ಬೆಂಗಳೂರು: ಕೊರೊನಾ.. ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿರುವ ಕೊರೊನಾ ಭಯ ಇನ್ನೂ ಕಡಿಮೆಯಾಗಿಲ್ಲ. ಎರಡನೇ ಅಲೆಯ ಆತಂಕ ಹೆಚ್ಚಾಗಿದೆ. ಲಸಿಕೆಯ ನಿರೀಕ್ಷೆಯಲ್ಲಿ ದೇಶ ಕಾಯುತ್ತಿದೆ. ಮೂರು ತಿಂಗಳಲ್ಲಿ ಲಸಿಕೆ ನೀಡಲಾಗುತ್ತೆ ಎಂಬ ಭರವಸೆಯನ್ನು ಸರ್ಕಾರ ನೀಡಿದೆ. ಆದರೆ ಡಿಸೆಂಬರ್‌ನಲ್ಲಿ ಅಮೆರಿಕದಲ್ಲಿ ಕೊರೊನಾ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ. ಹೀಗಾಗಿ ವ್ಯಾಕ್ಸಿನ್ ಕೊಡಿಸುವ ನೆಪದಲ್ಲಿ ಅಮೆರಿಕ ಟೂರ್ ಪ್ಯಾಕೇಜ್ ನೀಡಿ ಹಣ ಮಾಡಲು ಟೂರಿಸ್ಟ್ ಸಂಸ್ಥೆಗಳು ಮುಂದಾಗಿವೆ.
ಭಾರತದಲ್ಲಿ ಕೊರೊನಾ ಲಸಿಕೆ ಸಿಗುವ ಮುನ್ನವೇ ಅಮೆರಿಕದಿಂದ ಲಸಿಕೆ ಪಡೆದು ಬೇಗ ಗುಣಮುಖರಾಗಬೇಕು ಎಂದು ಕೆಲವರು ಚಿಂತಿಸುತ್ತಿದ್ದಾರೆ. ಹೀಗಾಗಿ ಭಾರತೀಯರು ಅಮೆರಿಕಕ್ಕೆ ಹಾರಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕೆಲ ಟೂರಿಸ್ಟ್ ಸಂಸ್ಥೆಗಳು ವ್ಯಾಕ್ಸಿನ್ ಕೊಡಿಸೋ ನೆಪದಲ್ಲಿ ಜನರನ್ನು ಸೆಳೆಯಲು ಕೊವಿಡ್ ವ್ಯಾಕ್ಸಿನ್ ಟೂರಿಸಂ ಪ್ಯಾಕೇಜ್‌ನಲ್ಲಿ ಭರ್ಜರಿ ಆಫರ್ ನೀಡ್ತಿದ್ದಾರೆ.
ಕೊರೊನಾದಿಂದ ಲಾಭ ಮಾಡಿಕೊಳ್ತಿರುವ ಟೂರಿಸ್ಟ್ ಸಂಸ್ಥೆಗಳು:
ಮುಂಬೈ ಮೂಲದ ಸಂಸ್ಥೆಯೊಂದು ಕೊರೊನಾ ವ್ಯಾಕ್ಸಿನ್ ಟೂರ್ ಆಫರ್ ನೀಡಿದೆ. ಕೇವಲ 1 ಲಕ್ಷದ 50 ಸಾವಿರ ರೂಪಾಯಿ ಕೊಟ್ಟರೆ ಅಮೆರಿಕಕ್ಕೆ ಟೂರ್ ಹೋಗಬಹುದು. 4 ದಿನ 4 ಸ್ಟಾರ್ ಡಿಲಕ್ಸ್ ಹೋಟೆಲ್‌ನಲ್ಲಿರುವುದಕ್ಕೆ ವ್ಯವಸ್ಥೆ ಇರುತ್ತೆ. ಏರ್ಪೋರ್ಟ್ನಿಂದ ಟ್ರಾನ್ಸ್ಪೋರ್ಟ್ ಸೌಲಭ್ಯ. ಇವುಗಳ ಜೊತೆಗೆ ಒಂದು ಡೋಸ್ ಕೊರೊನಾ ವ್ಯಾಕ್ಸಿನ್ ಅಂತ ಒಳ್ಳೆ ಒಳ್ಳೆ ಆಕರ್ಶಕ ಆಫರ್ಗಳನ್ನು ನೀಡುತ್ತಿದ್ದಾರೆ. ಈ ವ್ಯಾಕ್ಸಿನ್ ಪಡೆಯಲು ಕಡ್ಡಾಯ ಅಮೆರಿಕ ವೀಸಾ ಇರಬೇಕು. ಇಂತಹ ಆಫರ್ ನೀಡಿ ಟೂರಿಸ್ಟ್ ಸಂಸ್ಥೆಗಳು ಬುಕಿಂಗ್‌ಗೆ ಮುಂದಾಗಿದ್ದಾರೆ.
ಈ ಪ್ಯಾಕೇಜ್ಗಳು ಎಷ್ಟು ಸೇಫ್ ?
ಇನ್ನು ಸಮಯ ಬಳಸಿಕೊಂಡು ಟೂರಿಸ್ಟ್ ಸಂಸ್ಥೆಗಳು ಹಣ ಮಾಡೋಕೆ ಮುಂದಾಗಿವೆ. ಆದರೆ ಇವು ಎಷ್ಟು ಸೇಫ್ ಅನ್ನೋದೇ ಒಂದು ಡೊಡ್ಡ ಪ್ರಶ್ನೆ. ಅಮೆರಿಕಕ್ಕೆ ಹೋದ್ರೆ ವ್ಯಾಕ್ಸಿನ್ ಲಭ್ಯದ ಬಗ್ಗೆ ಮಾಹಿತಿ ಇಲ್ಲ. ವಿದೇಶಿಗರಿಗೆ ಅಲ್ಲಿ ಲಸಿಕೆ ಲಭ್ಯದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಅಮೆರಿಕಕ್ಕೆ ಹೋದ್ರು ವ್ಯಾಕ್ಸಿನ್ ಸಿಗೋದು ಡೌಟ್ ಅಂತ ತಜ್ಞರು ಹೇಳ್ತಿದ್ದಾರೆ. ಹೀಗಾಗಿ ಸದ್ಯ ಜನರು ಗೊಂದಲಕ್ಕೆ ಈಡಾಗಿದ್ದಾರೆ.
Published On - 9:39 am, Sun, 29 November 20