ನವೀನ್ ಪಟ್ನಾಯಕ್​​​ನ್ನು ವೇದಿಕೆಗೆ ಕರೆದೊಯ್ದ ಧರ್ಮೇಂದ್ರ ಪ್ರಧಾನ್; ಪ್ರಜಾಪ್ರಭುತ್ವದ ಸೊಬಗು ಅಂದ್ರೆ ಇದೇ

ಮಾಜಿ ಸಿಎಂ ನವೀನ್ ಪಟ್ನಾಯಕ್ ಅವರು ರಾಷ್ಟ್ರಪತಿಗಳನ್ನು ಕಂಡ ಕೂಡಲೇ ವೇದಿಕೆ ಬಳಿ ತೆರಳಿ ನಮಸ್ಕರಿಸಿದ್ದಾರೆ. ಆಗ ವೇದಿಕೆಯಲ್ಲಿ ಕುಳಿತಿದ್ದ ಕ್ಯಾಬಿನೆಟ್ ಸಚಿವ ಧರ್ಮೇಂದ್ರ ಪ್ರಧಾನ್, ತಕ್ಷಣವೇ ಕೆಳಗಿಳಿದು, ಪಟ್ನಾಯಕ್ ಅವರ ಕೈ ಹಿಡಿದು, ವೇದಿಕೆಯ ಮೇಲೆ ಕರೆದುಕೊಂಡು ಬಂದು ತಮ್ಮ ಕುರ್ಚಿ ಬಳಿ ಕೂರಿಸಿ ಗೌರವ ತೋರಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ನವೀನ್ ಪಟ್ನಾಯಕ್​​​ನ್ನು ವೇದಿಕೆಗೆ ಕರೆದೊಯ್ದ ಧರ್ಮೇಂದ್ರ ಪ್ರಧಾನ್; ಪ್ರಜಾಪ್ರಭುತ್ವದ ಸೊಬಗು ಅಂದ್ರೆ ಇದೇ
ಧರ್ಮೇಂದ್ರ ಪ್ರಧಾನ್- ನವೀನ್ ಪಟ್ನಾಯಕ್
Follow us
|

Updated on: Jul 08, 2024 | 9:34 PM

ದೆಹಲಿ ಜುಲೈ08:ಅಧಿಕಾರ ಮತ್ತು ಸೈದ್ಧಾಂತಿಕ  ರಾಜಕೀಯದಲ್ಲಿ ಇದ್ದದ್ದೇ. ಆದರೆ ವಿವಿಧ ಪಕ್ಷಗಳ ರಾಜಕಾರಣಿಗಳು ಪರಸ್ಪರ ಗೌರವಿಸುವುದು ಇದೆಯಲ್ಲಾ ಪ್ರಜಾಪ್ರಭುತ್ವದ ಸೊಬಗು ಅಂದರೆ ಅದೇ. ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಜಗನ್ನಾಥ ರಥಯಾತ್ರೆಗಾಗಿ ಭಾನುವಾರ ಪುರಿ ತಲುಪಿದ್ದು, ಈ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಪಡಿಸಲಾಗಿತ್ತು. ರಾಜಕೀಯ ನಾಯಕರು, ಅತಿಥಿಗಳು ವೇದಿಕೆ ಮೇಲೆ ಇದ್ದರು. ಇದೇ ವೇಳೆ ಒಡಿಶಾದ (Odisha) ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ (Naveen Patnaik) ವೇದಿಕೆಯ ಬಳಿ ಆಗಮಿಸಿ ವೇದಿಕೆ ಮೇಲಿದ್ದವರಿಗೆ ಶುಭಾಶಯ ಕೋರಿದ್ದಾರೆ. ಇದನ್ನು ಕಂಡ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ವೇದಿಕೆಯಿಂದ ಕೆಳಗಿಳಿದು ನವೀನ್ ಪಟ್ನಾಯಕ್ ಅವರನ್ನು ವೇದಿಕೆಗೆ ಕರೆದೊಯ್ಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಮಾಜಿ ಸಿಎಂ ನವೀನ್ ಪಟ್ನಾಯಕ್ ಅವರು ರಾಷ್ಟ್ರಪತಿಗಳನ್ನು ಕಂಡ ಕೂಡಲೇ ವೇದಿಕೆ ಬಳಿ ತೆರಳಿ ನಮಸ್ಕರಿಸಿದ್ದಾರೆ. ಆಗ ವೇದಿಕೆಯಲ್ಲಿ ಕುಳಿತಿದ್ದ ಕ್ಯಾಬಿನೆಟ್ ಸಚಿವ ಧರ್ಮೇಂದ್ರ ಪ್ರಧಾನ್, ತಕ್ಷಣವೇ ಕೆಳಗಿಳಿದು, ಪಟ್ನಾಯಕ್ ಅವರ ಕೈ ಹಿಡಿದು, ವೇದಿಕೆಯ ಮೇಲೆ ಕರೆದುಕೊಂಡು ಬಂದು ತಮ್ಮ ಕುರ್ಚಿ ಬಳಿ ಕೂರಿಸಿ ಗೌರವ ತೋರಿದ್ದಾರೆ.  ಇಂತಹ ಕ್ಷಣಗಳು ರಾಜಕೀಯ ಧುರೀಣರು ಯಾವ ರೀತಿ ಪರಸ್ಪರ ಗೌರವ ಕೊಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.

