Karnataka Rain: ಬೆಂಗಳೂರಿನಲ್ಲಿ ಸಂಜೆಯಾಗುತಲೇ ಸುರಿದ ಮಳೆ, ಕರ್ನಾಟಕ ಹಲವೆಡೆ ವರುಣನ ಸಿಂಚನ

Karnataka Weather Forecast: ಕರ್ನಾಟಕ ಹಲವೆಡೆ ಇಂದ ಮಳೆಯಾಗಿದ್ದು, ಬೆಂಗಳೂರಿನಲ್ಲಿ ಸಂಜೆಯಾಗುತ್ತಲೇ ಧಾರಾಕಾರವಾಗಿ ಮಳೆ ಸುರಿಯಲು ಆರಂಭವಾಗಿದೆ.

Karnataka Rain: ಬೆಂಗಳೂರಿನಲ್ಲಿ ಸಂಜೆಯಾಗುತಲೇ ಸುರಿದ ಮಳೆ, ಕರ್ನಾಟಕ ಹಲವೆಡೆ ವರುಣನ ಸಿಂಚನ
ಬೆಂಗಳೂರು ಸೇರಿದಂತೆ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಸುರಿದ ಮಳೆ (ಸಾಂದರ್ಭಿಕ ಚಿತ್ರ)Image Credit source: FILE IMAGE
Follow us
|

Updated on:Jun 27, 2023 | 6:21 PM

ಬೆಂಗಳೂರು: ನೈರುತ್ಯ ಮುಂಗಾರು ದುರ್ಬಲ ನಡುವೆ ಕರಾವಳಿಯ ಬಹುತೇಕ ಜಿಲ್ಲೆಗಳು ಸೇರಿದಂತೆ ಕರ್ನಾಟಕದ (Karnataka Rain) ಹಲವೆಡೆ ಇಂದು ವರುಣನ ಸಿಂಚನ ಆಗಿದ್ದು, ಉತುರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಸಂಜೆಯಾಗುತ್ತಲೇ ಶಾಂತಿನಗರ ಸೇರಿದಂತೆ ಬೆಂಗಳೂರು (Bengaluru Rain) ನಗರದ ವಿವಿಧ ಕಡೆಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯಲು ಆರಂಭವಾಗಿದೆ. ಹಲವೆಡೆ ಮೋಡ ಕವಿದ ವಾತಾವರಣ ಇದೆ.

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ 5 ಸೆಂ.ಮೀ. ಮಳೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಡುಪಿ ಜಿಲ್ಲೆಯ ಕೋಟ, ಕುಂದಾಪುರ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕ್ಯಾಸಲ್ ರಾಕ್, ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ. ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳ, ಬೆಳಗಾವಿ ಜಿಲ್ಲೆಯ ಗುಂಜಿ, ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ತಲಾ 2 ಸೆಂ.ಮೀ., ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಪುತ್ತೂರು, ಸುಬ್ರಹ್ಮಣ್ಯ, ಉಡುಪಿ ಜಿಲ್ಲೆಯ ಸಿದ್ದಾಪುರ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಗೋಕರ್ಣ, ಬೇಲಿಕೇರಿ, ಬೆಳಗಾವಿ ಜಿಲ್ಲೆಯ ಲೋಂಡಾ, ಧಾರವಾಡ ಜಿಲ್ಲೆಯ ಕಲಘಟಗಿ, ಬೀದರ್ ಜಿಲ್ಲೆಯ ಬಾಲ್ಕಿ, ರಾಜೇಶ್ವರ, ಹಾಸನದ ಸಕಲೇಶಪುರದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.

ಇದನ್ನೂ ಓದಿ: ಗದಗ: ವರುಣ ದೇವನನ್ನು ಮೆಚ್ಚಿಸಲು ಗೊಂಬೆಗಳ ಮದುವೆ; ಮಳೆಗಾಗಿ ರೈತರ ಪ್ರಾರ್ಥನೆ

ಮುಂದಿನ ಎರಡು ದಿನ ರಾಜ್ಯದಲ್ಲಿ ಗುಡುಗು ಸಹಿತ ಮಳೆ

ಕರ್ನಾಟಕ ಹಲವೆಡೆ ಜೂನ್ 29ರ ವರೆಗೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 24 ಘಂಟೆಗಳಲ್ಲಿ ಕರಾವಳಿಯ ಬಹುತೇಕ ಕಡೆಗಳಲ್ಲಿ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಬಹಳಷ್ಟು ಇದೆ. ಕರಾವಳಿಯಲ್ಲಿ ಬಿರುಗಾಳಿಯು 40-45 ಕಿ.ಮೀ. ಇಂದ 55 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಮುಂದಿನ 48 ಘಂಟೆಗಳಲ್ಲಿ ಕರಾವಳಿಯ ಬಹುತೇಕ ಕಡೆಗಳಲ್ಲಿ ಹಾಗೂ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ

ಬೆಂಗಳೂರು ನಗರದಲ್ಲಿ ಮುಂದಿನ 24 ಗಂಟೆಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಕೆಲವು ಪ್ರದೇಶಗಳಲ್ಲಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಭಾರೀ ಗಾಳಿ ಬೀಸುವ ಸಾಧ್ಯತೆಯೂ ಇದೆ. ಮುಂದಿನ 48 ಗಂಟೆಗಳಲ್ಲಿಯೂ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಕೆಲವು ಪ್ರದೇಶಗಳಲ್ಲಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಬಲವಾದ ಮೇಲೆ ಗಾಳಿ ಬೀಸುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Tue, 27 June 23

‘ಭೈರತಿ ರಣಗಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಲೈವ್ ವಿಡಿಯೋ ನೋಡಿ..
‘ಭೈರತಿ ರಣಗಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಲೈವ್ ವಿಡಿಯೋ ನೋಡಿ..
ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಮಂದಿ
ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಮಂದಿ
ಯಥರ್ವ್ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಯಥರ್ವ್ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಸೋಲದೇವನಹಳ್ಳಿ, ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ
ಸೋಲದೇವನಹಳ್ಳಿ, ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ
ಪಾಲಿಕೆ ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಪಾಲಿಕೆ ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ
ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ
ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ
ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?