ಭಾರತದಲ್ಲಿ ಪ್ರೇಮ ವಿವಾಹವಾದವರಲ್ಲೇ ಜಾಸ್ತಿ ವಿಚ್ಛೇದನ: ಸುಪ್ರೀಂಕೋರ್ಟ್

|

Updated on: May 17, 2023 | 4:56 PM

ಜಸ್ಟಿಸ್ ಎಸ್ ಕೆ ಕೌಲ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು, ದಂಪತಿಗಳು ವಿವಾಹವು ಸರಿಹೊಂದುತ್ತಿಲ್ಲ, ಇಲ್ಲಿ ಭಾವನಾತ್ಮಕವಾಗಿ ಏನೂ ಇಲ್ಲದಿರುವುದಾಗಿ ಸುಪ್ರೀಕೋರ್ಟ್​​ಗೆ ಮನವರಿಕೆ ಮಾಡಬೇಕು. ಹೀಗಿದ್ದರೆ ಮಾತ್ರ ಮದುವೆಯನ್ನು ಮುಂದೆ ಕೊಂಡೊಯ್ಯಲು ಸಾಧ್ಯವಿಲ್ಲ ಎಂದು ಹೇಳಿ ವಿಚ್ಛೇದನ ನೀಡಬಹುದು.

ಭಾರತದಲ್ಲಿ ಪ್ರೇಮ ವಿವಾಹವಾದವರಲ್ಲೇ ಜಾಸ್ತಿ ವಿಚ್ಛೇದನ: ಸುಪ್ರೀಂಕೋರ್ಟ್
ಪ್ರಾತಿನಿಧಿಕ ಚಿತ್ರ
Follow us on

ಭಾರತದಲ್ಲಿ ನಡೆಯುವ ಹೆಚ್ಚಿನ ವಿಚ್ಛೇದನಗಳಿಗೆ (divorce) ಪ್ರೇಮ ವಿವಾಹಗಳೇ (Love marriage) ಪ್ರಮುಖ ಕಾರಣ ಎಂದು ಸುಪ್ರೀಂಕೋರ್ಟ್ ಹೇಳಿದೆ. ಸುಪ್ರೀಂಕೋರ್ಟ್‌ನ (Supreme Court of India) ದ್ವಿಸದಸ್ಯ ಪೀಠದ ಬಿಆರ್ ಗವಾಯಿ ಮತ್ತು ಸಂಜಯ್ ಕರೋಲ್ ವೈವಾಹಿಕ ಸಂಬಂಧದ ಅರ್ಜಿಯೊಂದರ ವಿಚಾರಣೆ ವೇಳೆ ಈ ರೀತಿ ಹೇಳಿದೆ. ಅವರದು ಪ್ರೇಮ ವಿವಾಹ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಅದಕ್ಕೆ ನ್ಯಾಯಮೂರ್ತಿ ಗವಾಯಿ ಹೆಚ್ಚಿನ ವಿಚ್ಛೇದನಗಳಿಗೆ ಪ್ರೇಮ ವಿವಾಹಗಳೇ ಕಾರಣ ಎಂದು ಹೇಳಿರುವುದಾಗಿ ಬಾರ್ & ಬೆಂಚ್ ವರದಿ ಮಾಡಿದೆ.ಅಂತಿಮವಾಗಿ ಪೀಠವು ದಂಪತಿಗಳ ನಡುವೆ ಮಧ್ಯಸ್ಥಿಕೆಗೆ ಕರೆ ನೀಡಿತು. ಈ ತಿಂಗಳ ಆರಂಭದಲ್ಲಿ ಪರಸ್ಪರ ಒಪ್ಪಿಗೆ ಇದ್ದರೇ ವಿವಾಹ ವಿಚ್ಛೇದನ ಪಡೆಯಲು ಸಂವಿಧಾನದ ಪರಿಚ್ಛೇದ 142ರ ಅಡಿಯಲ್ಲಿ ಮುರಿದುಹೋದ ವಿವಾಹಗಳನ್ನು ವಿಸರ್ಜಿಸುವ ಅಧಿಕಾರ ಇದೆ. ಆರ್ಟಿಕಲ್‌ 142ರ ಮೂಲಕ ಪರಿಸ್ಥಿತಿಗನುಗುಣವಾಗಿ ವಿಚ್ಛೇದನಕ್ಕಾಗಿ ಆರು ತಿಂಗಳ ಕಡ್ಡಾಯ ಕಾಯುವ ಅವಧಿಯನ್ನು ತೆಗೆದುಹಾಕಬಹುದು ಎಂದು ಸುಪ್ರೀಂ ಹೇಳಿತ್ತು.