ವೈರಲ್ ವಿಡಿಯೊ

ನವೀನ್ ಪಟ್ನಾಯಕ್ ಅವರು ಹಮ್ಮು ಬಿಮ್ಮು ಇಲ್ಲದೆ ವೇದಿಕೆಯ ಬಳಿ ಬಂದು ರಾಷ್ಟ್ರಪತಿಯವರಿಗೆ ನಮಸ್ಕರಿಸುತ್ತಿರುವುದು ಒಂದೆಡೆಯಾದರೆ ವೇದಿಕೆಯಿಂದ ಕೆಳಗಿಳಿದು ಬಂದು ಅವರನ್ನು ವೇದಿಕೆಗೆ ಕರೆದೊಯ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ನಡೆ ಅಭಿನಂದನಾರ್ಹವಾಗಿದೆ.

ರಾಜಕೀಯದಲ್ಲಿ ಅಧಿಕಾರ ಬದಲಾದಂತೆ ನಡವಳಿಕೆಯೂ ಬದಲಾಗುತ್ತದೆ. ಆದರೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವಿರೋಧ ಪಕ್ಷದ ನಾಯಕ ಎಂದು ಲೆಕ್ಕಿಸದೆ ಒಡಿಶಾದ ಮಾಜಿ ಮುಖ್ಯಮಂತ್ರಿ ಬಳಿಗೆ ಬಂದು ಆತ್ಮೀಯವಾಗಿ ಸ್ವಾಗತಿಸಿದ್ದಲ್ಲದೆ, ವೇದಿಕೆ ಮೇಲೆ ಕರೆತಂದು ಕೂರಿಸಿದರು. ರಾಜಕೀಯದಲ್ಲಿ ಇಂತಹ ಅಪರೂಪದ ದೃಶ್ಯಗಳು ಕಾಣಸಿಗುವುದು ಅಪರೂಪ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ವೇದಿಕೆಯಲ್ಲಿದ್ದರು.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು

ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳವನ್ನು ಕೆಳಗಿಳಿಸಿ ಅಧಿಕಾರಕ್ಕೇರಿಕ್ಕು. 147 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ 78 ಸ್ಥಾನಗಳನ್ನು ಗೆದ್ದರೆ, ಬಿಜೆಡಿ 51 ಸ್ಥಾನಗಳನ್ನು ಗೆದ್ದಿದೆ. ನವೀನ್ ಪಟ್ನಾಯಕ್ ಅವರು ತಮ್ಮ ಸ್ವಂತ ಸ್ಥಾನದಲ್ಲೇ ಸೋತಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಚಾಮರಾಜನಗರ: ಸೆಲ್ಫಿ ಶೋಕಿಗೆ ಡೆಡ್ಲಿ ಸ್ಪಾಟ್ ತಲುಪಿ ಪ್ರವಾಸಿಗರ ಹುಚ್ಚಾಟ!
ಚಾಮರಾಜನಗರ: ಸೆಲ್ಫಿ ಶೋಕಿಗೆ ಡೆಡ್ಲಿ ಸ್ಪಾಟ್ ತಲುಪಿ ಪ್ರವಾಸಿಗರ ಹುಚ್ಚಾಟ!
ಭಾನುವಾರ ಮನೆ ಬಳಿ ಪೌರ ಕಾರ್ಮಿಕರಿಗೆ ಸೆಲ್ಫಿ ನೀಡಿದ ನಟ ಧ್ರುವ ಸರ್ಜಾ
ಭಾನುವಾರ ಮನೆ ಬಳಿ ಪೌರ ಕಾರ್ಮಿಕರಿಗೆ ಸೆಲ್ಫಿ ನೀಡಿದ ನಟ ಧ್ರುವ ಸರ್ಜಾ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ
ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ
ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