ಮೋದಿ ಮಣಿಪುರಕ್ಕೆ ಬರಬೇಕಿತ್ತು: ಜನಾಂಗೀಯ ಹಿಂಸಾಚಾರ ಸಂತ್ರಸ್ತರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ

ಸಮಸ್ಯೆ ಪ್ರಾರಂಭವಾದಾಗಿನಿಂದ ನಾನು ಇಲ್ಲಿಗೆ ಮೂರನೇ ಬಾರಿಗೆ ಬಂದಿದ್ದೇನೆ. ಇದು ಒಂದು ದೊಡ್ಡ ದುರಂತವಾಗಿದೆ. ನಾನು ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಯನ್ನು ನಿರೀಕ್ಷಿಸಿದ್ದೆ ಆದರೆ ಅದನ್ನು ನೋಡಿ ನಾನು ನಿರಾಶೆಗೊಂಡಿದ್ದೇನೆ. ಪರಿಸ್ಥಿತಿ ಇನ್ನೂ ಸುಧಾರಿಸಬೇಕಿದೆ. ಪ್ರಧಾನಿಯವರು ತಮ್ಮ ಸಮಯದಿಂದ 1-2 ದಿನ ಬಿಡುವು ಮಾಡಿಮಣಿಪುರದ ಜನರ ಮಾತುಗಳನ್ನು ಆಲಿಸಬೇಕೆಂದು ನಾನು ವಿನಂತಿಸುತ್ತೇನೆ. ಇದು ಮಣಿಪುರದ ಜನರಿಗೆ ಸಾಂತ್ವನ ನೀಡಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಮೋದಿ ಮಣಿಪುರಕ್ಕೆ ಬರಬೇಕಿತ್ತು: ಜನಾಂಗೀಯ ಹಿಂಸಾಚಾರ ಸಂತ್ರಸ್ತರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Follow us
|

Updated on: Jul 08, 2024 | 8:42 PM

ದೆಹಲಿ ಜುಲೈ 08: ಕಳೆದ ವರ್ಷ ನಡೆದ ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರಕ್ಕೆ (Manipur) ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ನೀಡಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಸೋಮವಾರ ಹೇಳಿದ್ದಾರೆ. ಪ್ರಧಾನಿ ಇಲ್ಲಿಗೆ ಬರುವುದು, ಮಣಿಪುರದ ಜನರ ಮಾತನ್ನು ಆಲಿಸುವುದು, ಮಣಿಪುರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಅಷ್ಟಕ್ಕೂ ಮಣಿಪುರ ಭಾರತ ಒಕ್ಕೂಟದ ಹೆಮ್ಮೆಯ ರಾಜ್ಯ.ಯಾವುದೇ ದುರಂತ ಸಂಭವಿಸದಿದ್ದರೂ ಪ್ರಧಾನಿ ಮಣಿಪುರಕ್ಕೆ ಬರಬೇಕಿತ್ತು ಎಂದು ಇಂಫಾಲದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಧಾನಿಯವರು ತಮ್ಮ ಸಮಯದಿಂದ 1-2 ದಿನ ಬಿಡುವು ಮಾಡಿಮಣಿಪುರದ ಜನರ ಮಾತುಗಳನ್ನು ಆಲಿಸಬೇಕೆಂದು ನಾನು ವಿನಂತಿಸುತ್ತೇನೆ. ಇದು ಮಣಿಪುರದ ಜನರಿಗೆ ಸಾಂತ್ವನ ನೀಡಲಿದೆ. ನಾವು, ಕಾಂಗ್ರೆಸ್ ಪಕ್ಷವಾಗಿ, ಇಲ್ಲಿನ ಪರಿಸ್ಥಿತಿಯನ್ನು ಸುಧಾರಿಸುವ ಯಾವುದೇ ಸಂಗತಿಯನ್ನು ಬೆಂಬಲಿಸಲು ಸಿದ್ಧರಿದ್ದೇವೆ ”ಎಂದು ಈಶಾನ್ಯ ರಾಜ್ಯದ ಪರಿಹಾರ ಶಿಬಿರಗಳಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿದ ರಾಹುಲ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಕಲಹ ಪೀಡಿತ ರಾಜ್ಯಕ್ಕೆ ತಮ್ಮ ಭೇಟಿಯನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ, “ಸಮಸ್ಯೆ ಪ್ರಾರಂಭವಾದಾಗಿನಿಂದ ನಾನು ಇಲ್ಲಿಗೆ ಮೂರನೇ ಬಾರಿಗೆ ಬಂದಿದ್ದೇನೆ. ಇದು ಒಂದು ದೊಡ್ಡ ದುರಂತವಾಗಿದೆ. ನಾನು ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಯನ್ನು ನಿರೀಕ್ಷಿಸಿದ್ದೆ ಆದರೆ ಅದನ್ನು ನೋಡಿ ನಾನು ನಿರಾಶೆಗೊಂಡಿದ್ದೇನೆ. ಪರಿಸ್ಥಿತಿ ಇನ್ನೂ ಸುಧಾರಿಸಬೇಕಿದೆ.

