AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ವರ್ಷದ ಮಗು ಮೇಲೆ ಅತ್ಯಾಚಾರವೆಸಗಿ ಚಿತ್ರಹಿಂಸೆ; ಬಾಲಕಿಯ ಗುಪ್ತಾಂಗಕ್ಕೆ 28 ಹೊಲಿಗೆ!

ಮಧ್ಯಪ್ರದೇಶದಲ್ಲಿ ಕುಡಿತದ ಅಮಲಿನಲ್ಲಿದ್ದ ಪಕ್ಕದ ಮನೆಯ ಯುವಕನೊಬ್ಬ 5 ವರ್ಷದ ಪುಟ್ಟ ಮಗುವನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಆಕೆಯ ಮೇಲೆ ಅತ್ಯಾಚಾರ ಮಾಡಿ, ಆಕೆಯನ್ನು ಕಚ್ಚಿ, ಆಕೆಯ ತಲೆಯನ್ನು ಗೋಡೆಗೆ ಬಡಿದ ಆಘಾತಕಾರಿ ಘಟನೆ ನಡೆದಿದೆ. ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದರೂ ಆ ಮಗುವಿನ ಸ್ಥಿತಿ ಇನ್ನೂ ಗಂಭೀರವಾಗಿದೆ. 5 ದಿನಗಳ ಹಿಂದೆ ನಡೆದ ಅತ್ಯಾಚಾರದ ನಂತರ ಆಕೆಗೆ ಪ್ರಜ್ಞೆ ಬಂದಿದ್ದರೂ ಆಕೆ ಇನ್ನೂ ಮಾತನಾಡುತ್ತಿಲ್ಲ. ಆ ಮಗುವಿನ ಖಾಸಗಿ ಭಾಗಗಳಿಗೆ 28 ​​ಹೊಲಿಗೆಗಳನ್ನು ಹಾಕಿ ಆಪರೇಷನ್ ಮಾಡಲಾಗಿದೆ.

5 ವರ್ಷದ ಮಗು ಮೇಲೆ ಅತ್ಯಾಚಾರವೆಸಗಿ ಚಿತ್ರಹಿಂಸೆ; ಬಾಲಕಿಯ ಗುಪ್ತಾಂಗಕ್ಕೆ 28 ಹೊಲಿಗೆ!
Child Sexual Harassment
ಸುಷ್ಮಾ ಚಕ್ರೆ
|

Updated on: Feb 27, 2025 | 10:02 PM

Share

ಭೋಪಾಲ್: ಮಧ್ಯಪ್ರದೇಶದಲ್ಲಿ 5 ವರ್ಷದ ಮಗುವಿನ ಮೇಲೆ ಭೀಕರವಾಗಿ ಅತ್ಯಾಚಾರ ನಡೆಸಲಾಗಿದೆ. ಮಧ್ಯಪ್ರದೇಶದ (Madhya Pradesh) ಶಿವಪುರಿ ಜಿಲ್ಲೆಯಲ್ಲಿ ಐದು ವರ್ಷದ ಬಾಲಕಿಯ ಮೇಲೆ ಆಕೆಯ 17 ವರ್ಷದ ಪಕ್ಕದ ಮನೆಯ ಯುವಕ ಅತ್ಯಾಚಾರ ಎಸಗಿದ್ದಾನೆ. ಇದಾದ ನಂತರ ಆಕೆ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದಾಳೆ. ಗ್ವಾಲಿಯರ್‌ನ ಕಮಲ ರಾಜಾ ಆಸ್ಪತ್ರೆಯ ವೈದ್ಯರು ಆಕೆಯ ಗುಪ್ತಾಂಗಗಳಲ್ಲಿ 28 ಹೊಲಿಗೆಗಳನ್ನು ಹಾಕಿದ್ದು, ಕೊಲೊಸ್ಟೊಮಿ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಹೇಳಿದ್ದಾರೆ. ಅತ್ಯಾಚಾರ ನಡೆಸಿದ ಆರೋಪಿ 17 ವರ್ಷದ ಬಾಲಕನಾಗಿದ್ದು, ಆತನನ್ನು ಬಂಧಿಸಲಾಗಿದೆ. ಬಾಲಾಪರಾಧಿ ಎಂದು ಆತನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ ಸಮಯದಲ್ಲಿ ಆರೋಪಿಯು ಆಲ್ಕೋಹಾಲ್ ಕುಡಿದಿದ್ದ ಕಾರಣದಿಂದ ಅತ್ಯಾಚಾರ ನಡೆಸಿದ ಬಳಿಕ 5 ವರ್ಷದ ಮಗುವಿನ ತಲೆಯನ್ನು ಗೋಡೆಗೆ ಹಲವಾರು ಬಾರಿ ಬಡಿದು, ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಗೆ ಗಾಯಗಳಲ್ಲದೆ, ಆಕೆಯ ದೇಹ ಮತ್ತು ಖಾಸಗಿ ಭಾಗಗಳಲ್ಲಿ ಕಚ್ಚಿದ ಗುರುತುಗಳಾಗಿವೆ. ವೈದ್ಯರು ಎರಡು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿದ್ದರೂ ಆಕೆಯ ಸ್ಥಿತಿ ಇನ್ನೂ ಗಂಭೀರವಾಗಿದೆ. 5 ದಿನಗಳ ಹಿಂದೆ ನಡೆದ ಹಲ್ಲೆಯ ನಂತರ ಆಕೆ ಒಂದೂ ಮಾತನಾಡಿಲ್ಲ.

