AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಬಾಡಿಗೆ ತಾಯಿ ಮೂಲಕ ಮಗು ಕೊಡಿಸುತ್ತೇನೆಂದು ಕದ್ದ ಶಿಶು ನೀಡಿದ ವೈದ್ಯೆಗೆ 10 ವರ್ಷ ಜೈಲು

ಬಾಡಿಗೆ ತಾಯಿ ಮೂಲಕ ಮಗು ನೀಡುವುದಾಗಿ ವಂಚಿಸಿ, ಬಿಬಿಎಂಪಿ ಆಸ್ಪತ್ರೆಯಿಂದ ಶಿಶುವನ್ನು ಕದ್ದು ದಂಪತಿಗೆ ನೀಡಿದ್ದ ಪ್ರಕರಣದಲ್ಲಿ ಬೆಂಗಳೂರಿನ ಮನೋವೈದ್ಯೆ ರಶ್ಮಿ ಎಂಬವರಿಗೆ 10 ವರ್ಷ ಜೈಲು ಹಾಗೂ 1 ಲಕ್ಷ ರೂ. ದಂಡ ವಿಧಿಸಲಾಗಿದೆ. ಉತ್ತರ ಕರ್ನಾಟಕ ಮೂಲದ ದಂಪತಿಯಿಂದ ರಶ್ಮಿ 14.5 ಲಕ್ಷ ರೂಪಾಯಿ ಪಡೆದಿದ್ದರು. ಸಿನಿಮೀಯ ರೀತಿಯಲ್ಲಿ ನಡೆದಿದ್ದ ಪ್ರಕರಣದ ತನಿಖೆ, ನಂತರದ ಬೆಳವಣಿಗೆಗಳು ಕೂಡ ಅಚ್ಚರಿಯಿಂದ ಕೂಡಿದ್ದವು. ಪೂರ್ಣ ವಿವರ ಇಲ್ಲಿದೆ.

ಬೆಂಗಳೂರು: ಬಾಡಿಗೆ ತಾಯಿ ಮೂಲಕ ಮಗು ಕೊಡಿಸುತ್ತೇನೆಂದು ಕದ್ದ ಶಿಶು ನೀಡಿದ ವೈದ್ಯೆಗೆ 10 ವರ್ಷ ಜೈಲು
ಸಾಂದರ್ಭಿಕ ಚಿತ್ರ
Ganapathi Sharma
|

Updated on: Feb 28, 2025 | 11:11 AM

Share

ಬೆಂಗಳೂರು, ಫೆಬ್ರವರಿ 28: ಬಾಡಿಗೆ ತಾಯಿ ಮೂಲಕ ಮಗುವನ್ನು ಮಾಡಿಸಿಕೊಡುತ್ತೇನೆಂದು ದಂಪತಿಯನ್ನು ವಂಚಿಸಿ ಬೇರೊಬ್ಬ ಮಹಿಳೆಯ ಮಗುವನ್ನು ಕದ್ದು ಅವರಿಗೆ ನೀಡಿದ ಅಪರೂಪದ ಪ್ರಕರಣವೊಂದರಲ್ಲಿ ಬೆಂಗಳೂರಿನ ಮನೋವೈದ್ಯೆಗೆ 10 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. 2020 ರಲ್ಲಿ ಬಿಬಿಎಂಪಿ ಆಸ್ಪತ್ರೆಯಿಂದ ನವಜಾತ ಶಿಶುವನ್ನು ಅಪಹರಿಸಿದ್ದ ವೈದ್ಯೆ, ಮತ್ತೊಂದು ದಂಪತಿಯಿಂದ 14.5 ಲಕ್ಷ ಪಡೆದು ಅವರಿಗೆ ನೀಡಿದ್ದರು. ಶಿಕ್ಷೆಗೆ ಒಳಗಾಗಿರುವ ವೈದ್ಯೆ ಬೆಂಗಳೂರಿನ ನಾಗರಭಾವಿಯ ರಶ್ಮಿ ಎಂಬುವವರಾಗಿದ್ದಾರೆ.

ಜಡ್ಜ್ ಸಿಬಿ ಸಂತೋಷ್ ಅವರು ತೀರ್ಪು ಪ್ರಕಟಿಸಿದ್ದು, ಇದೇ ವೇಳೆ ವೈದ್ಯೆ ರಶ್ಮಿ ನ್ಯಾಯಾಲಯದಲ್ಲಿ ಹಾಜರಿದ್ದರು. ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ರಶ್ಮಿ, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅವರನ್ನು ತೀರ್ಪು ಪ್ರಕಟವಾದ ಬೆನ್ನಲ್ಲೇ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.

ಬಾಣಂತಿಗೆ ಔಷಧ ಕೊಟ್ಟು, ಮಗು ಕಳವು

2020 ರ ಮೇ 29 ರಂದು ಚಾಮರಾಜಪೇಟೆಯ ಬಿಬಿಎಂಪಿ ಆಸ್ಪತ್ರೆಯಿಂದ ನವಜಾತ ಶಿಶುವನ್ನು ಕದ್ದೊಯ್ಯಲಾಗಿತ್ತು. ಆಗ ತಾನೇ ಹೆರಿಗೆಯಾಗಿದ್ದ ಮಗುವಿನ ತಾಯಿ ವೈದ್ಯರು ಸೂಚಿಸಿದ ಔಷಧಿಗಳನ್ನು ತೆಗೆದುಕೊಂಡ ನಂತರ ನಿದ್ರೆಗೆ ಜಾರಿದ್ದರು. 45 ನಿಮಿಷಗಳ ನಂತರ ಎಚ್ಚರವಾದಾಗ, ಮಗು ಕಾಣೆಯಾಗಿತ್ತು. ನಂತರ ಆ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಆದರೆ, ಮಗುವನ್ನು ಪತ್ತೆ ಹಚ್ಚಿ ರಶ್ಮಿಯನ್ನು ಬಂಧಿಸಲು ಸುಮಾರು ಒಂದು ವರ್ಷ ಬೇಕಾಯಿತು.

ಇದನ್ನೂ ಓದಿ
Image
ಕೋಟೆಕಾರು ದರೋಡೆ: ಪ್ರಮುಖ ಸೂತ್ರಧಾರ ಭಾಸ್ಕರ್ ಬೆಳ್ಚಪಾಡನ ಹಿನ್ನೆಲೆಯೇ ರೋಚಕ
Image
ಟ್ರಾಫಿಕ್ ಫೈನ್: ಆ್ಯಪ್ ಡೌನ್​ಲೋಡ್ ಮಾಡಿದ ಬೆನ್ನಲ್ಲೇ 5.6 ಲಕ್ಷ ರೂ. ಮಾಯ!
Image
ಕಾರುಗಳಿಗೆ ಕರ್ನಾಟಕದಲ್ಲೇ ಹೆಚ್ಚು ತೆರಿಗೆ! ಕಡಿಮೆ ಮಾಡಲು ಸರ್ಕಾರಕ್ಕೆ ಪತ್ರ
Image
ಸರ್ಕಾರ vs ರಾಜಭವನ: ಮತ್ತೊಂದು ಮಸೂದೆ ವಾಪಸ್​ ಕಳುಹಿಸಿದ ರಾಜ್ಯಪಾಲ

