ಮುಂಬೈ: ಶೈಕ್ಷಣಿಕ ಒತ್ತಡ ತಾಳಲಾರದೇ ವಿದ್ಯಾರ್ಥಿಯೊರ್ವ 7ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಮುಂಬೈನ ಪಶ್ಚಿಮ ಮಲಾಡ್‌ನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿ ಧ್ರುವಿಲ್ ವೋರಾ(22) ಮೊದಲ ವರ್ಷದ ಎಮ್‌ಬಿಎ ವ್ಯಾಸಾಂಗ ಮಾಡುತ್ತಿದ್ದು, ಶುಕ್ರವಾರ(ಜು.26) ಸಂಜೆ 7 ಗಂಟೆ ಸುಮಾರಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಚ್‌ಪಾಡಾ ಎಂಬ ಪ್ರದೇಶದಲ್ಲಿರುವ ತಮ್ಮ ವಸತಿ ಕಟ್ಟಡ ವಾಸುದೇವಂನ 7 ನೇ ಮಹಡಿಯಿಂದ ಜಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ಶೈಕ್ಷಣಿಕ ಒತ್ತಡ ಎಂದು ಪೋಲೀಸ್ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೂ ಮುನ್ನ ಮನೆಗೆ ಬಂದು ತಾಯಿ ಮತ್ತು ಸಹೋದರಿಯೊಂದಿಗೆ ಸಾಮಾನ್ಯವಾಗಿ ಮಾತನಾಡಿದ್ದ ಧ್ರುವಿಲ್, ಬಳಿಕ ಕೆಲಸಕ್ಕಾಗಿ ಹೊರಗೆ ಹೋಗಿದ್ದ ತನ್ನ ತಂದೆಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಕೆಲ ಹೊತ್ತಿನ ನಂತರ ಸ್ಕೂಟರ್ ರಿಪೇರಿಗಾಗಿ ತೆಗೆದುಕೊಂಡು ಹೋಗುವ ನೆಪದಲಿ ಮನೆಯಿಂದ ಹೊರಟು, ಸೀದಾ ಕಟ್ಟಡದ ಏಳನೇ ಮಹಡಿಗೆ ಹೋಗಿ ಜಿಗಿದಿದ್ದಾರೆ.
ಇದನ್ನೂ ಓದಿ: ಕ್ಲಾಸ್ ರೂಮ್ನಲ್ಲೇ ನಿದ್ದೆಗೆ ಜಾರಿದ ಶಿಕ್ಷಕಿ, ಬೀಸಣಿಗೆಯಿಂದ ಗಾಳಿ ಹಾಕಿದ ಪುಟ್ಟ ಮಕ್ಕಳು: ವಿಡಿಯೋ ನೋಡಿ
ಪೋಲೀಸರು ನಡೆಸಿದ ಪ್ರಾಥಮಿಕ ತನಿಖೆಯ ಪ್ರಕಾರ ಧ್ರುವಿಲ್ ಶೈಕ್ಷಣಿಕ ಒತ್ತಡದಲ್ಲಿದ್ದರು ಎಂದು ತಿಳಿದುಬಂದಿದ್ದು,ಅವರ ಮನೆಯಲ್ಲಿ ಯಾವುದೇ ಆತ್ಮಹತ್ಯೆಯ ಪತ್ರ ಕಂಡುಬಂದಿಲ್ಲ. ಆತ್ಮಹತ್ಯೆ ಬೆಳಕಿಗೆ ಬಂದ ಕೂಡಲೇ ಧ್ರುವಿಲ್ ಕುಟುಂಬವು ಆತನನ್ನು ಪಶ್ಚಿಮ ಕಂಡಿವಲಿಯ ತುಂಗಾ ಆಸ್ಪತ್ರೆಗೆ ಒಯ್ದಿದ್ದಾರೆ, ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದು ತಿಳಿದುಬಂದಿದೆ. ಮಲಾಡ್ ಪೊಲೀಸರು ಶುಕ್ರವಾರ ಆಕಸ್ಮಿಕ ಸಾವಿನ ಎಂದು ವರದಿಯನ್ನು ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