ಮುಂಬೈ: ಮುಂಬೈನಲ್ಲಿ (Mumbai Riots) 1992ರಲ್ಲಿ ನಡೆದ ಗಲಭೆಗೆ ಸಂಬಂಧಿಸಿದ ದಂಗೆ (1992 Riots) ಮತ್ತು ಕೊಲೆ ಯತ್ನ ಪ್ರಕರಣದಲ್ಲಿ 2004ರಿಂದ ತಲೆಮರೆಸಿಕೊಂಡಿದ್ದ ಆರೋಪಿ ತಬ್ರೇಜ್ ಖಾನ್ನನ್ನು ಪೊಲೀಸರು ಬಂಧಿಸಿದ್ದಾರೆ. 2004ರಲ್ಲಿ ಜಾಮೀನು ಪಡೆದಿದ್ದ 47 ವರ್ಷದ ತಬ್ರೇಜ್ ಖಾನ್ ಅದಾದ ಬಳಿಕ ನಾಪತ್ತೆಯಾಗಿದ್ದ. ಆತನನ್ನು 18 ವರ್ಷಗಳ ಬಳಿಕ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
1992ರ ಗಲಭೆಯ ಸಂದರ್ಭದಲ್ಲಿ ಕಾನೂನುಬಾಹಿರ ಸಭೆ, ಗಲಾಟೆ, ಕೊಲೆ ಯತ್ನ ಮತ್ತು ಸರ್ಕಾರಿ ನೌಕರನ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ದಿಂಡೋಶಿ ಪೊಲೀಸರು ಚಾರ್ಜ್ ಶೀಟ್ ಮಾಡಿದ 9 ಜನರಲ್ಲಿ ತಬ್ರೇಜ್ ಖಾನ್ ಕೂಡ ಒಬ್ಬನಾಗಿದ್ದ. ಆ 9 ಆರೋಪಿಗಳ ಪೈಕಿ ಇಬ್ಬರನ್ನು ಖುಲಾಸೆಗೊಳಿಸಲಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: 26/11 Mumbai Attack: ಮುಂಬೈ ದಾಳಿಯನ್ನು ಮರೆತಿಲ್ಲ, ಮರೆಯುವುದೂ ಇಲ್ಲ; ಉಗ್ರರಿಗೆ ಕೇಂದ್ರ ಸಚಿವರಿಂದ ಖಡಕ್ ಸಂದೇಶ
ತಬ್ರೇಜ್ ಖಾನ್ಗೆ ಇತರ ಆರೋಪಿಗಳೊಂದಿಗೆ ಆಗ ಜಾಮೀನು ನೀಡಲಾಯಿತು. ಆದರೆ ಆತ ಜಾಮೀನು ಪಡೆದು ಪರಾರಿಯಾಗಿದ್ದ. ಸೆಷನ್ಸ್ ನ್ಯಾಯಾಲಯವು ಆತ ತಲೆಮರೆಸಿಕೊಂಡಿದ್ದಾನೆ ಎಂದು ಘೋಷಿಸಿತ್ತು. 2014ರಲ್ಲಿ ಆತನ ವಿರುದ್ಧ ವಾರಂಟ್ ಹೊರಡಿಸಿತ್ತು ಎಂದು ದಿಂಡೋಶಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಜೀವನ್ ಖಾರತ್ ಹೇಳಿದ್ದಾರೆ.
Maharashtra | An accused identified as Tabrez Azim Khan, who has been absconding for 18 years arrested from Mumbai’s Goregaon area. He is an accused in the 1992 riots and was declared an absconder by the court in 2004: Dindoshi Police
— ANI (@ANI) December 11, 2022
ನಾವು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ. ಆತ ಈಗ 1992ರ ಗಲಭೆ ಪ್ರಕರಣದ ವಿಚಾರಣೆಯನ್ನು ಎದುರಿಸಲಿದ್ದಾನೆ ಎಂದು ಖಾರತ್ ಹೇಳಿದ್ದಾರೆ. 1992ರಲ್ಲಿ ಮುಂಬೈನಲ್ಲಿ ಕೋಮು ಗಲಭೆಗಳು ಭುಗಿಲೆದ್ದವು, ಇದರಿಂದಾಗಿ ಹಲವಾರು ಜನ ಸಾವನ್ನಪ್ಪಿದರು, ಆಸ್ತಿಪಾಸ್ತಿ ನಷ್ಟವಾಯಿತು. ಗಲಭೆಯ ನಂತರ 1993ರಲ್ಲಿ ನಗರದ ಹಲವಾರು ಭಾಗಗಳಲ್ಲಿ ಬಾಂಬ್ ಸ್ಫೋಟಗಳು ನಡೆದವು.