ಮಗುವಿನ ಮೊದಲ ಬರ್ತ್​ಡೇ ಆಚರಿಸುತ್ತಿದ್ದಾಗ ಪೊಲೀಸರ ಎಂಟ್ರಿ

ವೈದ್ಯೆ ರಶ್ಮಿ ನೀಡಿದ ಮಗು ತಮ್ಮದೇ, ಬಾಡಿಗೆ ತಾಯ್ತನದ ಮೂಲಕ ಜನಿಸಿದೆ ಎಂದೇ ಉತ್ತರ ಕರ್ನಾಟಕ ಮೂಲದ ದಂಪತಿ ಭಾವಿಸಿದ್ದರು. 2021 ರ ಮೇ 29 ರಂದು ಮಗುವಿನ ಮೊದಲ ಹುಟ್ಟುಹಬ್ಬವನ್ನು ಸಂತೋಷದಿಂದ ಆಚರಿಸುತ್ತಿದ್ದಾಗಲೇ ಅವರಿಗೆ ಆಘಾತ ಕಾದಿತ್ತು. ಪೊಲೀಸ್ ಅಧಿಕಾರಿಗಳು ಅವರ ಮನೆಗೆ ಆಗಮಿಸಿ ಮಗುವಿನ ಮಾಹಿತಿ ಕಲೆಹಾಕಿದರು. ಆದರೆ ಆ ದಂಪತಿಗೆ ವಂಚನೆಯ ಅರಿವಿರಲಿಲ್ಲ.

300 ಸಿಸಿಟಿವಿ ದೃಶ್ಯ, 5 ಸಾವಿರ ಫೋನ್ ಕರೆ ವಿಶ್ಲೇಷಣೆ

ಮಗು ಕಳವು ಪ್ರಕರಣದ ತನಿಖೆ ತೀವ್ರಗೊಳಿಸಿದ್ದ ಪೊಲೀಸರು 700 ಕ್ಕೂ ಹೆಚ್ಚು ಸಾಕ್ಷಿಗಳ ಸಂದರ್ಶನ, 300 ಸಿಸಿಟಿವಿ ರೆಕಾರ್ಡಿಂಗ್‌ಗಳು ಮತ್ತು 5,000 ಫೋನ್ ಕರೆ ದಾಖಲೆಗಳನ್ನು ಪರಿಶೀಲಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ಪೊಲೀಸರು ಶಂಕಿತ ವ್ಯಕ್ತಿಯ ರೇಖಾಚಿತ್ರವನ್ನು ರಚಿಸಿದ್ದರು. ಕೊನೆಯಲ್ಲಿ ವೈದ್ಯೆ ರಶ್ಮಿ ಮತ್ತು ಉತ್ತರ ಕರ್ನಾಟಕ ಮೂಲದ ದಂಪತಿ ಬಗ್ಗೆ ಅನುಮಾನ ಮೂಡಿತ್ತು.

ವೈದ್ಯೆ ರಶ್ಮಿ ಮಾಡಿದ ಮೋಸವೇನು?

ಪೊಲೀಸರ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದ್ದ ಪ್ರಕಾರ, ವೈದ್ಯೆ ರಶ್ಮಿ 2015 ರಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ ದಂಪತಿಯನ್ನು ಭೇಟಿಯಾಗಿದ್ದರು. ಅವರಿಗೆ ಮಗುವಿನ ಅಗತ್ಯವಿದ್ದು, ಅವರಾಗಿಯೇ ಮಗುವಿನ ಜನ್ಮಕೊಡುವ ಸ್ಥಿತಿಯಲ್ಲಿರಲಿಲ್ಲ. ಇದನ್ನೇ ಬಂಡವಾಳವಾಗಿಸಿಕೊಂಡಿದ್ದ ರಶ್ಮಿ, ಬಾಡಿಗೆ ತಾಯ್ತನದ ಮೂಲಕ ಮಗು ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದರು. ಬೆಂಗಳೂರಿನಲ್ಲಿ ಬಾಡಿಗೆ ತಾಯಿಯನ್ನು ಕಂಡುಕೊಂಡಿದ್ದೇನೆ ಎಂದು 2019ರಲ್ಲಿ ದಂಪತಿ ಬಳಿ ಸುಳ್ಳು ಹೇಳಿ ಅವರಿಂದ ಜೈವಿಕ ಮಾದರಿಗಳನ್ನು ಸಂಗ್ರಹಿಸಿದ್ದರು. ಅಲ್ಲದೆ, ಬಾಡಿಗೆ ತಾಯ್ತನದ ವೆಚ್ಚವೆಂದು 14.5 ಲಕ್ಷ ರೂ. ಪಡೆದುಕೊಂಡಿದ್ದರು.

