ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಿಂದ ಬುಲಾವ್, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ ದೆಹಲಿಗೆ ದೌಡು!
ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ಸುದ್ದಿಗಾರರೊಂದಿಗೆ ಮಾತಾಡಿದ ಸಿದ್ದರಾಮಯ್ಯ, ‘ಪಕ್ಷದ ಅಧ್ಯಕ್ಷರು ಕರೆದಿದ್ದಾರೆ, ಹೋಗುತ್ತಿದ್ದೇವೆ, ಯಾಕೆ ಅಂತ ಗೊತ್ತಿಲ್ಲ,’ ಎಂದಷ್ಟೇ ಹೇಳಿದರು.
ಬೆಂಗಳೂರು: ಮೊನ್ನೆಯಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಪಕ್ಷದ ಪ್ರಮುಖ ನಾಯಕರನ್ನು ಕಲಬುರಗಿಗೆ ಕರೆಸಿ ಮಾತಾಡಿದ್ದರು, ಮತ್ತು ಕರ್ನಾಟಕದಲ್ಲೂ ಹಿಮಚಲ ಪ್ರದೇಶದಂತೆ ಪಕ್ಷವನ್ನು ಗೆಲ್ಲಿಸಬೇಕೆಂದು ಹೇಳಿದ್ದರು. ರವಿವಾರದಂದು ಹೈಕಮಾಂಡ್ ನಿಂದ ಬುಲಾವ್ ಬಂದ ಕಾರಣ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ (DK Shivakumar) ಇಂದು ದೆಹಲಿಗೆ ದೌಡಾಯಿಸಿದರು. ಅವರು ಬೇರೆ ಬೇರೆ ವಿಮಾನಗಳಲ್ಲಿ ತೆರಳಿದ್ದು ವಿಶೇಷ. ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ಸುದ್ದಿಗಾರರೊಂದಿಗೆ ಮಾತಾಡಿದ ಸಿದ್ದರಾಮಯ್ಯ, ‘ಪಕ್ಷದ ಅಧ್ಯಕ್ಷರು ಕರೆದಿದ್ದಾರೆ, ಹೋಗುತ್ತಿದ್ದೇವೆ, ಯಾಕೆ ಅಂತ ಗೊತ್ತಿಲ್ಲ,’ ಎಂದಷ್ಟೇ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos