ನವಜಾತ ಹೆಣ್ಣು ಶಿಶುವನ್ನು ಎಸೆಯಲು ಯತ್ನ, ತಂದೆಯ ಬಂಧನ

ನವಜಾತ ಹೆಣ್ಣು ಶಿಶುವನ್ನು ಎಸೆಯಲು ಹೋಗಿದ್ದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಸಂಜೆ ಗಾಂಧಿನಗರ ಜಂಕ್ಷನ್‌ನಲ್ಲಿರುವ ಭಾರತ್ ಪೆಟ್ರೋಲ್ ಪಂಪ್ ಬಳಿ ಈ ಘಟನೆ ಸಂಭವಿಸಿದೆ. ಪೊಲೀಸ್ ಕಾನ್‌ಸ್ಟೆಬಲ್ ಸತೀಶ್ ಸಸಾನೆ ಅವರು ವ್ಯಕ್ತಯೊಬ್ಬ ಕೊಳಕು ಬಟ್ಟೆಯಲ್ಲಿ ಏನೋ ಸುತ್ತಿಕೊಂಡು ಹೊತ್ತುಕೊಂಡು ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ, ಆತನ ವರ್ತನೆ ಅನುಮಾನಾಸ್ಪದವಾಗಿತ್ತು. ರಿಕ್ಷಾವನ್ನು ನಿಲ್ಲಿಸಿ ಬಟ್ಟೆಯನ್ನು ಪರಿಶೀಲಿಸಿದಾಗ, ನವಜಾತ ಹೆಣ್ಣು ಮಗುವನ್ನು ಕಂಡು ದಿಗ್ಭ್ರಮೆಗೊಂಡರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ನವಜಾತ ಹೆಣ್ಣು ಶಿಶುವನ್ನು ಎಸೆಯಲು ಯತ್ನ, ತಂದೆಯ ಬಂಧನ
ಮಗು
Image Credit source: Pexels

Updated on: May 27, 2025 | 12:37 PM

ಮುಂಬೈ, ಮೇ 27: ನವಜಾತ ಹೆಣ್ಣು ಶಿಶು(Girl Baby)ವನ್ನು ಎಸೆಯಲು ಹೋಗಿದ್ದ 28 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಸಂಜೆ ಗಾಂಧಿನಗರ ಜಂಕ್ಷನ್‌ನಲ್ಲಿರುವ ಭಾರತ್ ಪೆಟ್ರೋಲ್ ಪಂಪ್ ಬಳಿ ಈ ಘಟನೆ ಸಂಭವಿಸಿದೆ. ಪೊಲೀಸ್ ಕಾನ್‌ಸ್ಟೆಬಲ್ ಸತೀಶ್ ಸಸಾನೆ ಅವರು ವ್ಯಕ್ತಿ ಯೊಬ್ಬ ಕೊಳಕು ಬಟ್ಟೆಯಲ್ಲಿ ಏನೋ ಸುತ್ತಿಕೊಂಡು ಹೊತ್ತುಕೊಂಡು ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ, ಆತನ ವರ್ತನೆ ಅನುಮಾನಾಸ್ಪದವಾಗಿತ್ತು. ರಿಕ್ಷಾವನ್ನು ನಿಲ್ಲಿಸಿ ಬಟ್ಟೆಯನ್ನು ಪರಿಶೀಲಿಸಿದಾಗ, ನವಜಾತ ಹೆಣ್ಣು ಮಗುವನ್ನು ಕಂಡು ದಿಗ್ಭ್ರಮೆಗೊಂಡರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಆ ವ್ಯಕ್ತಿಯೊಂದಿಗೆ ಯಾವುದೇ ಮಹಿಳೆ ಇಲ್ಲದ ಕಾರಣ, ಪೊಲೀಸರು ಅನುಮಾನಗೊಂಡು ತಕ್ಷಣ ನಿರ್ಭಯಾ ಸ್ಕ್ವಾಡ್‌ನ ಮಹಿಳಾ ಅಧಿಕಾರಿಯನ್ನು ಕರೆಸಿದರು. ಇದು ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಲು ಮುಂಬೈ ಪೊಲೀಸ್ ವಿಶೇಷ ಉಪಕ್ರಮವಾಗಿದೆ. ಅಧಿಕಾರಿ ಆಗಮಿಸಿದ ನಂತರ, ಆರೋಪಿಯು ಆತಂಕಗೊಂಡಿದ್ದಾನೆ ಮತ್ತು ಮಗು ತನ್ನ ಸ್ವಂತ ಮಗಳು,ತನ್ನ ಅಕ್ರಮ ಸಂಬಂಧದಿಂದ ಜನಿಸಿದ ಮಗು ಎಂದು ಹೇಳಿದ್ದಾನೆ.

ಅಧಿಕಾರಿಯೊಬ್ಬರು ನೀಡಿದ ಮಾಹಿತಿಯ ಪ್ರಕಾರ, ಆರೋಪಿಯು ಇತ್ತೀಚೆಗೆ ವಿವಾಹಿತನಾಗಿದ್ದು, ವರದಿಯ ಪ್ರಕಾರ, ತನ್ನ ಚಿಕ್ಕಮ್ಮನೊಂದಿಗೆ ನಾಲ್ಕು ವರ್ಷಗಳ ಕಾಲ ಸಂಬಂಧ ಹೊಂದಿದ್ದ. ಆಕೆಯು ಮಗುವಿಗೆ ಜನ್ಮ ನೀಡಿದಳು. ಸಂಬಂಧ ಬಹಿರಂಗವಾದರೆ ಸಾಮಾಜಿಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಭಯದಿಂದ, ಆರೋಪಿಯು ತನ್ನ ಚಿಕ್ಕಮ್ಮನನ್ನು ದಾರಿ ತಪ್ಪಿಸಿ, ಮಗುವನ್ನು ಪೊವಾಯಿಯಲ್ಲಿರುವ ಸ್ನೇಹಿತನ ಮನೆಗೆ ಕರೆದೊಯ್ಯುವುದಾಗಿ ಹೇಳಿದ್ದಾನೆ.

ಮತ್ತಷ್ಟು ಓದಿ: ಪ್ರೀತಿ ದೈಹಿಕ ಸಂಪರ್ಕಕ್ಕೆ ತಿರುಗಿ ಮಗು ಜನನ: ಅಪ್ರಾಪ್ತೆಗೆ ಹುಟ್ಟಿದ ಶಿಶು ಕಸದ ಬುಟ್ಟಿಗೆ..!

 

ಬಳಿಕ ಎಲ್ಲಾದರೂ ಎಸೆದು ಹೋಗಲು ನಿರ್ಧರಿಸಿದ್ದ. ಪಾರ್ಕ್‌ಸೈಟ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸಂತೋಷ್ ಘಟೇಕರ್ ಮಾತನಾಡಿ, ಮಗು ಸುರಕ್ಷಿತವಾಗಿ ತನ್ನ ತಾಯಿಯೊಂದಿಗೆ ಮತ್ತೆ ಸೇರಿಕೊಂಡಿದೆ ಮತ್ತು ಇಬ್ಬರನ್ನೂ ಆರೈಕೆ ಮತ್ತು ನಿಗಾ ಇರಿಸಲು ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 91 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮುಂಬೈನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ 9 ವರ್ಷದ ಯುವಕನೊಬ್ಬ 17 ವರ್ಷದ ಬಾಲಕಿಯ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ. ಸಂಬಂಧದ ಪ್ರಸ್ತಾಪವನ್ನು ನಿರಾಕರಿಸಿದ ಕಾರಣ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಪ್ರಸ್ತುತ ಶತಾಬ್ದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ಸಂಜಯ್ ನಗರದ ಗೋಸಾಲಿಯಾ ರಸ್ತೆಯಲ್ಲಿ ಹುಡುಗಿ ತನ್ನ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ದಾಳಿ ನಡೆದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:33 pm, Tue, 27 May 25

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us