WFH ವೇಳೆ ಅಂಬಾನಿಯಿಂದ ಭರ್ಜರಿ ಸೇಲ್ಸ್! ಮುಂದಿನ ವಾರ ಯಾವುದು!?

|

Updated on: May 09, 2020 | 11:15 AM

ಕೊರೊನಾ ಕ್ರಿಮಿಯಿಂದಾಗಿ WFHನಲ್ಲಿ ತೊಡಗಿರುವ ಭಾರತದ ದೈತ್ಯ ಕಂಪನಿ ರಿಲಯನ್ಸ್​ನ ಮಾಲೀಕ ಮುಕೇಶ್ ಅಂಬಾನಿ ಫುಲ್ selling spreeನಲ್ಲಿದ್ದಾರೆ. ಅಂಬಾನಿ ಸೆಲ್ಲಿಂಗ್ ಸ್ಪ್ರೀ ಹೇಗಿದೆಯೆಂದ್ರೆ ಕಳೆದ 3 ವಾರಗಳಲ್ಲಿ 3 ಕಂಪನಿಗಳಿಗೆ ತಮ್ಮ ಪಾಲು ಮಾರಿ ಬರೊಬ್ಬರಿ 61 ಸಾವಿರ ಕೋಟಿ ರೂಪಾಯಿ ಕನಕವೃಷ್ಟಿ ಮಾಡಿಸಿಕೊಂಡಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತಿನ ಆರ್ಥಿಕತೆ ತತ್ತರಿಸುತ್ತಿರುವಾಗ ಏನಾದರೂ ಮಾಡುತಿರು ತಮ್ಮಾ ಎಂಬಂತೆ ಮುಕೇಶ್ ಅಂಬಾನಿ ಹೀಗೆ ಸಕ್ರಿಯವಾಗಿರುವುದು ಭಾರತದ ಆರ್ಥಿಕತೆಗೆ ಜೀವತುಂಬಿದಂತಿದೆ. ಇಷ್ಟಕ್ಕೂ ಭಾರತದಲ್ಲಿ ಅತ್ಯಗತ್ಯವಾಗಿರುವ 5G […]

WFH ವೇಳೆ ಅಂಬಾನಿಯಿಂದ ಭರ್ಜರಿ ಸೇಲ್ಸ್! ಮುಂದಿನ ವಾರ ಯಾವುದು!?
Follow us on

ಕೊರೊನಾ ಕ್ರಿಮಿಯಿಂದಾಗಿ WFHನಲ್ಲಿ ತೊಡಗಿರುವ ಭಾರತದ ದೈತ್ಯ ಕಂಪನಿ ರಿಲಯನ್ಸ್​ನ ಮಾಲೀಕ ಮುಕೇಶ್ ಅಂಬಾನಿ ಫುಲ್ selling spreeನಲ್ಲಿದ್ದಾರೆ. ಅಂಬಾನಿ ಸೆಲ್ಲಿಂಗ್ ಸ್ಪ್ರೀ ಹೇಗಿದೆಯೆಂದ್ರೆ ಕಳೆದ 3 ವಾರಗಳಲ್ಲಿ 3 ಕಂಪನಿಗಳಿಗೆ ತಮ್ಮ ಪಾಲು ಮಾರಿ ಬರೊಬ್ಬರಿ 61 ಸಾವಿರ ಕೋಟಿ ರೂಪಾಯಿ ಕನಕವೃಷ್ಟಿ ಮಾಡಿಸಿಕೊಂಡಿದ್ದಾರೆ.

ಕೊರೊನಾ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತಿನ ಆರ್ಥಿಕತೆ ತತ್ತರಿಸುತ್ತಿರುವಾಗ ಏನಾದರೂ ಮಾಡುತಿರು ತಮ್ಮಾ ಎಂಬಂತೆ ಮುಕೇಶ್ ಅಂಬಾನಿ ಹೀಗೆ ಸಕ್ರಿಯವಾಗಿರುವುದು ಭಾರತದ ಆರ್ಥಿಕತೆಗೆ ಜೀವತುಂಬಿದಂತಿದೆ.

ಇಷ್ಟಕ್ಕೂ ಭಾರತದಲ್ಲಿ ಅತ್ಯಗತ್ಯವಾಗಿರುವ 5G ತಂತ್ರಜ್ಞಾನ ಅಳವಡಿಸಲು ತಾನು ಭಾರೀ ಮೊತ್ತ ಕ್ರೋಢೀಕರಿಸುತ್ತಿರುವುದಾಗಿ ಜಿಯೋ ರಿಲಯನ್ಸ್ ಮೂಲಗಳು ಪಿಸುಗುಟ್ಟುತ್ತಿವೆ. ಈ ಮಧ್ಯೆ, ಮುಂಬೈನ ಆಂಟಿಲಾದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ ಮೇಲೆ ಭಾರೀ ಪ್ರಮಾಣದ ಸಾಲಸೋಲವಿದೆ. ಅದರಿಂದ ಹೊರಬರಲು ರಿಲಯನ್ಸ್ ಪೆಟ್ರೋಕೆಮಿಕಲ್ಸ್ ಕಂಪನಿಯ ಪಾಲು ಮಾರಾಟ ಮಾಡಲು ಅಂಬಾನಿ ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ. ಇದರೊಂದಿಗೆ ಸದ್ಯ ಸಾಲಮುಕ್ತ ಕಂಪನಿಯಾಗಿ ಮುಂದಿನ ಯೋಜನೆಗಳಿಗೆ ಕೈಹಾಕುವುದು ಕಂಪನಿಯ ಉದ್ದೇಶವಾಗಿದೆ.

ಇದರ ಸಲುವಾಗಿ ಸೌದಿ ಅರೇಬಿಯಾದ ಆರಮ್​ಕೊ (Aramco) ಕಂಪನಿಯ ಜೊತೆಯೂ ಅಂಬಾನಿಯ ರಿಲಯನ್ಸ್ ಕಂಪನಿ ಮಾತುಕತೆ ನಡೆಸಿದ್ದು, ಲಾಕ್​ ಡೌನ್​ ಮುಗಿಯುವುದರೊಳಗಾಗಿ ನಾಲ್ಕನೆಯ ಸೇಲ್ ಡೀಲ್ ಮುಗಿಸುವ ಅಂದಾಜಿದೆ. ರಿಲಯನ್ಸ್ ರೀಫೈನಿಂಗ್ ಅಂಡ್ ಪೆಟ್ರೋಕೆಮಿಕಲ್ಸ್ ಕಂಪನಿಯ ಶೇ. 20ರಷ್ಟು ಪಾಲು ಮಾರಾಟ ಮಾಡುವ ನಿರೀಕ್ಷೆಯಿದೆ. ಇದರಿಂದ 1.13 ಲಕ್ಷ ಕೋಟಿ ರೂ. ರಿಲಯನ್ಸ್ ಖಜಾನೆ ತುಂಬಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: 3 ವಾರದಲ್ಲಿ 61 ಸಾವಿರ ಕೋಟಿ ಬಾಚಿದ Jio, ಆ ಹಣದಿಂದ ಏನ್ಮಾಡುತ್ತೆ ಗೊತ್ತಾ?

Published On - 11:08 am, Sat, 9 May 20