AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಸಿಕೆಗಾಗಿ ಅಮೆರಿಕ ಮೊರೆ ಹೋಗಲು ಮುಂದಾದ ಜನ, ಟೂರಿಸ್ಟ್‌ ಸಂಸ್ಥೆಗಳಿಂದ ಪ್ಯಾಕೇಜ್.. ಇದೆಷ್ಟು ಸೇಫ್

ಕೊರೊನಾ ಹೆಮ್ಮಾರಿ ಅಟ್ಟಹಾಸಕ್ಕೆ ಇಡೀ ವಿಶ್ವವೇ ತತ್ತರಿಸುತ್ತಿದೆ. ಕೊರೊನಾಗೆ ಬೆಚ್ಚಿಬಿದ್ದ ಜನ ಲಸಿಕೆಗಾಗಿ ಅಮೆರಿಕ ಮೊರೆ ಹೋಗ್ತಿದ್ದಾರೆ. ಮುಂಬೈ ಮೂಲದ ಸಂಸ್ಥೆಯೊಂದು ಕೊರೊನಾ ವ್ಯಾಕ್ಸಿನ್ ಟೂರ್ ಆಫರ್ ನೀಡ್ತಿದೆ.

ಲಸಿಕೆಗಾಗಿ ಅಮೆರಿಕ ಮೊರೆ ಹೋಗಲು ಮುಂದಾದ ಜನ, ಟೂರಿಸ್ಟ್‌ ಸಂಸ್ಥೆಗಳಿಂದ ಪ್ಯಾಕೇಜ್.. ಇದೆಷ್ಟು ಸೇಫ್
ಕೊರೊನಾ ವ್ಯಾಕ್ಸಿನ್
ಆಯೇಷಾ ಬಾನು
|

Updated on:Nov 29, 2020 | 9:40 AM

Share

ಬೆಂಗಳೂರು: ಕೊರೊನಾ.. ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿರುವ ಕೊರೊನಾ ಭಯ ಇನ್ನೂ ಕಡಿಮೆಯಾಗಿಲ್ಲ. ಎರಡನೇ ಅಲೆಯ ಆತಂಕ ಹೆಚ್ಚಾಗಿದೆ. ಲಸಿಕೆಯ ನಿರೀಕ್ಷೆಯಲ್ಲಿ ದೇಶ ಕಾಯುತ್ತಿದೆ. ಮೂರು ತಿಂಗಳಲ್ಲಿ ಲಸಿಕೆ ನೀಡಲಾಗುತ್ತೆ ಎಂಬ ಭರವಸೆಯನ್ನು ಸರ್ಕಾರ ನೀಡಿದೆ. ಆದರೆ ಡಿಸೆಂಬರ್‌ನಲ್ಲಿ ಅಮೆರಿಕದಲ್ಲಿ ಕೊರೊನಾ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ. ಹೀಗಾಗಿ ವ್ಯಾಕ್ಸಿನ್ ಕೊಡಿಸುವ ನೆಪದಲ್ಲಿ ಅಮೆರಿಕ ಟೂರ್‌ ಪ್ಯಾಕೇಜ್ ನೀಡಿ ಹಣ ಮಾಡಲು ಟೂರಿಸ್ಟ್‌ ಸಂಸ್ಥೆಗಳು ಮುಂದಾಗಿವೆ.

ಭಾರತದಲ್ಲಿ ಕೊರೊನಾ ಲಸಿಕೆ ಸಿಗುವ ಮುನ್ನವೇ ಅಮೆರಿಕದಿಂದ ಲಸಿಕೆ ಪಡೆದು ಬೇಗ ಗುಣಮುಖರಾಗಬೇಕು ಎಂದು ಕೆಲವರು ಚಿಂತಿಸುತ್ತಿದ್ದಾರೆ. ಹೀಗಾಗಿ ಭಾರತೀಯರು ಅಮೆರಿಕಕ್ಕೆ ಹಾರಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕೆಲ ಟೂರಿಸ್ಟ್‌ ಸಂಸ್ಥೆಗಳು ವ್ಯಾಕ್ಸಿನ್ ಕೊಡಿಸೋ ನೆಪದಲ್ಲಿ ಜನರನ್ನು ಸೆಳೆಯಲು ಕೊವಿಡ್ ವ್ಯಾಕ್ಸಿನ್ ಟೂರಿಸಂ ‌ಪ್ಯಾಕೇಜ್‌ನಲ್ಲಿ ಭರ್ಜರಿ ಆಫರ್ ನೀಡ್ತಿದ್ದಾರೆ.

