ಮುಂಬೈ ಬಿಎಂಡಬ್ಲ್ಯು ಅಪಘಾತ ಪ್ರಕರಣ: ಶಿವಸೇನಾ ನಾಯಕ ರಾಜೇಶ್ ಶಾಗೆ ಜಾಮೀನು

|

Updated on: Jul 08, 2024 | 7:41 PM

ಈ ಹಿಂದೆ ಇದೇ ನ್ಯಾಯಾಲಯವು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಕೂಡಲೇ ಆರೋಪಿಯ ತಂದೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅವರ ಚಾಲಕ ರಾಜರುಷಿ ಬಿಡಾವತ್ ಅವರನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಮಹಿಳೆಯ ಸಾವಿಗೆ ಕಾರಣವಾದ ಅಪಘಾತ ಪ್ರಕರಣದಲ್ಲಿ ಮಿಹಿರ್ ಶಾಗೆ ಸ್ಥಳದಿಂದ ಓಡಿಹೋಗಲು ಸಹಾಯ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಯಿತು.

ಮುಂಬೈ ಬಿಎಂಡಬ್ಲ್ಯು ಅಪಘಾತ ಪ್ರಕರಣ: ಶಿವಸೇನಾ ನಾಯಕ ರಾಜೇಶ್ ಶಾಗೆ ಜಾಮೀನು
ಅಪಘಾತಕ್ಕೀಡಾದ ಕಾರು
Follow us on

ಮುಂಬೈ 08: ಮುಂಬೈನ (Mumbai) ವರ್ಲಿಯಲ್ಲಿ ಭಾನುವಾರ ಮುಂಜಾನೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು 45 ವರ್ಷದ ಮಹಿಳೆಯ ಸಾವಿಗೆ ಕಾರಣವಾದ ಬಿಎಂಡಬ್ಲ್ಯು ಕಾರು ಹಿಟ್ ಆಂಡ್ ರನ್ (BMW Hit&Run Case) ಪ್ರಕರಣದಲ್ಲಿ ದಾದರ್ ಸೆವ್ರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿ ಮಿಹಿರ್ ಶಾ (Mihir Shah) ಅವರ ಅಪ್ಪ ಶಿವಸೇನಾ ನಾಯಕ ರಾಜೇಶ್ ಶಾ(Rajesh Shah) ಅವರಿಗೆ ₹15,000 ನಗದು ಪಾವತಿಸಿ ತಾತ್ಕಾಲಿಕ  ಜಾಮೀನು ಮಂಜೂರು ಮಾಡಿದೆ ಎಂದು ಎಎನ್‌ಐ ವರದಿ ಮಾಡಿದೆ.

ಈ ಹಿಂದೆ ಇದೇ ನ್ಯಾಯಾಲಯವು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಕೂಡಲೇ ಆರೋಪಿಯ ತಂದೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅವರ ಚಾಲಕ ರಾಜರುಷಿ ಬಿಡಾವತ್ ಅವರನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಮಹಿಳೆಯ ಸಾವಿಗೆ ಕಾರಣವಾದ ಅಪಘಾತ ಪ್ರಕರಣದಲ್ಲಿ ಮಿಹಿರ್ ಶಾಗೆ ಸ್ಥಳದಿಂದ ಓಡಿಹೋಗಲು ಸಹಾಯ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಯಿತು.

ಮುಂಬೈನ ವರ್ಲಿ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಬಿಎಂಡಬ್ಲ್ಯು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಅದರಲ್ಲಿ ಸಂಚರಿಸುತ್ತಿದ್ದ ಮಹಿಳೆ ಸಾವಿಗೀಡಾಗಿದ್ದು, ಅವರ ಪತಿಗೆ ಗಾಯಗಳಾಗಿತ್ತು. ಶಿವಸೇನಾ ನಾಯಕರೊಬ್ಬರ ಪುತ್ರ ಮಿಹಿರ್ ಶಾ ಈ ಕಾರನ್ನು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಶಾ ಮತ್ತು ಬಿಡಾವತ್ ಅವರು ಮರೈನ್ ಡ್ರೈವ್‌ನಲ್ಲಿ ಲಾಂಗ್ ಡ್ರೈವ್‌ನಿಂದ ಮನೆಗೆ ಮರಳುತ್ತಿದ್ದರು.
ಮಹಿಳೆಯೊಬ್ಬರ ಸಾವಿಗೆ ಕಾರಣವಾದ ಹಿಟ್ ಅಂಡ್ ರನ್ ಪ್ರಕರಣದ ಆರೋಪಿ ಮಿಹಿರ್ ಶಾ ಅವರ ತಂದೆ ರಾಜೇಶ್ ಶಾ ಅಪಘಾತದ ನಂತರ ತನ್ನ 24 ವರ್ಷದ ಮಗನಿಗೆ ಹಲವು ಬಾರಿ ಕರೆ ಮಾಡಿದ್ದಾರೆ ಎಂದು ವರ್ಲಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಘಟನೆಗೂ ಮುನ್ನ ಮಿಹಿರ್ ಸ್ನೇಹಿತರೊಂದಿಗೆ ಜುಹುವಿನ ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ. ರಾತ್ರಿ ಆತನ ಜೊತೆಗಿದ್ದ ಮೂವರು ಸ್ನೇಹಿತರ ಹೇಳಿಕೆಯನ್ನು ಪೊಲೀಸರು ತೆಗೆದುಕೊಂಡಿದ್ದಾರೆ.

ವರ್ಲಿಯ ಡಾ. ಅನ್ನಿ ಬೆಸೆಂಟ್ ರಸ್ತೆಯಲ್ಲಿ ಮಿಹಿರ್ ಶಾ ಅವರು ಚಲಾಯಿಸುತ್ತಿದ್ದ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ನಂತರ ತಲೆಮರೆಸಿಕೊಂಡಿರುವ ಮಿಹಿರ್ ಶಾ ಅವರನ್ನು ಪತ್ತೆ ಮಾಡಲು ಮುಂಬೈ ಪೊಲೀಸರು 14 ತಂಡಗಳನ್ನು ರಚಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಮಿಹಿರ್‌ಗಾಗಿ ಲುಕೌಟ್ ನೋಟಿಸ್ ಜಾರಿ ಮಾಡಲಾಗಿದೆ.

ಇದನ್ನೂ ಓದಿ: Modi Russia Visit: 2 ದಿನಗಳ ರಷ್ಯಾ ಪ್ರವಾಸಕ್ಕಾಗಿ ಮಾಸ್ಕೋ ತಲುಪಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ 

45 ವರ್ಷದ ಕಾವೇರಿ ನಖ್ವಾ ಅವರು ತಮ್ಮ ಪತಿ ಪ್ರದೀಪ್ ಅವರೊಂದಿಗೆ ಅನ್ನಿ ಬೆಸೆಂಟ್ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಐಷಾರಾಮಿ ಕಾರೊಂದು ಮುಂಜಾನೆ 5:30 ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಗುದ್ದಿದೆ. ಕಾವೇರಿ ರಸ್ತೆಗೆ ಬಿದ್ದಿದ್ದು, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ. ಆಕೆಯ ಪತಿಗೆ ಚಿಕಿತ್ಸೆ ನೀಡಿ ನಂತರ ಬಿಡುಗಡೆ ಮಾಡಲಾಗಿದೆ ಎಂದು ವರ್ಲಿ ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:39 pm, Mon, 8 July 24