕ್ಕೂ ಐಎಂಡಿ ಎಚ್ಚರಿಕೆ ನೀಡಿದೆ ಎಂದು ಪುಣೆಯ ಐಎಂಡಿಯ ಹಿರಿಯ ವಿಜ್ಞಾನಿ ಕೆಎಸ್ ಹೊಸಲಿಕರ್ ಹೇಳಿದ್ದಾರೆ.

ದಕ್ಷಿಣ ಭಾರತ

ಜುಲೈ 1 ರವರೆಗೆ ಕೇರಳದ ಕೆಲವು ಭಾಗಗಳಲ್ಲಿ , ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಲಕ್ಷದ್ವೀಪದಲ್ಲಿ ಸಹ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೇರಳದಲ್ಲಿ ಇದುವರೆಗೂ ಮಳೆ ಕೊರತೆಯಾಗಿದೆ ಎಂದು ಐಎಂಡಿ ಹೇಳಿದೆ. ನಾವು ಕೇರಳದಲ್ಲಿ ಕೇವಲ ಮೈನಸ್ 65 ಪ್ರತಿಶತದಷ್ಟು ಮಳೆಯನ್ನು ಪಡೆದಿದ್ದೇವೆ. ಕೇರಳದ ಎಲ್ಲಾ ಜಿಲ್ಲೆಗಳು ಈ ಋತುವಿನಲ್ಲಿ ಇದುವರೆಗೆ ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು ಪಡೆದಿವೆ ಎಂದು ಐಎಂಡಿ ಕೇರಳದ ಪ್ರಭಾರ ನಿರ್ದೇಶಕ ಡಾ ವಿ ಕೆ ಮಿನಿ ಹೇಳಿದ್ದಾರೆ.

ಬಿಹಾರ

ಬಿಹಾರದ ಹಲವು ಪ್ರದೇಶಗಳಲ್ಲಿ ಮಂಗಳವಾರ ಭಾರೀ ಮಳೆಯಾಗಿದೆ ಬಿಹಾರವು ಮಂಗಳವಾರ ಭಾಗಶಃ ಮೋಡ ಕವಿದ ವಾತಾವರಣವನ್ನು ಕಾಣುವ ಸಾಧ್ಯತೆಯಿದೆ ಎಂದು ಕೆಲವು ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಹವಾಮಾನ ಇಲಾಖೆ ಹೇಳಿದೆ.

ಇದನ್ನೂ ಓದಿ: Monsoon Health Tips: ಮಳೆಗಾಲದಲ್ಲಿ ಮಕ್ಕಳು ಜೋಪಾನ, ಈ ಕಾಯಿಲೆಗಳು ಬರಬಹುದು, ಇಲ್ಲಿದೆ ತಜ್ಞರ ಸಲಹೆ

ಮಧ್ಯಪ್ರದೇಶ

ಮುಂದಿನ ಐದು ದಿನಗಳಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ವಿದರ್ಭದ ಕೆಲವು ಭಾಗಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