Anurag Thakur: ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್; ವಿಡಿಯೋ ವೈರಲ್

Anurag Thakur: ಬ್ಯಾಟ್ ಹಿಡಿದು ಕ್ರಿಕೆಟ್ ಆಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್; ವಿಡಿಯೋ ವೈರಲ್

TV9 Web
| Updated By: ಸುಷ್ಮಾ ಚಕ್ರೆ

Updated on: Dec 12, 2022 | 9:32 AM

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಿರುವ ವಿಡಿಯೋ ಟ್ವಿಟ್ಟರ್​​ನಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಾನುವಾರ ನಡೆದ ‘ಕಾಶಿ ತಮಿಳು ಸಂಗಮಂ’ (Kashi Tamil Sangamam) ಸೌಹಾರ್ದ ಪಂದ್ಯದ ವೇಳೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ಕ್ರಿಕೆಟ್ ಆಡಿದ್ದಾರೆ. ಅನುರಾಗ್ ಠಾಕೂರ್ ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಿರುವ ವಿಡಿಯೋ ಟ್ವಿಟ್ಟರ್​​ನಲ್ಲಿ ವೈರಲ್ ಆಗಿದೆ. ಈ ವೇಳೆ ಮಾತನಾಡಿದ ಅವರು, “ಕಾಶಿ (ವಾರಣಾಸಿ) ಮತ್ತು ತಮಿಳು ಸಂಗಮ್ ಸಂಸ್ಕೃತಿಗಳನ್ನು ಹೆಚ್ಚಿಸಲು ಸಹಾಯ ಮಾಡಿದೆ. ಇದು ಅನಾದಿ ಕಾಲದ ಸಂಬಂಧವಾಗಿದ್ದು, ಇದನ್ನು ಪ್ರಧಾನಿ ಮೋದಿ (PM Narendra Modi) ಪುನರುಜ್ಜೀವನಗೊಳಿಸಿದ್ದಾರೆ” ಎಂದಿದ್ದಾರೆ.