Monsoon Travel Wishlist: ಮಳೆಗಾಲದಲ್ಲಿ ಕರ್ನಾಟಕ ಸೇರಿ ಈ ಪ್ರದೇಶಗಳಿಗೆ ಪ್ರವಾಸ ಮಾಡಿ, ಇಲ್ಲಿದೆ ಅದ್ಭುತ ಸ್ಥಳಗಳು

ಮಾನ್ಸೂನ್ ಋತುವಿನಲ್ಲಿ ಭೇಟಿ ನೀಡಲು ಇಚ್ಛಿಸುತ್ತಿದ್ದರೇ, ಭಾರತದಲ್ಲಿ ನಿಮಗೆ ಹಲವಾರು ತಾಣಗಳ ಪಟ್ಟಿಯೇ ಇದೆ. ಚಿರಾಪುಂಜಿಯಿಂದ ಮುನ್ನಾರ್ ವರೆಗೆ ಕೆಲವು ಅತ್ಯುತ್ತಮ ಸ್ಥಳಗಳು ಬಗ್ಗೆ ಇಲ್ಲಿದೆ ಮಾಹಿತಿ.

| Updated By: ಅಕ್ಷಯ್​ ಪಲ್ಲಮಜಲು​​

Updated on:Jun 27, 2023 | 3:25 PM

ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾದ ದೇಶ ನಮ್ಮದು. ವೈವಿಧ್ಯಮಯ ಭೂದೃಶ್ಯಗಳು ಮಾನ್ಸೂನ್ ಋತುವಿನಲ್ಲಿ ಇನ್ನಷ್ಟು ಆಕರ್ಷಕವಾಗಿ ಕಾಣುತ್ತವೆ. ಪಶ್ಚಿಮ ಘಟ್ಟಗಳ ಮಂಜಿನ ಬೆಟ್ಟಗಳಿಂದ ಹಿಡಿದು ಈಶಾನ್ಯದ ಸೊಂಪಾದ ಕಣಿವೆಗಳವರೆಗೆ, ಭಾರತವು ಮಳೆಗಾಲದಲ್ಲಿ ರೋಮಾಂಚಕ ನೈಸರ್ಗಿಕ ಸೌಂದರ್ಯದೊಂದಿಗೆ ಸಮೃದ್ಧವಾಗಿದೆ. ನೀವು ಮಳೆಗಾಲದ ಪ್ರವಾಸ ಇಷ್ಟ ಪಡುವವರಾದರೇ ಭಾರತದೊಳಗಿನ ಮಾನ್ಸೂನ್ ಪ್ರವಾಸಕ್ಕೆ ಅನುಗುಣವಾಗುವಂತೆ ಒಂದು ಚಿಕ್ಕ ಪಟ್ಟಿ ತಯಾರಿಸಲಾಗಿದ್ದು  ನಿಮ್ಮನ್ನು ಮೋಡಿ ಮಾಡುವ ಮತ್ತು ಸುಂದರವಾದ ಸ್ಥಳಗಳ ಬಗ್ಗೆ ಇಲ್ಲಿದೆ ಮಾಹಿತಿ.

1 / 8
ಚಿರಾಪುಂಜಿ: ಭೂಮಿಯ ಮೇಲಿನ ತೇವಭರಿತ ಸ್ಥಳಗಳಲ್ಲಿ ಒಂದೆಂದು ಕರೆಯಲ್ಪಡುವ ಭಾರತದ ಮೇಘಾಲಯದ ಚಿರಾಪುಂಜಿ ಮಾನ್ಸೂನ್ ಪ್ರಿಯರ ಸ್ವರ್ಗವಾಗಿದೆ. ಇಲ್ಲಿನ ಬೆಟ್ಟಗಳು, ಕಾಸ್ಕೇಡಿಂಗ್ ಜಲಪಾತಗಳು ಮತ್ತು ಹಳೆಯ ಸೇತುವೆಗಳು, ಮಳೆಗಾಲದಲ್ಲಿ ಅಲ್ಲಿನ ಪರಿಸರಕ್ಕೆ ಕೈ ಬೀಸಿ ಕರೆಯುತ್ತದೆ. ಇಲ್ಲಿ ನೀವು ನೋಡಬಹುದಾದ ಸ್ಥಳವೆಂದರೆ ನೊಹ್ಕಾಲಿಕೈ ಜಲಪಾತ. ಇಲ್ಲಿನ ದಟ್ಟವಾದ ಮಳೆ ಕಾಡುಗಳ ಮೂಲಕ ಚಾರಣ ಮಾಡುವ ರೋಮಾಂಚಕ ಅನುಭವ ಸವಿಯಬಹುದು. ಅದರ ಜೊತೆ ಜೊತೆಗೆ ಅಲ್ಲಿನ ಸ್ಥಳೀಯ ಖಾಸಿ ಸಂಸ್ಕೃತಿಯಲ್ಲಿ  ಮಿಂದೇಳಬಹುದು.

