ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ ಆರೋಪ: ಹಾಸ್ಯ ಕಲಾವಿದ ಮುನಾವರ್ ಫರೂಖಿಗೆ ಜಾಮೀನು ನಿರಾಕರಣೆ
ಹಿಂದೂ ಧರ್ಮದ ಬಗ್ಗೆ ಅನುಚಿತ ಹೇಳಿಕೆಗಳನ್ನು ನೀಡಿದ್ದ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ಹಾಸ್ಯ ಕಲಾವಿದ (ಸ್ಟ್ಯಾಂಡ್ಅಪ್ ಕಾಮಿಡಿಯನ್) ಮುನಾವರ್ ಫರೂಖಿಗೆ ಮಧ್ಯ ಪ್ರದೇಶದ ಕೋರ್ಟ್ ಇಂದು ಜಾಮೀನು ನಿರಾಕರಿಸಿದೆ.
ಭೋಪಾಲ್: ಹಿಂದೂ ಧರ್ಮದ ಬಗ್ಗೆ ಅನುಚಿತ ಹೇಳಿಕೆಗಳನ್ನು ನೀಡಿದ್ದ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ಹಾಸ್ಯ ಕಲಾವಿದ (ಸ್ಟ್ಯಾಂಡ್ಅಪ್ ಕಾಮಿಡಿಯನ್) ಮುನಾವರ್ ಫರೂಖಿಗೆ ಮಧ್ಯ ಪ್ರದೇಶದ ಕೋರ್ಟ್ ಇಂದು ಜಾಮೀನು ನಿರಾಕರಿಸಿದೆ. ಬಿಜೆಪಿ ಶಾಸಕರೊಬ್ಬರ ಪುತ್ರ ನೀಡಿದ್ದ ದೂರಿನನ್ವಯ ಕಳೆದ ವಾರ ಮುನಾವರ್ರನ್ನು ಪೊಲೀಸರು ಬಂಧಿಸಿದ್ದರು.
ಎರಡೂ ಪಕ್ಷಗಳ ವಾದವನ್ನು ಆಲಿಸಿದ ಕೋರ್ಟ್ನ ನ್ಯಾಯಾಧೀಶ ನ್ಯಾ.ಯತೀಂದ್ರ ಕುಮಾರ್ ಗುರು ಜಾಮೀನು ನಿರಾಕರಿಸಿ ಆದೇಶ ನೀಡಿದರು. ಕಳೆದ ವಾರ ರಾಜ್ಯದ ಇಂದೋರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದೂ ದೇವತೆಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ಅನುಚಿತ ಹೇಳಿಕೆಗಳನ್ನು ನೀಡಿದ್ದ ಆರೋಪದಡಿ ಫರೂಖಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದರು.
ಹಿಂದೂ ದೇವರು ಮತ್ತು ಅಮಿತ್ ಶಾ ಬಗ್ಗೆ ಹಾಸ್ಯ ಮಾಡಿದ ಸ್ಟ್ಯಾಂಡ್ಅಪ್ ಕಲಾವಿದ ಮುನಾವರ್ ಫರೂಖಿ ಬಂಧನ