ಮಹಿಳೆಯರು ಎಲ್ಲಾ ರಂಗಗಳಲ್ಲೂ ಜಯಭೇರಿ ಬಾರಿಸುತ್ತಿದ್ದಾರೆ. ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಆದರೆ ಈ ಯುಗದಲ್ಲೂ ಮಹಿಳಾ ಸಂತತಿ ಬೇಡ ಎನ್ನುವವರೂ ಇದ್ದಾರೆ. ಇಲ್ಲೊಂದು ದಂಪತಿ ಗಂಡು ಸಂತಾನ ಬೇಕು ಎಂದು ಏನೆಲ್ಲ ಅಸಹಜ, ಪ್ರಕೃತಿ ವಿರುದ್ಧದ ಕೆಲಸಗಳನ್ನು ಮಾಡಿದ್ದಾರೆ ಎಂಬುದನ್ನು ಕೇಳಿ ತಿಳಿದರೆ ಹೌಹಾರುವುದು ನಿಶ್ಚಿತ.
ಪತಿಯ ಆಣಿತಿಯಂತೆ, ಆಸೆಯಂತೆ 40 ವರ್ಷದ ಮಹಿಳೆ 8 ಬಾರಿ ತನ್ನ ಭ್ರೂಣವನ್ನು ತೆಗೆಸಿಕೊಂಡಿದ್ದಾಳೆ. ಅದೂ ಸಾಲದು ಅಂತಾ ಪುತ್ರನ ಬಯಸಿ ಆ ಮಹಿಳೆಗೆ ಅದೆಂತಹುದ್ದೋ 1,500 ಸ್ಟಿರಾಯ್ಡ್ಗಳನ್ನು (steroids) ನೀಡಲಾಗಿದೆ.
ಪುತ್ರ ಜೀವ ಬಯಸಿ ಆಕೆಯ ಜೀವ ಬಸಿದರು
ಸದರಿ ಮಹಿಳೆ ಮುಂಬೈನ ದಾದರ್ ಭಾಗದ ನಿವಾಸಿ. ಗಂಡನ ಬಲವಂತದಿಂದ ಬಸವಳಿದಿದ್ದ ಮಹಿಳೆ ಕೊನೆಗೂ ತನ್ನ ಗಂಡನ ಕಾಟದ ವಿರದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಸುಶಿಕ್ಷಿತ ಕುಟುಂಬದ ತಂದೆಯೊಬ್ಬರು 2017ರಲ್ಲಿ ತಮ್ಮ ಮಗಳನ್ನು ಸುಶಿಕ್ಷಿತ ಕುಟುಂಬದ ವರನಿಗೆ ಧಾರೆಯೆದಿದ್ದರು. ಗಂಡ ಮತ್ತು ಅತ್ತೆ ಲಾಯರ್ಗಳು. ಮತ್ತು ನಾದಿನಿ ವೈದ್ಯೆ!
ಆಸ್ತಿಗೆ ವಾರಸುದಾರ ಬೇಕು ಎಂದು ಗಂಡು ಸಂತತಿಗಾಗಿ ಪತ್ನಿಗೆ ನರಕ ತೋರಿಸುತ್ತಿದ್ದ
ಅಷ್ಟಕ್ಕೂ ಆ ಸುಶಿಕ್ಷಿತ ಗಂಡ ಇಷ್ಟೆಲ್ಲಾ ತನ್ನ ಪತ್ನಿಗೆ ಕಾಟ ಕೊಟ್ಟಿದ್ದು ಏಕೆಂದರೆ ಆತ ಆಗರ್ಭ ಶ್ರೀಮಂತ. ತನ್ನ ಆಸ್ತಿಗೆ ವಾರಸುದಾರ ಬೇಕು ಎಂದು ಗಂಡು ಸಂತತಿಗಾಗಿ ಪತ್ನಿಗೆ ನರಕ ತೋರಿಸುತ್ತಿದ್ದ. 2009 ಮತ್ತು 2011 ರಲ್ಲಿ ತಾನು ಹೆಣ್ಣು ಮಗುವಿಗೆ ಜನ್ಮ ನೀಡಿದೆ. ಅದಾದ ಮೇಲೆ ಹೆಣ್ಣು ಮಗು ಅಗುತ್ತದೆ ಎಂದು ಅನೇಕ ಬಾರಿ ಗಂಡ ತನಗೆ ಅಬಾರ್ಷನ್ ಮಾಡಿಸಿದ.
ಕೊನೆಗೆ ನಾನು ತಿರುಗಿಬೀಳತೊಡಗಿದೆ. ಅದರಿಂದ ನನ್ನ ಮೇಲೆ ದೈಹಿಕ, ಮಾನಸಿಕ ದೌರ್ಜನ್ಯಗಳು ಹೆಚ್ಚಾದವು. ಈ ಮಧ್ಯೆ ಸ್ವತಃ ನನ್ನ ಗಂಡ ಸಹ ಗಂದು ಮಗು ಬೇಕೆಂದು ಟ್ವೀಟ್ಮೆಂಟ್ ತೆಗೆದುಕೊಳ್ಳಲು ಆರಂಭಿಸಿದ. ಆರೋಪಿ ಗಂಡ ತನ್ನ ಹೆಂಡತಿಯನ್ನು ಬ್ಯಾಂಕಾಕ್ಗೆ ಕರೆದುಕೊಂಡು ಹೋಗಿ ಪತ್ನಿಗೆ ಚಿಕಿತ್ಸೆ ಕೊಡಿಸಿದ. ಗಂಡು ಮಗುವೇ ಆಗಬೇಕೆಂದು 1500 ಹಾರ್ಮೋನ್ ವೃದ್ಧಿ, ಸ್ಟಿರಾಯ್ಡ್ಗಳನ್ನು ಕೊಡಿಸಿದ. ಭಾರತದಲ್ಲಿ ಇದನ್ನು ನಿಷೇಧಿಸಲಾಗಿದೆ ಎಂದು ಆತ ತನ್ನನ್ನು ಬ್ಯಾಂಕಾಕ್ಗೆ ಕರೆದೊಯ್ದು ಆ ಚಿಕಿತ್ಸೆಗಳನ್ನು ಕೊಡಿಸಿದ್ದ. ಆದರೆ ಇದಕ್ಕೆಲ್ಲ ಸುತರಾಂ ತನ್ನ ಒಪ್ಪಿಗೆ ಇರಲಿಲ್ಲ. ಬಲವಂತದಿಂದ ತನಗೆ ಮಾಡಿಸಿದರು ಎಂದು ಮಹಿಳೆ ಅಲವತ್ತುಕೊಂಡಿದ್ದಾಳೆ.
Covid Diary : ಕವಲಕ್ಕಿ ಮೇಲ್ ; ಪ್ರಾಣಿ ಪಕ್ಷಿಗಳಿಗೆ ತಾಯ್ತನ ತೋರಿಸುವವಳು ತಾನು ತಾಯಿ ಆಗಲಾರೆ ಎನ್ನುವಳಲ್ಲ?
(Mumbai Dadar Woman forced to abort 8 times given hormonal steroid injections in Bangkok just to conceive son)
Published On - 9:29 am, Wed, 18 August 21