ಕೊರೊನಾದಿಂದ ಲಾಭ ಮಾಡಿಕೊಳ್ತಿರುವ ಟೂರಿಸ್ಟ್ ಸಂಸ್ಥೆಗಳು: ಮುಂಬೈ ಮೂಲದ ಸಂಸ್ಥೆಯೊಂದು ಕೊರೊನಾ ವ್ಯಾಕ್ಸಿನ್ ಟೂರ್ ಆಫರ್ ನೀಡಿದೆ. ಕೇವಲ 1 ಲಕ್ಷದ 50 ಸಾವಿರ ರೂಪಾಯಿ ಕೊಟ್ಟರೆ ಅಮೆರಿಕಕ್ಕೆ ಟೂರ್ ಹೋಗಬಹುದು. 4 ದಿನ 4 ಸ್ಟಾರ್ ಡಿಲಕ್ಸ್ ಹೋಟೆಲ್‌ನಲ್ಲಿರುವುದಕ್ಕೆ ವ್ಯವಸ್ಥೆ ಇರುತ್ತೆ. ಏರ್​ಪೋರ್ಟ್​​​ನಿಂದ ಟ್ರಾನ್ಸ್​​ಪೋರ್ಟ್ ಸೌಲಭ್ಯ. ಇವುಗಳ ಜೊತೆಗೆ ಒಂದು ಡೋಸ್ ಕೊರೊನಾ ವ್ಯಾಕ್ಸಿನ್ ಅಂತ ಒಳ್ಳೆ ಒಳ್ಳೆ ಆಕರ್ಶಕ ಆಫರ್​ಗಳನ್ನು ನೀಡುತ್ತಿದ್ದಾರೆ. ಈ ವ್ಯಾಕ್ಸಿನ್ ಪಡೆಯಲು ಕಡ್ಡಾಯ ಅಮೆರಿಕ ವೀಸಾ ಇರಬೇಕು. ಇಂತಹ ಆಫರ್‌ ನೀಡಿ ಟೂರಿಸ್ಟ್ ಸಂಸ್ಥೆಗಳು ಬುಕಿಂಗ್‌ಗೆ ಮುಂದಾಗಿದ್ದಾರೆ.

ಈ‌ ಪ್ಯಾಕೇಜ್​ಗಳು ಎಷ್ಟು ಸೇಫ್ ? ಇನ್ನು ಸಮಯ ಬಳಸಿಕೊಂಡು ಟೂರಿಸ್ಟ್ ಸಂಸ್ಥೆಗಳು ಹಣ ಮಾಡೋಕೆ ಮುಂದಾಗಿವೆ. ಆದರೆ ಇವು ಎಷ್ಟು ಸೇಫ್ ಅನ್ನೋದೇ ಒಂದು ಡೊಡ್ಡ ಪ್ರಶ್ನೆ. ಅಮೆರಿಕಕ್ಕೆ ಹೋದ್ರೆ ವ್ಯಾಕ್ಸಿನ್ ಲಭ್ಯದ ಬಗ್ಗೆ ಮಾಹಿತಿ ಇಲ್ಲ. ವಿದೇಶಿಗರಿಗೆ ಅಲ್ಲಿ ಲಸಿಕೆ ಲಭ್ಯದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಅಮೆರಿಕಕ್ಕೆ ಹೋದ್ರು ವ್ಯಾಕ್ಸಿನ್ ಸಿಗೋದು ಡೌಟ್ ಅಂತ ತಜ್ಞರು ಹೇಳ್ತಿದ್ದಾರೆ. ಹೀಗಾಗಿ ಸದ್ಯ ಜನರು ಗೊಂದಲಕ್ಕೆ ಈಡಾಗಿದ್ದಾರೆ.

Published On - 9:39 am, Sun, 29 November 20

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?