ಮಗುವನ್ನು ನೀಡಿದ್ದು ಎಲ್ಲಿಂದ?

ದಂಪತಿಯಿಂದ ದುಡ್ಡು ತೆಗೆದುಕೊಂಡ ವೈದ್ಯೆ ರಶ್ಮಿ, ಗಡುವು ಸಮೀಪಿಸುತ್ತಿದ್ದಂತೆಯೇ ಶಿಶು ಕಳವು ಮಾಡಲು ಸ್ಕೆಚ್ ಹಾಕಿದ್ದಾರೆ. ಹೆಚ್ಚಿನ ಭದ್ರತೆ ಇಲ್ಲದ ಬಿಬಿಎಂಪಿ ಆಸ್ಪತ್ರೆಯನ್ನು ಕಂಡುಕೊಂಡಿದ್ದಾರೆ. ಆಸ್ಪತ್ರೆಯ ಹೆರಿಗೆ ವಾರ್ಡ್‌ಗೆ ಹಲವು ಬಾರಿ ಭೇಟಿ ಪರಿಶೀಲನೆ ನಡೆಸಿದ್ದ ಆಕೆ, ಮೇ 29 ರಂದು, ತಾಯಿಗೆ ನಿದ್ರೆ ಮಾತ್ರೆಗಳನ್ನು ನೀಡುವಂತೆ ಆಸ್ಪತ್ರೆಯ ಶುಷ್ರೂಕಿಯರಿಗೆ ಸೂಚಿಸಿದ್ದರು. ತಾಯಿ ನಿದ್ದೆ ಮಾಡಿದ ನಂತರ, ಮಗುವನ್ನು ತೆಗೆದುಕೊಂಡು ಹೊರಟುಹೋಗಿದ್ದರು. ನಂತರ ಮಗುವನ್ನು ವಿಜಯನಗರದಲ್ಲಿರುವ ಸ್ನೇಹಿತನ ಮನೆಯಲ್ಲಿ ದಂಪತಿಗೆ ಒಪ್ಪಿಸಿದ್ದರು.

ಇದನ್ನೂ ಓದಿ: 5 ವರ್ಷದ ಮಗು ಮೇಲೆ ಅತ್ಯಾಚಾರವೆಸಗಿ ಚಿತ್ರಹಿಂಸೆ; ಬಾಲಕಿಯ ಗುಪ್ತಾಂಗಕ್ಕೆ 28 ಹೊಲಿಗೆ!

ಪೊಲೀಸರ ವಿಚಾರಣೆಯು ಹಲವು ಭಾವನಾತ್ಮಕ ಸನ್ನಿವೇಶಗಳಿಗೂ ಸಾಕ್ಷಿಯಾಗಿತ್ತು. ಡಿಎನ್ಎ ಪರೀಕ್ಷೆಗಳು ಕೂಡ ಮಗುವಿನ ಬಯಾಲಾಜಿಕಲ್ ಪೋಷಕರನ್ನು ಸಾಬೀತುಪಡಿಸಿವೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಬಿಎಚ್ ​​ಭಾಸ್ಕರ್ ದೃಢಪಡಿಸಿದ್ದರು. ವೈದ್ಯೆ ರಶ್ಮಿ ಉತ್ತರ ಕರ್ನಾಟಕ ದಂಪತಿಯಿಂದ 14.5 ಲಕ್ಷ ರೂ. ಪಡೆದಿರುವುದು ಬ್ಯಾಂಕ್ ದಾಖಲೆಗಳಿಂದ ತಿಳಿದುಬಂದಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!