ಬೆಂಗಳೂರು: ವಿಶ್ವದಾದ್ಯಂತ ಕೊರೊನಾ ಸೋಂಕಿನ ಅಟ್ಟಹಾಸ ಮಿತಿಮೀರಿದೆ. ಈ ನಡುವೆ ವಿದೇಶಗಳಲ್ಲಿರುವ ಕನ್ನಡಿಗರನ್ನು ಭಾರತಕ್ಕೆ ಕರೆತರುವುದಕ್ಕೆ ಸಿದ್ಧತೆ ಶುರುವಾಗಿದೆ. 4,408 ಪ್ರವಾಸಿಗರು, 3,074 ವಿದ್ಯಾರ್ಥಿಗಳು, 2,784 ವಲಸಿಗರು, ವೃತ್ತಿನಿರತರು, 557 ಹಡಗು ಸಿಬ್ಬಂದಿ, ಸೇರಿದಂತೆದ ಮೊದಲ ಹಂತದಲ್ಲಿ 10,823 ಜನರನ್ನ ಕರೆತರಲು ಸಿದ್ಧತೆ ನಡೆಯುತ್ತಿದೆ.
ನಂತರ 2,380 ಪ್ರವಾಸಿಗರು, 1,600 ವಿದ್ಯಾರ್ಥಿಗಳು, 1,503 ವಲಸಿಗರು, ವೃತ್ತಿನಿರತರು, 557 ಹಡಗು ಸಿಬ್ಬಂದಿ ಸೇರಿದಂತೆ 2ನೇ ಹಂತದಲ್ಲಿ 6,100 ಕನ್ನಡಿಗರನ್ನು ಕರೆತರಲು ವ್ಯವಸ್ಥೆ ಮಾಡಲಾಗುತ್ತೆ. ಕೆನಡಾ-328, USA-927, UAE-2,575, ಕತಾರ್-414, ಸೌದಿಯಿಂದ 927 ಜನರನ್ನ ಕರೆತರಲು ಸರ್ಕಾರ ನಿರ್ಧಾರಿಸಿದೆ.
ವಿದೇಶದಿಂದ ಬರುವ ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಲಾಗುತ್ತೆ. ವಿದೇಶದಿಂದ ಬಂದವರು ಆರೋಗ್ಯ ಸೇತು ಆ್ಯಪ್ ಬಳಕೆ ಮಾಡುವುದು ಕಡ್ಡಾಯವಾಗಿದೆ. ಅವರು ತಮ್ಮ ಆರೋಗ್ಯದ ಮಾಹಿತಿಯನ್ನು ಆ್ಯಪ್‌ನಲ್ಲಿ ದಾಖಲಿಸಬೇಕು. ಹೈಪರ್ ಟೆನ್ಷನ್, ಅಸ್ತಮಾ, ಇತರೆ ಕಾಯಿಲೆಗಳಿದ್ದರೂ ಆರೋಗ್ಯ ತಪಾಸಣೆ ವೇಳೆ ವೈದ್ಯರಿಗೆ ಮಾಹಿತಿ ನೀಡಬೇಕು.
ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿರಬೇಕು. ವಿದೇಶದಿಂದ ಬರುವವರಿಗೆ ಏರ್‌ಪೋರ್ಟ್‌ನಿಂದ ನೇರವಾಗಿ ಕ್ವಾರಂಟೈನ್‌ಗೆ ಶಿಫ್ಟ್ ಮಾಡಲಾಗುತ್ತೆ. 14 ದಿನ ಕ್ವಾರಂಟೈನ್ನಲ್ಲಿರಬೇಕು. ಅವರನ್ನು ಕ್ವಾರಂಟೈನ್ ಸ್ಥಳಕ್ಕೆ ಕರೆದೊಯ್ಯಲು KSRTC, BMTC ಬಸ್‌ಗಳ ಸಿದ್ಧತೆ ಮಾಡಲಾಗುತ್ತೆ ಎಂಬ ಮಾಹಿತಿ ಸಿಕ್ಕಿದೆ.