‘ನಡೆದು ಸುಸ್ತಾಗಿತ್ತು, ನಿದ್ರೆ ಬಂದುಬಿಡ್ತು.. ಕೂಗಿಕೊಂಡ್ರೂ ಎಚ್ರವಾಗ್ಲಿಲ್ಲ ಅವರಿಗೆ, ಅಷ್ಟೇ!’

ಮಹಾರಾಷ್ಟ್ರ: ಔರಂಗಾಬಾದ್ ಜಿಲ್ಲೆಯ ತಮ್ಮ ಹಳ್ಳಿಗಳಿಗೆ ಹೊರಟಿದ್ದ ವಲಸೆ ಕಾರ್ಮಿಕರು ರೈಲಿಗೆ ಸಿಕ್ಕಿ, ದಾರುಣವಾಗಿ ಸಾವನ್ನಪ್ಪಿದ ಘಟನೆ ಇನ್ನೂ ಹಸಿಹಸಿಯಾಗಿದ್ದು, ಹೃದಯ ಕಲುಕುತ್ತಿದೆ. ಇಷ್ಟಕ್ಕೂ ಈ ಘಟನೆ ನಡೆದಿದ್ದಾದರೂ ಹೇಗೆ, ಬರೋಬ್ಬರಿ 16 ಮಂದಿ ಮೈಮರೆತಿದ್ದಾದರೂ ಹೇಗೆ? ಯಾಕೆ? ಎಂಬ ಪ್ರಶ್ನೆಗಳು ದೇಶದ ಉದ್ದಗಲಕ್ಕೂ ಎಲ್ಲರ ಮನಸ್ಸಿನಲ್ಲೂ ರೈಲಿನಷ್ಟೇ ವೇಗವಾಗಿ ಸುಳಿದಾಡುತ್ತಿದೆ. ಇದಕ್ಕೆ ಉತ್ತರವೆಂಬಂತೆ ಅಂದು ಆ ನತದೃಷ್ಟ ಕಾರ್ಮಿಕರ ಜೊತೆಯಲ್ಲೇ ಇದ್ದ ಕಾರ್ಮಿಕನೊಬ್ಬ ಆಸ್ಪತ್ರೆಯಲ್ಲಿ ಸುದ್ದಿಗಾರರಿಗೆ ಹೀಗೆ ಹೇಳಿದ್ದಾನೆ. ಆ ಕರಾಳರಾತ್ರಿಯ ದುಃಸ್ವಪ್ನವನ್ನು ನೆನಪಿಸಿಕೊಳ್ಳುತ್ತಾ ಧೀರೇಂದ್ರ […]

‘ನಡೆದು ಸುಸ್ತಾಗಿತ್ತು, ನಿದ್ರೆ ಬಂದುಬಿಡ್ತು.. ಕೂಗಿಕೊಂಡ್ರೂ ಎಚ್ರವಾಗ್ಲಿಲ್ಲ ಅವರಿಗೆ, ಅಷ್ಟೇ!’
Follow us
ಸಾಧು ಶ್ರೀನಾಥ್​
|

Updated on:May 09, 2020 | 4:11 PM

ಮಹಾರಾಷ್ಟ್ರ: ಔರಂಗಾಬಾದ್ ಜಿಲ್ಲೆಯ ತಮ್ಮ ಹಳ್ಳಿಗಳಿಗೆ ಹೊರಟಿದ್ದ ವಲಸೆ ಕಾರ್ಮಿಕರು ರೈಲಿಗೆ ಸಿಕ್ಕಿ, ದಾರುಣವಾಗಿ ಸಾವನ್ನಪ್ಪಿದ ಘಟನೆ ಇನ್ನೂ ಹಸಿಹಸಿಯಾಗಿದ್ದು, ಹೃದಯ ಕಲುಕುತ್ತಿದೆ. ಇಷ್ಟಕ್ಕೂ ಈ ಘಟನೆ ನಡೆದಿದ್ದಾದರೂ ಹೇಗೆ, ಬರೋಬ್ಬರಿ 16 ಮಂದಿ ಮೈಮರೆತಿದ್ದಾದರೂ ಹೇಗೆ? ಯಾಕೆ? ಎಂಬ ಪ್ರಶ್ನೆಗಳು ದೇಶದ ಉದ್ದಗಲಕ್ಕೂ ಎಲ್ಲರ ಮನಸ್ಸಿನಲ್ಲೂ ರೈಲಿನಷ್ಟೇ ವೇಗವಾಗಿ ಸುಳಿದಾಡುತ್ತಿದೆ. ಇದಕ್ಕೆ ಉತ್ತರವೆಂಬಂತೆ ಅಂದು ಆ ನತದೃಷ್ಟ ಕಾರ್ಮಿಕರ ಜೊತೆಯಲ್ಲೇ ಇದ್ದ ಕಾರ್ಮಿಕನೊಬ್ಬ ಆಸ್ಪತ್ರೆಯಲ್ಲಿ ಸುದ್ದಿಗಾರರಿಗೆ ಹೀಗೆ ಹೇಳಿದ್ದಾನೆ.