2 / 8
ಲೋನಾವಾಲಾ: ಮುಂಬೈ ಸಮೀಪದಲ್ಲಿರುವ ಒಂದು ಆಕರ್ಷಕ ಗಿರಿಧಾಮವಾದ ಲೋನಾವಾಲಾ ಒಂದು ಜನಪ್ರಿಯ ತಾಣವಾಗಿದೆ. ರಮಣೀಯ ಸೌಂದರ್ಯ ಮತ್ತು ಆಹ್ಲಾದಕರ ಹವಾಮಾನಕ್ಕೆ ಹೆಸರುವಾಸಿಯಾದ ಲೋನಾವಾಲಾ ಸೊಂಪಾದ ಹಸಿರು ಕಣಿವೆಗಳು, ಕಾಸ್ಕೇಡಿಂಗ್ ಜಲಪಾತಗಳು ಮತ್ತು ಮಂಜಿನಿಂದ ಆವೃತವಾದ ಬೆಟ್ಟಗಳಿಂದ ಸುತ್ತುವರಿದಿದೆ. ಇದನ್ನು ನೋಡುತ್ತಾ ನಿಂತರೆ ಸಮಯ ಕಳೆದದ್ದು ತಿಳಿಯುವುದೇ ಇಲ್ಲ. ಅಲ್ಲದೆ ಇದು ಟೈಗರ್ಸ್ ಪಾಯಿಂಟ್, ಭೂಶಿ ಅಣೆಕಟ್ಟು ಮತ್ತು ಪ್ರಾಚೀನ ಕಾರ್ಲಾ ಗುಹೆಗಳಂತಹ ಆಕರ್ಷಣೆಗಳಿಗೆ ಹೆಸರು ವಾಸಿಯಾಗಿದೆ. ಸಾಹಸ ಉತ್ಸಾಹಿಗಳು ಸುಂದರವಾದ ಪರಿಸರದಲ್ಲಿ ಚಾರಣ ಮತ್ತು ಪಾದಯಾತ್ರೆಯಂತಹ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಬಹುದು.

3 / 8
ಕೊಡೈಕೆನಾಲ್, ತಮಿಳುನಾಡು: "ಗಿರಿಧಾಮಗಳ ರಾಜಕುಮಾರಿ" ಎಂದು ಕರೆಯಲ್ಪಡುವ ಕೊಡೈಕೆನಾಲ್ ಮಳೆಗಾಲದಲ್ಲಿ ಪ್ರಶಾಂತವಾದ ವಿಶ್ರಾಂತಿ ತಾಣವಾಗಿದೆ. ಮಂಜಿನಿಂದ ಆವೃತವಾದ ಬೆಟ್ಟಗಳು, ಸುಂದರ ಸರೋವರಗಳು ಮತ್ತು ರಮಣೀಯ ದೃಶ್ಯಾವಳಿಗಳು ಪ್ರಶಾಂತ ವಾತಾವರಣವನ್ನು ಸೃಷ್ಟಿಸುತ್ತವೆ. ಸುಂದರವಾದ ಕೊಡೈಕೆನಾಲ್ ಸರೋವರದಲ್ಲಿ ದೋಣಿ ಸವಾರಿ ಮಾಡಿ, ಇಲ್ಲಿನ  ಉದ್ಯಾನವನವನ್ನು ನೋಡಿಕೊಂಡು, ಸೊಂಪಾದ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಆಹ್ಲಾದಕರ ಹವಾಮಾನವನ್ನು ಆನಂದಿಸಬಹುದು.

4 / 8
ಮುನ್ನಾರ್, ಕೇರಳ: ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಮುನ್ನಾರ್ ತನ್ನ ವಿಸ್ತಾರವಾದ ಚಹಾ ಎಸ್ಟೇಟ್ಗಳು, ಮಂಜಿನಿಂದ ಆವೃತವಾದ ಕಣಿವೆಗಳು ಮತ್ತು ಕಾಸ್ಕೇಡಿಂಗ್ ಜಲಪಾತಗಳಿಗೆ ಹೆಸರುವಾಸಿಯಾದ ಗಿರಿಧಾಮವಾಗಿದೆ. ಮಾನ್ಸೂನ್ ಋತುವು ಈಗಾಗಲೇ ಸುಂದರವಾದ ಈ ತಾಣಕ್ಕೆ ಅತೀಂದ್ರಿಯ ಸ್ಪರ್ಶವನ್ನು ನೀಡುತ್ತದೆ. ಚಹಾ ತೋಟಗಳ ಮೂಲಕ ಚಾರಣ ಮಾಡುತ್ತಾ ಅಟ್ಟುಕಾಡ್ ಜಲಪಾತಕ್ಕೆ ಭೇಟಿ ನೀಡಬಹುದು ಮತ್ತು ತಂಪಾದ ಹಾಗೂ ಉಲ್ಲಾಸಕರ ಹವಾಮಾನವನ್ನು ಕೂಡ ಆನಂದಿಸಬಹುದು.

