AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಉದ್ಯೋಗ ನೀಡುವುದಾಗಿ ನಂಬಿಸಿ, 200ಕ್ಕೂ ಹೆಚ್ಚು ಯುವತಿಯರ ಮೇಲೆ ಅತ್ಯಾಚಾರ

ಬಿಹಾರಲ್ಲಿ ಒಂದು ಅವಮಾನೀಯ ಘಟನೆಯೊಂದು ನಡೆದಿದೆ. 200ಕ್ಕೂ ಹೆಚ್ಚು ಮಹಿಳೆಯರನ್ನು ಕೂಡು ಹಾಕಿ, ಅತ್ಯಾಚಾರ ಮಾಡಲಾಗಿದೆ ಎಂದು ಹೇಳಲಾಗಿದೆ. ಇದೀಗ ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಯುವತಿಯರಿಗೆ ಉದ್ಯೋಗ ನೀಡುವುದಾಗಿ ನಂಬಿಸಿ, ಲೈಂಗಿಕವಾಗಿ ಉಪಯೋಗಿಸಿಕೊಂಡಿದ್ದಾರೆ.

Video: ಉದ್ಯೋಗ ನೀಡುವುದಾಗಿ ನಂಬಿಸಿ, 200ಕ್ಕೂ ಹೆಚ್ಚು ಯುವತಿಯರ ಮೇಲೆ ಅತ್ಯಾಚಾರ
ವೈರಲ್​​ ವಿಡಿಯೋ
ಅಕ್ಷಯ್​ ಪಲ್ಲಮಜಲು​​
|

Updated on: Jun 18, 2024 | 3:44 PM

Share

ಇಲ್ಲಿ ಅವಕಾಶ ಇದೆ, ಅಲ್ಲಿ ಅವಕಾಶ ಇದೆ, ಉದ್ಯೋಗ ಮಾಡಿಕೊಂಡುತ್ತೇವೆ, ಎಂದೆಲ್ಲ ಹೇಳಿ ಮೋಸ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಈ ಬಗ್ಗೆ ಎಚ್ಚರ ಇರಬೇಕು. ಇದರ ಮಧ್ಯೆ ಇದೀಗ ಒಂದು ದೊಡ್ಡ ಮೋಸದ ಜಾಲ ಪತ್ತೆ ಮಾಡಲಾಗಿದೆ. ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಯುವತಿಯರನ್ನು ಉದ್ಯೋಗ ನೀಡುತ್ತೇವೆ ಎಂದು ಯುವತಿಯರನ್ನು ತಿಂಗಳುಗಳ ಕಾಲ ಬಂಧಿಯಾಗಿಸಿ, ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಅನೇಕ ಬಾರಿ ಅವರ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಜಾಫರ್‌ಪುರ ಜಿಲ್ಲೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಹಲವು ಯುವತಿಯರನ್ನು ಬಂಧಿಸಿ, ಅವರ ಮೇಲೆ ಒಂದು ತಿಂಗಳುಗಳ ಕಾಲ ನಿರಂತರ ಅತ್ಯಾಚಾರ ಮಾಡಿದ್ದಾರೆ. ನಕಲಿ ಉದ್ಯೋಗ ಏಜೆಂಟ್​​​ಗಳ ಸಂಸ್ಥೆಗಳನ್ನು ನಡೆಸುತ್ತಿದ್ದ, ಒಂಬತ್ತು ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದೀಗ ಈ ಬಗ್ಗೆ ವಿಡಿಯೋ ವೈರಲ್​​ ಆಗುತ್ತಿದ್ದಂತೆ, ಈ ಒಂಬತ್ತು ಮಂದಿಯೂ ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ. ನ್ಯಾಯಾಲಯದ ನಿರ್ದೇಶನದ ನಂತರ ಪ್ರಕರಣವನ್ನು ದಾಖಲಿಸಲಾಗಿದೆ.

ಇನ್ನು ಈ ಬಗ್ಗೆ ಕಿರುಕುಳ ಅನುಭವಿಸಿದ ಒಬ್ಬ ಯುವತಿ ನ್ಯಾಯಾಲಯದ ಮುಂದೆ ದೂರು ನೀಡಿದ್ದಾಳೆ. ದೂರುದಾರರ ಹೇಳಿಕೆ ಹಾಗೂ ಈ ಜಾಲಕ್ಕೆ ಬಲಿಯಾದ ಅನೇಕರ ದೂರನ್ನು ದಾಖಲಿಸಿಕೊಂಡಿದ್ದೇವೆ. ಆರೋಪಿಗಳು ಜೂನ್ 2022ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗದ ಜಾಹೀರಾತುಗಳನ್ನು ನೀಡಿ, ಮುಜಾಫರ್‌ಪುರಕ್ಕೆ ಭೇಟಿ ನೀಡುವಂತೆ ಇದರಲ್ಲಿ ತಿಳಿಸಿದರು ಎಂದು ದೂರುದಾರು ಹೇಳಿದ್ದಾರೆ ಎಂದು ಉಪ ಎಸ್ಪಿ ವಿನಿತಾ ಸಿನ್ಹಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ನಡುರಸ್ತೆಯಲ್ಲಿ ಕಬ್ಬಿಣದ ಸಲಾಕೆಯಿಂದ 15 ಬಾರಿ ಹೊಡೆದು ಪ್ರೇಯಸಿಯ ಕೊಂದ ವ್ಯಕ್ತಿ

ದೂರುದಾರರು ತಿಳಿಸಿರುವಂತೆ ಈ ಜಾಹೀರಾತುಗಳನ್ನು ನೋಡಿ, ಮುಜಾಫರ್‌ಪುರಕ್ಕೆ ಬಂದಾಗ ಅವಳನ್ನು ಮೊದಲು ಕೋಣೆಯಲ್ಲಿ ಇರಿಸಲಾಗಿತ್ತು. ಆ ಕೋಣೆಯಲ್ಲಿ ಇನ್ನೂ ಹಲವಾರು ಯುವತಿಯರೂ ಇದ್ದರು. ಅಲ್ಲಿಂದ ಅವರನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಆ ಯುವತಿಯರಿಗೆ ಈ ಒಂಬತ್ತು ಮಂದಿ ಆರೋಪಿಗಳು ಚಿತ್ರಹಿಂಸೆ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ. ಇದರ ಜತೆಗೆ ಅವರು ಗರ್ಭಪಾತ ಮಾಡುವಂತೆ ಒತ್ತಾಯಿಸಿದ್ದಾರೆ. ಈ ದೂರುದಾರೇ ಸೇರಿ ಅನೇಕರು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದಿದ್ದಾರೆ. ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ, ಆದರೆ ಪೊಲೀಸರು ಆಕೆಯ ದೂರು ಸ್ವೀಕಾರಿಸಲು ನಿರಾಕರಿಸಿದ್ದಾರೆ, ನಂತರ ಆಕೆ ಕೋರ್ಟ್​​​ ಮೊರೆ ಹೋಗಿದ್ದಾಳೆ. ಇದೀಗ ಈ ಬಗ್ಗೆ ತನಿಖೆ ನಡೆಯುತ್ತಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