AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲಸಿಕೆ ತಯಾರಿಕೆ ಬಗ್ಗೆ ಪ್ರಧಾನಿಯವರಿಗಿರುವ ಮಾಹಿತಿ ಕಂಡು ನಮಗೇ ಆಶ್ಚರ್ಯವಾಯಿತು’

ಲಸಿಕೆ ತಯಾರಿಕೆಯ ಕುರಿತು ಪ್ರಧಾನಿಯವರಿಗಿರುವ ಮಾಹಿತಿ ಕಂಡು ನಮಗೇ ಆಶ್ಚರ್ಯವಾಯಿತು ಎಂದು ಸೆರಂ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಅದಾರ್ ಪೂನಾವಾಲಾ ಹೇಳಿದರು.

‘ಲಸಿಕೆ ತಯಾರಿಕೆ ಬಗ್ಗೆ ಪ್ರಧಾನಿಯವರಿಗಿರುವ ಮಾಹಿತಿ ಕಂಡು ನಮಗೇ ಆಶ್ಚರ್ಯವಾಯಿತು’
ಕೋವಿಶೀಲ್ಡ್​ ಲಸಿಕೆ (ಎಡ); ಅದಾರ್​ ಪೂನಾವಾಲ (ಬಲ)
guruganesh bhat
|

Updated on:Nov 28, 2020 | 8:50 PM

Share

ಪುಣೆ: ಮುಂದಿನ 2 ವಾರಗಳಲ್ಲಿ ಕೋವಿಶೀಲ್ಡ್​ ಲಸಿಕೆಯ ತುರ್ತು ಬಳಕೆಗಾಗಿ ಜನರಿಗೆ ಲಭ್ಯವಾಗಲು ಅನುಮತಿ ಪಡೆಯುವ ಪ್ರಕ್ರಿಯೆಯಲ್ಲಿ ಸೆರಂ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಕಾರ್ಯೋನ್ಮುಖವಾಗಿದೆ ಎಂದು ಸಂಸ್ಥೆಯ ಸಿಇಒ ಅದಾರ್ ಪೂನಾವಾಲಾ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಬೆನ್ನಲ್ಲೇ ಪತ್ರಿಕಾಗೋಷ್ಠಿ ಕರೆದ ಪೂನಾವಾಲಾ ಈ ವಿಷಯ ತಿಳಿಸಿದರು. ಲಸಿಕೆ ತಯಾರಿಕೆಯ ಕುರಿತು ಪ್ರಧಾನಿಯವರಿಗಿರುವ ಮಾಹಿತಿ ಕಂಡು ನಮಗೇ ಆಶ್ಚರ್ಯವಾಯಿತು. ಕೇಂದ್ರ ಸರ್ಕಾರ ಎಷ್ಟು ಲಸಿಕೆಗಳನ್ನು ಖರೀದಿಸಲಿದೆ ಎಂಬ ಮಾಹಿತಿ ಅಧಿಕೃತವಾಗಿ ದೊರೆತಿಲ್ಲ. ಆದರೆ, 2021ರ ಜುಲೈ ಹೊತ್ತಿಗೆ 300ರಿಂದ 400ಮಿಲಿಯನ್ ಡೋಸೇಜ್​​​ಗಳನ್ನು ಕೇಂದ್ರ ಸರ್ಕಾರ ಖರೀದಿಸಬಹುದು ಎಂದು ಅದಾರ್​ ತಿಳಿಸಿದರು.

‘ದೇಶದ ಜನರಿಗೆ ಮೊದಲ ಆದ್ಯತೆ’ ಲಸಿಕೆಯನ್ನು ಮೊದಲು ದೇಶದ ಜನತೆಗಾಗಿ ಬಳಸಲಾಗುವುದು. ನಂತರ, ಆಫ್ರಿಕಾದ ದೇಶಗಳಿಗೆ ವಿತರಿಸಲಾಗುವುದು. ಅಮೆರಿಕ ಮತ್ತು ಯೂರೋಪ್​ನ ದೇಶಗಳಿಗೆ ಆಸ್ಟ್ರಾಜೆನೆಕಾ ಮತ್ತು ಆಕ್ಸ್​ಫರ್ಡ್ ವಿವಿಯ ಲಸಿಕೆ ಲಭಿಸಲಿದೆ. ಪುಣೆ ಮತ್ತು ಮಾಂಡ್ರಿಯಲ್ಲಿ ಅತ್ಯಾಧುನಿಕ ಸಾಂಕ್ರಾಮಿಕ ಪಿಡುಗು ನಿರ್ವಹಣಾ ಕೇಂದ್ರವನ್ನು ನಿರ್ಮಿಸಲಾಗಿದೆ. ಈ ಕುರಿತು ಪ್ರಧಾನಿಯವರಿಗೆ ವಿವರಿಸಿದ್ದೇವೆ ಎಂದು ಅವರು ತಿಳಿಸಿದರು.

Published On - 8:36 pm, Sat, 28 November 20

ಚೂಪಾದ ಮುಳ್ಳುಗಳ ರಾಶಿ ಮೇಲೆ ನೃತ್ಯ; ತಮಿಳುನಾಡಿನಲ್ಲೊಂದು ವಿಶಿಷ್ಟ ಪದ್ಧತಿ
ಚೂಪಾದ ಮುಳ್ಳುಗಳ ರಾಶಿ ಮೇಲೆ ನೃತ್ಯ; ತಮಿಳುನಾಡಿನಲ್ಲೊಂದು ವಿಶಿಷ್ಟ ಪದ್ಧತಿ
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?