5 / 8
ಕೂರ್ಗ್, ಕರ್ನಾಟಕ: ಕೊಡಗು ಎಂದೂ ಕರೆಯಲ್ಪಡುವ ಕೂರ್ಗ್ ಪ್ರಕೃತಿ ಪ್ರಿಯರಿಗೆ ಜನಪ್ರಿಯ ತಾಣವಾಗಿದೆ. ಮಳೆಗಾಲವು ಕಾಫಿ ತೋಟಗಳು, ಮಸಾಲೆ ತೋಟಗಳು ಮತ್ತು ಜಲಪಾತಗಳೊಂದಿಗೆ ಈ ಪ್ರದೇಶದ ನಿಜವಾದ ಸೌಂದರ್ಯ ಹೊಂದಿರುವ ತಾಣವಾಗಿದೆ. ನೀವು ಕಾಫಿ ಪ್ರಿಯರಾಗಿದ್ದರೆ ತೋಟಗಳನ್ನು ನೋಡುತ್ತಾ ನೋಡುತ್ತಾ ಕಾಫಿಯ ಸುವಾಸನೆಯನ್ನು ಅನುಭವಿಸಿ, ಭವ್ಯವಾದ ಅಬ್ಬೆ ಜಲಪಾತಕ್ಕೆ ಭೇಟಿ ನೀಡಿ ಮತ್ತು ಸುಂದರವಾದ ಭೂದೃಶ್ಯಗಳ ನಡುವೆ ಉಲ್ಲಾಸ ನೀಡುವ ಮಾನ್ಸೂನ್ ಮಳೆಯನ್ನು ಆನಂದಿಸಬಹುದು.

6 / 8
ಗೋವಾ: ನಿಮ್ಮನ್ನು ಬೆರಗುಗೊಳಿಸುವ ಕಡಲ ತೀರಗಳಿಂದ ಹೆಸರುವಾಸಿಯಾದ ಗೋವಾ, ಮಳೆಗಾಲದಲ್ಲಿ ವಿಭಿನ್ನ ಮೋಡಿ ಮಾಡುತ್ತದೆ. ಸೊಂಪಾದ ಹಸಿರು ತುಂಬಿಕೊಂಡ ಭೂದೃಶ್ಯಗಳು, ಮಳೆಯಿಂದ ತೊಳೆದ ಕಡಲತೀರಗಳು ಮತ್ತು ಶಾಂತಿಯುತ ವಾತಾವರಣವು ಇದನ್ನು ನಿಮ್ಮ ನೆನಪಿನಲ್ಲಿ ಎಂದೆಂದಿಗೂ ಮಾಸದ ತಾಣವನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ. ಜೊತೆಗೆ  ಕರಾವಳಿ ರಸ್ತೆಗಳ ಉದ್ದಕ್ಕೂ ನಿಮ್ಮ ಡ್ರೈವ್ ಅನ್ನು ನೀವು ಆನಂದಿಸಿ, ದೂಧ್ ಸಾಗರ್ ಜಲಪಾತವನ್ನು ಅದರ ಪೂರ್ಣ ವೈಭವವನ್ನು ನೋಡುವ ಮೂಲಕ  ಕಡಲತೀರದ ಗುಡಿಸಲುಗಳಲ್ಲಿ ಟೆಂಟ್ ಹಾಕಿಕೊಂಡು ಆ ವಾತಾವರಣವನ್ನು ಆನಂದಿಸಿ.

7 / 8
ಹೂವುಗಳ ಕಣಿವೆ, ಉತ್ತರಾಖಂಡ್: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಉತ್ತರಾಖಂಡದ ಹೂವುಗಳ ಕಣಿವೆಯು ಮಾನ್ಸೂನ್ ಋತುವಿನಲ್ಲಿ ಪ್ರಕೃತಿ ಉತ್ಸಾಹಿಗಳಿಗೆ ಒಂದು ರಸದೌತಣವನ್ನು ನೀಡುತ್ತದೆ. ಈ ಎತ್ತರದ ಕಣಿವೆಯು ದುಂಡಾಗಿ ಕಾಣುವುದಲ್ಲದೇ,  ವಿವಿಧ ರೀತಿಯ ಆಲ್ಪೈನ್ ಹೂವುಗಳು ಅರಳುವುದರಿಂದ ಇಲ್ಲಿನ ಸೊಬಗನ್ನು ದುಪಟ್ಟು ಮಾಡುತ್ತದೆ. ಸೊಂಪಾದ ಹುಲ್ಲುಗಾವಲುಗಳ ಮೂಲಕ ಚಾರಣ ಮಾಡಿ, ಜಲಪಾತಗಳನ್ನು ನೋಡುವ ಮೂಲಕ ಇಲ್ಲಿನ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಿ.

8 / 8

Published On - 2:45 pm, Tue, 27 June 23

Follow us