ನಾನು ಶಿಬಿರಗಳಿಗೆ ಭೇಟಿ ನೀಡಿದ್ದೇನೆ, ಅಲ್ಲಿನ ಜನರನ್ನು ಕೇಳಿದೆ, ಅವರ ನೋವನ್ನು ಕೇಳಿದೆ. ನಾನು ಅವರ ಮಾತುಗಳನ್ನು ಕೇಳಲು, ಅವರಲ್ಲಿ ವಿಶ್ವಾಸ ಮೂಡಿಸಲು ಮತ್ತು ವಿರೋಧ ಪಕ್ಷದಲ್ಲಿರುವವನಾಗಿ, ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಲು ಮತ್ತು ಅದು ಕಾರ್ಯನಿರ್ವಹಿಸುವಂತೆ ಮಾಡಲು ಇಲ್ಲಿಗೆ ಬಂದಿದ್ದೇನೆ. ಇಲ್ಲಿ ಶಾಂತಿಯೇ ಇಂದಿನ ಅಗತ್ಯ. ಹಿಂಸಾಚಾರವು ಎಲ್ಲರಿಗೂ ನೋವುಂಟು ಮಾಡುತ್ತಿದೆ ಎಂದು ಕಾಂಗ್ರೆಸ್ ಸಂಸದರು ಹೇಳಿದ್ದಾರೆ.

“ಸಾವಿರಾರು ಕುಟುಂಬಗಳಿಗೆ ಹಾನಿಯಾಗಿದೆ, ಆಸ್ತಿಪಾಸ್ತಿಗಳು ನಾಶವಾಗಿವೆ. ಕುಟುಂಬದ ಸದಸ್ಯರನ್ನು ಕೊಲ್ಲಲಾಗಿದೆ. ಇಲ್ಲಿ ಏನು ನಡೆಯುತ್ತಿದೆ ಎಂದು ನಾನು ಭಾರತದಲ್ಲಿ ಎಲ್ಲಿಯೂ ನೋಡಿಲ್ಲ. ರಾಜ್ಯವು ಸಂಪೂರ್ಣವಾಗಿ ಎರಡು ಭಾಗವಾಗಿದೆ. ಇದು ಭಾಗಿಯಾಗಿರುವ ಪ್ರತಿಯೊಬ್ಬರ ದುರಂತವಾಗಿದೆ. ನಾನು ಮಣಿಪುರದ ಎಲ್ಲಾ ಜನರಿಗೆ ಹೇಳಲು ಬಯಸುವುದೇನೆಂದರೆ ನಾನು ನಿಮ್ಮ ಸಹೋದರನಾಗಿ ಇಲ್ಲಿಗೆ ಬಂದಿದ್ದೇನೆ, ನಿಮಗೆ ಸಹಾಯ ಮಾಡಲು ಬಯಸುವ, ಮಣಿಪುರದಲ್ಲಿ ಶಾಂತಿಯನ್ನು ಮರಳಿ ತರಲು ನಿಮ್ಮೊಂದಿಗೆ ಕೆಲಸ ಮಾಡಲು ಬಯಸುವವನಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.

ಇದನ್ನೂ ಓದಿ: ಹಿಂದೂಗಳ ಬಗ್ಗೆ ಹೇಳಿಕೆ; ರಾಹುಲ್ ಗಾಂಧಿಗೆ ಸ್ವಾಮಿ ಅವಿಮುಕ್ತೇಶ್ವರಾನಂದ ಬೆಂಬಲ

ಕಳೆದ ವರ್ಷ ಮೇ 3 ರಂದು ಮಣಿಪುರದಲ್ಲಿ ಮೈತಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬೇಡಿಕೆಯನ್ನು ವಿರೋಧಿಸಿ ಆಲ್ ಟ್ರೈಬಲ್ಸ್ ಸ್ಟೂಡೆಂಟ್ಸ್ ಯೂನಿಯನ್ (ಎಟಿಎಸ್‌ಯು) ಆಯೋಜಿಸಿದ್ದ ರ್ಯಾಲಿಯಲ್ಲಿ ಘರ್ಷಣೆಯ ನಂತರ ಹಿಂಸಾಚಾರ ಭುಗಿಲೆದ್ದಿತು.

ಸಂಸತ್ತಿನಲ್ಲಿ ಮಣಿಪುರದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

ಕಳೆದ ವಾರ ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರದಲ್ಲಿ ಹಿಂಸಾಚಾರದ ನಿದರ್ಶನಗಳು ಕಡಿಮೆಯಾಗಿವೆ ಎಂದು ಹೇಳಿದ್ದರು. ರಾಜ್ಯದಲ್ಲಿ ಶಾಲೆಗಳು, ಕಚೇರಿಗಳು ಮತ್ತು ಸಂಸ್ಥೆಗಳು ಪುನರಾರಂಭಗೊಂಡಿರುವುದು ಸಹಜ ಸ್ಥಿತಿಗೆ ಮರಳುತ್ತಿರುವ ಸಂಕೇತವಾಗಿದೆ ಎಂದು ಅವರು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