ಆ ಕರಾಳರಾತ್ರಿಯ ದುಃಸ್ವಪ್ನವನ್ನು ನೆನಪಿಸಿಕೊಳ್ಳುತ್ತಾ ಧೀರೇಂದ್ರ ಸಿಂಗ್ ಎಂಬ ಯುವಕ ಹೇಳಿದ್ದಿಷ್ಟು: ಜಲ್ನಾದ ಎಸ್​ಆರ್​ಜಿ ಎಂಬ ಕಂಪನಿಯಲ್ಲಿ ನಾವೆಲ್ಲ ಕೆಲಸ ಮಾಡುತ್ತಿದ್ದೆವು. ಲಾಕ್​ಡೌನ್​ನಿಂದಾಗಿ ಕೆಲಸ ನಿಂತುಹೋಯಿತು. ದುಡ್ಡಿಗೆ ಪರದಾಡುತ್ತಿದ್ದೆವು. ಹೊಟ್ಟೆಗೆ ಹಿಟ್ಟಿಲ್ಲದೆ ಪರಿತಪಿಸುತ್ತಿದ್ದೆವು. ಆಗ ಸೀದಾ ನಮ್ಮ ಹಳ್ಳಿಗಳಿಗೆ ಹೋಗುವುದು ಸರಿ ಎಂಬ ತೀರ್ಮಾನಕ್ಕೆ ಬಂದೆವು. ಗುರುವಾರ ಸಂಜೆ 7 ಗಂಟೆಗೆ ಹೆಗಲಮೇಲೆ ಬ್ಯಾಗ್​​ಗಳನ್ನು ಹಾಕಿಕೊಂಡು ನಮ್ಮ ರೂಮುಗಳನ್ನು ಬಿಟ್ಟು ಹೊರಟೆವು. ರೈಲ್ವೆ ಟ್ರ್ಯಾಕ್​ ಮೇಲೆ ನಡೆದರೆ ದಾರಿ ತಪ್ಪುವುದಿಲ್ಲ. ಹತ್ತಿರವೂ ಆಗುತ್ತದೆ ಎಂದು ರೈಲ್ವೆ ಹಳಿಗಳ ಮೇಲೆಯೇ ನಡೆಯುತ್ತಾ ಸಾಗಿದೆವು.

ಶುಕ್ರವಾರ ಬೆಳಗಿನ ಜಾವ 4 ಗಂಟೆ ಅಂದ್ಕೋತೀನಿ. ಅದೂ ಇದೂ ಮಾತಾಡ್ತಾ ಇದ್ದೆವು. ಖಾಲಿ ಹೊಟ್ಟೆಯಲ್ಲಿ ನಡೆದೂ ನಡೆದೂ ಎಲ್ಲರಿಗೂ ಸುಸ್ತಾಗಿತ್ತು. ಮಂಪರು ಹತ್ತಿತ್ತು. ಅಲ್ಲೇ ಹಳಿಗಳಿಗೆ ತಲೆಕೊಟ್ಟಿದ್ದೆವು. ಆದ್ರೆ ಹಾಗೆ ಮಾಡುವುದರಿಂದ ನಾವು ಯಮರಾಜನಿಗೆ ಆಹ್ವಾನ ನೀಡಿದ್ದೇವೆ ಎಂಬ ಸುಳಿವೇ ಇರಲಿಲ್ಲ. ತುಸು ನಿದ್ರೆಗೆ ಜಾರಿದೆವು. ಅಷ್ಟೇ!

ಟ್ರೈನ್ ಬಂದೇ ಬಿಡ್ತು. ನಾವೆಲ್ಲ ಸ್ವಲ್ಪ ದೂರ ದೂರ ಮಲಗಿಕೊಂಡಿದ್ದೆವು. ನನ್ನ ಮೂರ್ನಾಲ್ಕು ಸಂಗಾತಿಗಳು ನನಗಿಂತ ಮುಂದೆ ಮಲಗಿದ್ದರು. ನನಗ್ಯಾಕೋ ಎಚ್ಚರವಾಯ್ತು. ಕೂಗಿಕೊಂಡೆ- ಕೈ ಕಾಲು ಬಿಸಾಡಿದೆ. ಆದ್ರೆ ಸುಸ್ತಾಗಿ, ಸೋತು ಬಸವಳಿದಿದ್ದ ಅವರನ್ನು ನಿದ್ರಾದೇವಿ ಗಾಢವಾಗಿ ಆಲಂಗಿಸಿದ್ದಳು. ಇನ್ನೇನು ಟ್ರೈನು ಬಂದೇಬಿಟ್ಟಿತು ಅನ್ನುವಾಗ ನಾನು ಅಲ್ಲಿಂದ ದೂರಕ್ಕೆ ಚಿಮ್ಮಿಕೊಂಡೆ. ಅಷ್ಟೇ..

ಟ್ರೈನು ಹೊರಟುಹೋಯಿತು. ಮತ್ತೆ ಅಲ್ಲಿಗೆ ಹೋಗಿ ನೋಡಿದರೆ ನನ್ನ ಅನೇಕ ಗೆಳೆಯರು ಅದಾಗಲೇ ಇಹಲೋಕ ತ್ಯಜಿಸಿದ್ದರು. ಎದೆಬಡಿದುಕೊಂಡೆ. ಏನೂ ಉಪಯೋಗ ಇರಲಿಲ್ಲ. ನಾನೂ, ಇನ್ನಿಬ್ಬರು ಅದುಹೇಗೋ ಬದುಕಿದ್ದೆವು. ನಂತ್ರ, ಸೀದಾ ಆಸ್ಪತ್ರೆ ಸೇರಿಕೊಂಡೆವು ಎಂದು ದೀರ್ಘ ನಿಟ್ಟುಸಿರುಬಿಟ್ಟ ಧೀರೇಂದ್ರ ಸಿಂಗ್.

Published On - 1:04 pm, Sat, 9 May 20

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!