ವಿಶ್ವದಾದ್ಯಂತ 90 ಲಕ್ಷಕ್ಕೂ ಹೆಚ್ಚು ಸೋಂಕಿತರು! ಬೀಜಿಂಗ್ನಲ್ಲಿ 26 ಹೊಸ ಕೇಸ್
ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 90 ಲಕ್ಷದ ಗಡಿ ದಾಟಿದೆ. ಅದರಲ್ಲೂ ಅಮೆರಿಕದ ಪರಿಸ್ಥಿತಿ ಸದ್ಯಕ್ಕೆ ಸುಧಾರಿಸುವ ಲಕ್ಷಣಗಳೇ ಕಾಣುತ್ತಿಲ್ಲ. ಅಮೆರಿಕದಲ್ಲಿ ನಿನ್ನೆ ಕೂಡ 26 ಸಾವಿರ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಈವರೆಗೂ ಅಮೆರಿಕದಲ್ಲಿ 23 ಲಕ್ಷದ 50 ಸಾವಿರ ಸೋಂಕಿತರು ಪತ್ತೆಯಾಗಿದ್ದಾರೆ. ರಾಜ್ಯದಲ್ಲಿ 9150 ಸೋಂಕಿತರು! ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9150ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ನಿನ್ನೆ 453 ಜನರಿಗೆ ಸೋಂಕು ದೃಢವಾಗಿದ್ದು ಕರುನಾಡನ್ನ ಬೆಚ್ಚಿಬೀಳಿಸಿದೆ. ಲಾಕ್ಡೌನ್ ಸಂದರ್ಭ ಕಂಟ್ರೋಲ್ನಲ್ಲಿದ್ದ ಸೋಂಕಿತರ ಸಂಖ್ಯೆ ಇದೀಗ ತೀವ್ರ […]
ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ 90 ಲಕ್ಷದ ಗಡಿ ದಾಟಿದೆ. ಅದರಲ್ಲೂ ಅಮೆರಿಕದ ಪರಿಸ್ಥಿತಿ ಸದ್ಯಕ್ಕೆ ಸುಧಾರಿಸುವ ಲಕ್ಷಣಗಳೇ ಕಾಣುತ್ತಿಲ್ಲ. ಅಮೆರಿಕದಲ್ಲಿ ನಿನ್ನೆ ಕೂಡ 26 ಸಾವಿರ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಈವರೆಗೂ ಅಮೆರಿಕದಲ್ಲಿ 23 ಲಕ್ಷದ 50 ಸಾವಿರ ಸೋಂಕಿತರು ಪತ್ತೆಯಾಗಿದ್ದಾರೆ.
ರಾಜ್ಯದಲ್ಲಿ 9150 ಸೋಂಕಿತರು! ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9150ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ನಿನ್ನೆ 453 ಜನರಿಗೆ ಸೋಂಕು ದೃಢವಾಗಿದ್ದು ಕರುನಾಡನ್ನ ಬೆಚ್ಚಿಬೀಳಿಸಿದೆ. ಲಾಕ್ಡೌನ್ ಸಂದರ್ಭ ಕಂಟ್ರೋಲ್ನಲ್ಲಿದ್ದ ಸೋಂಕಿತರ ಸಂಖ್ಯೆ ಇದೀಗ ತೀವ್ರ ಪ್ರಮಾಣದಲ್ಲಿ ಏರುತ್ತಿದೆ.
ರಾಜಧಾನಿ ಪರಿಸ್ಥಿತಿ ಗಂಭೀರ! ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9150ಕ್ಕೆ ಏರಿಕೆಯಾಗಿದ್ದರೆ, ನಿನ್ನೆ ಬೆಂಗಳೂರು ಒಂದರಲ್ಲೇ 196 ಕೇಸ್ಗಳು ಪತ್ತೆಯಾಗಿವೆ. ಮತ್ತೊಂದ್ಕಡೆ ಕಂಟೇನ್ಮೆಂಟ್ ಝೋನ್ಗಳ ಸಂಖ್ಯೆಯೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಚ್ಚಿಬಿದ್ದಿದೆ.
ಜಿಂದಾಲ್ ಉದ್ಯೋಗಿಗೆ ಸೋಂಕು ಕೊಪ್ಪಳದಲ್ಲಿ ಮತ್ತೊಬ್ಬ ಜಿಂದಾಲ್ ಉದ್ಯೋಗಿಗೆ ಕೊರೊನಾ ಸೋಂಕು ದೃಢವಾಗಿದೆ. ಮರಳಿಯಿಂದ ಜಿಂದಾಲ್‌ಗೆ ಬೈಕ್‌ನಲ್ಲಿ ಹೋಗಿಬರುತ್ತಿದ್ದ ಉದ್ಯೋಗಿಗೆ ಕೊರೊನಾ ದೃಢವಾಗಿರೋದು ತೀವ್ರ ಆತಂಕ ಸೃಷ್ಟಿಸಿದೆ. ಬಳ್ಳಾರಿ ಜಿಲ್ಲೆಯ ಜಿಂದಾಲ್ ಕಂಪೆನಿಯಲ್ಲಿ ಕೊರೊನಾ ಸ್ಫೋಟ ಸಂಭವಿಸಿದೆ.