ಇದನ್ನೂ ಓದಿ: ಪುಣೆ: ಅಕ್ಕಾ ಎಂದು ಕರೆದು ಅತ್ಯಾಚಾರವೆಸಗಿದ ಕಾಮುಕ, ಆರೋಪಿ ಹುಡುಕಾಟಕ್ಕೆ 13 ಪೊಲೀಸ್​ ತಂಡ ರಚನೆ

ಶಿವಪುರಿಯ ನಿವಾಸಿಯಾಗಿರುವ ಮಗು ಫೆಬ್ರವರಿ 23ರಂದು ನಾಪತ್ತೆಯಾಗಿತ್ತು. ಸುಮಾರು 2 ಗಂಟೆಗಳ ನಂತರ ನೆರೆಹೊರೆಯ ಮನೆಯ ಟೆರೇಸ್‌ನಲ್ಲಿ ಪ್ರಜ್ಞಾಹೀನಳಾಗಿ ಮತ್ತು ರಕ್ತಸಿಕ್ತ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಳು.ಆರೋಪಿಗೆ ಮರಣದಂಡನೆ ವಿಧಿಸಬೇಕೆಂದು ಆಕೆಯ ಕುಟುಂಬ ಒತ್ತಾಯಿಸಿದೆ. “ಅವನನ್ನು ರಸ್ತೆಯಲ್ಲಿ ಬಹಿರಂಗವಾಗಿ ಕೊಲ್ಲಬೇಕು” ಎಂದು ಆಕೆಯ ತಾಯಿ ಹೇಳಿದ್ದಾರೆ. 5 ವರ್ಷದ ಹಾಲುಗಲ್ಲದ ಮಗುವಿನ ಮೇಲೆ ಅತ್ಯಂತ ಭಯಾನಕ ರೀತಿಯಲ್ಲಿ ನಡೆದ ಅತ್ಯಾಚಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಫೆಬ್ರವರಿ 23ರಂದು ಮದ್ಯದ ಅಮಲಿನಲ್ಲಿದ್ದ ಆರೋಪಿಯು ಆ ಮಗುವನ್ನು ಆಕೆಯ ಮನೆಯ ಟೆರೇಸಿನಿಂದ ಹತ್ತಿರದ ಪಾಳುಬಿದ್ದ ಕಟ್ಟಡಕ್ಕೆ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಂತರ ಪದೇ ಪದೇ ಆಕೆಯ ತಲೆಯನ್ನು ಗೋಡೆಗೆ ಹೊಡೆದಿದ್ದಾನೆ. ಹುಡುಗಿ ನಂತರ ಪ್ರಜ್ಞಾಹೀನಳಾಗಿ ಕಂಡುಬಂದಳು. ಪ್ರಜ್ಞೆ ಮರಳಿದ ನಂತರ ಅವಳನ್ನು ಹುಡುಕುತ್ತಾ ಬಂದ ಆಕೆಯ ಅಣ್ಣಂದಿರು ಆರೋಪಿಯನ್ನು ನೋಡಿ ಕಿರುಚಿದ್ದಾರೆ. ಅವರ ಕಿರುಚಾಟ ಕೇಳಿ ಆ ಯುವಕ ಓಡಿ ಹೋಗಿದ್ದಾನೆ. 2 ಗಂಟೆಗಳ ಕಾಲ ತೀವ್ರ ಹುಡುಕಾಟದ ನಂತರ, ಆ ಹುಡುಗಿಯ ಪೋಷಕರು ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡುಕೊಂಡರು. ನಂತರ ತಕ್ಷಣ ಆಸ್ಪತ್ರೆಗೆ ಸೇರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