ಜಸ್ಟಿಸ್ ಎಸ್ ಕೆ ಕೌಲ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು, ದಂಪತಿಗಳು ವಿವಾಹವು ಸರಿಹೊಂದುತ್ತಿಲ್ಲ, ಇಲ್ಲಿ ಭಾವನಾತ್ಮಕವಾಗಿ ಏನೂ ಇಲ್ಲದಿರುವುದಾಗಿ ಸುಪ್ರೀಕೋರ್ಟ್​​ಗೆ ಮನವರಿಕೆ ಮಾಡಬೇಕು. ಹೀಗಿದ್ದರೆ ಮಾತ್ರ ಮದುವೆಯನ್ನು ಮುಂದೆ ಕೊಂಡೊಯ್ಯಲು ಸಾಧ್ಯವಿಲ್ಲ ಎಂದು ಹೇಳಿ ವಿಚ್ಛೇದನ ನೀಡಬಹುದು.

ಇದನ್ನೂ ಓದಿ: Turbulence: ದೆಹಲಿ-ಸಿಡ್ನಿ ಏರ್​ ಇಂಡಿಯಾ ವಿಮಾನ ಹಾರಾಟದ ವೇಳೆ ಗಾಳಿಯ ದಿಢೀರ್ ಏರಿಳಿತ, ಪ್ರಯಾಣಿಕರಿಗೆ ಗಾಯ

ಮದುವೆ ಎಂಬುದು ಸರಿಪಡಿಸಲಾಗದಂತೆ ಮುರಿದುಹೋಗಿದೆ ಎಂದು ನ್ಯಾಯಾಲಯವು ಹೇಳಿತು.ಇದಕ್ಕಾಗಿ ಹಲವಾರು ಅಂಶಗಳನ್ನು ಪರಿಗಣಿಸಬೇಕು. ಮದುವೆಯ ನಂತರ ಪಕ್ಷಗಳು ಸಹಬಾಳ್ವೆ ನಡೆಸಿದ ಅವಧಿ, ಇಬ್ಬರು ಕೊನೆಯದಾಗಿ ಸಹಬಾಳ್ವೆ ನಡೆಸಿದಾಗ ಪರಸ್ಪರ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಮಾಡಿದ ಆರೋಪಗಳ ಸ್ವರೂಪ ಎಲ್ಲವನ್ನೂ ಪರಿಗಣಿಸಬೇಕಾಗುತ್ತದೆ.

ಪರಿಗಣಿಸಬೇಕಾದ ಇತರ ಅಂಶಗಳು ಕಾಲಕಾಲಕ್ಕೆ ಕಾನೂನು ಪ್ರಕ್ರಿಯೆಯಲ್ಲಿ ಹೊರಡಿಸಿದ ಆದೇಶಗಳನ್ನು ಒಳಗೊಂಡಿವೆ, ವೈಯಕ್ತಿಕ ಸಂಬಂಧದ ಮೇಲೆ ಸಂಚಿತ ಪರಿಣಾಮ, ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಅಥವಾ ಮಧ್ಯಸ್ಥಿಕೆಯ ಮೂಲಕ ವಿವಾದಗಳನ್ನು ಇತ್ಯರ್ಥಗೊಳಿಸಲು ಎಷ್ಟು ಪ್ರಯತ್ನಗಳನ್ನು ಮಾಡಲಾಗಿದೆ? ಕೊನೆಯದು ಯಾವಾಗ ಪ್ರಯತ್ನಿಸಲಾಯಿತು ಎಂಬುದನ್ನು ನ್ಯಾಯಾಲಯ ಕೇಳಿದೆ.

 

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:55 pm, Wed, 17 May 23