4 ಲಕ್ಷಕ್ಕೂ ಹೆಚ್ಚು ಸೋಂಕಿತರು! ಭಾರತದಲ್ಲಿ ಕೊರೊನಾ ವಿಷವ್ಯೂಹ ಕ್ಷಣಕ್ಷಣಕ್ಕೂ ವೇಗ ಪಡೆಯುತ್ತಿದ್ದು, ಈಗಾಗಲೇ 4 ಲಕ್ಷ 26 ಸಾವಿರ ಮಂದಿಗೆ ಸೋಂಕು ವಕ್ಕರಿಸಿದೆ. ಅದರಲ್ಲೂ ಕಳೆದ ಕೆಲ ದಿನಗಳಿಂದ ಪ್ರತಿನಿತ್ಯ ನಿರಂತರವಾಗಿ 10 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ದೃಢವಾಗುತ್ತಿರುವುದು, ಆತಂಕ ಹೆಚ್ಚಿಸಿದೆ.
ದೆಹಲಿಯಲ್ಲಿ ಸೋಂಕಿನ ಸುನಾಮಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಲೇ ಇದ್ದು, ಸೋಂಕಿತರ ಸಂಖ್ಯೆ 56 ಸಾವಿರದ ಗಟಿ ದಾಟಿದೆ. ನಿನ್ನೆ ಒಂದೇ ದಿನ 3,630 ಜನರು ಸೋಂಕಿನ ಸುಳಿಗೆ ಸಿಲುಕಿದ್ದಾರೆ. ಒಂದು ದಿನದಲ್ಲಿ ಇಷ್ಟು ಸೋಂಕಿತರು ಪತ್ತೆಯಾಗಿದ್ದು ಇದೇ ಮೊದಲು. ಸಾವಿನ ಸಂಖ್ಯೆ 2,112ಕ್ಕೆ ಏರಿಕೆಯಾಗಿದೆ.
ಸಂಡೇ ಲಾಕ್ಡೌನ್ ಸದ್ಯಕ್ಕಿಲ್ಲ! ಕೇರಳದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಪ್ರತಿ ಭಾನುವಾರ ಲಾಕ್ಡೌನ್ ವಿಧಿಸಲಾಗಿತ್ತು. ಆದ್ರೆ, ಈ ವಾರ ಸಂಡೇ ಲಾಕ್ಡೌನ್ ಮುಂದೂಡಿಕೆ ಮಾಡಲಾಗಿದೆ. ಇದರಿಂದ ಕೊಟ್ಟಾಯಂನಲ್ಲಿ ಸಾರಿಗೆ ಸಂಚಾರ ಯಥಾಸ್ಥಿತಿಯಲ್ಲಿತ್ತು. ಖಾಸಗಿ ವಾಹನ ಸಂಚಾರ ಇರದ ಕಾರಣ, ರಸ್ತೆಗಳು ಖಾಲಿ ಖಾಲಿ ಇದ್ದದ್ದು ಕಂಡು ಬಂತು.
‘ಡ್ರ್ಯಾಗನ್’ ನಾಡಲ್ಲಿ ಮತ್ತೆ ಕೊರೊನಾ ಚೀನಾದಲ್ಲಿ ಹೊಸ ತಲೆನೋವು ಶುರುವಾಗಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂತು ಅನ್ನುವಷ್ಟರಲ್ಲೇ ಮತ್ತೆ ಸೋಂಕು ಅಬ್ಬರಿಸಲು ಶುರು ಮಾಡಿದೆ. ಚೀನಾ ರಾಜಧಾನಿ ಬೀಜಿಂಗ್ನಲ್ಲಿ 26 ಹೊಸ ಸೋಂಕಿತರು ಪತ್ತೆಯಾಗಿದ್ದು, ಹೈಅಲರ್ಟ್ ಘೋಷಿಸಲಾಗಿದೆ.
ಚೀನಾದಲ್ಲಿ ಸಂಪೂರ್ಣ ಸೂರ್ಯಗ್ರಹಣ ನಿನ್ನೆ ಭಾರತ ಸೇರಿದಂತೆ ವಿಶ್ವದ ವಿವಿಧೆಡೆ ಸಂಪೂರ್ಣ ಸೂರ್ಯಗ್ರಹಣ ಕಂಡುಬಂತು. ಇನ್ನೂ ನೆರೆ ದೇಶ ಡ್ರ್ಯಾಗನ್ ನಾಡು ಚೀನಾದಲ್ಲೂ ಸಂಪೂರ್ಣ ಸೂರ್ಯ ಗ್ರಹಣ ಕಂಡುಬಂತು. ಕೊರೊನಾ ಸಂಕಷ್ಟ ಕಾಲದಲ್ಲಿಯೇ ಗ್ರಹಣವನ್ನು ಜನ ಕಣ್ತುಂಬಿಕೊಂಡರು.
Published On - 7:58 am, Mon, 22 June 20